ಪರ್ಸಂಟೇಜ್ ಸಿಸ್ಟಂನ ಜನಕ ಯಾರು ? ಬಿಎಸ್‌ವೈಗೆ ಎಚ್ಚರಿಕೆ ನೀಡಿದ ಸಿಎಂ
Team Udayavani, Sep 20, 2018, 11:18 AM IST
ಬೆಂಗಳೂರು : ಅಪ್ಪ ಮಕ್ಕಳ ಬಗ್ಗೆ ಚರ್ಚೆ ಮಾಡುವುದನ್ನು ನಿಲ್ಲಿಸಿ ,ನಾವೇನು ಲೂಟಿಕೋರರಾ? ರಾಜ್ಯವನ್ನು ಲೂಟಿ ಹೊಡೆದವರು ನೀವು… ಇದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ವಿರುದ್ದ ಗುಡುಗಿದ ಪರಿ.
ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ‘ಪರ್ಸಂಟೇಜ್ ಸಿಸ್ಟಂನ ಜನಕ ಯಡಿಯೂರಪ್ಪ . ಆ ಸಿಸ್ಟಂ ತಂದವರು ಯಾರು ? ಅದರ ಪಿತೃ ಯಡಿಯೂರಪ್ಪ ಮಹಾನುಭಾವ. ಕಾಂಗ್ರೆಸ್ ಸುಧೀರ್ಘ ಸರ್ಕಾರ ನಡೆಸಿದರೂ ಅವರಿಗೆ ಆ ಯೋಚನೆ ಬಂದಿರಲಿಲ್ಲ’ಎಂದು ಕಿಡಿ ಕಾರಿದರು.
‘ಆವತ್ತು ನಮ್ಮನ್ನು ಜೈಲಿಗೆ ಕಳುಹಿಸುತ್ತೇವೆ ಎಂದು ಅವರೇ ಜೈಲಿಗೆ ಹೋದರು’ ಎಂದು ಲೇವಡಿ ಮಾಡಿದರು.
‘ಯಡಿಯೂರಪ್ಪ ಅವರು ವಯಸ್ಸಿಗೆ ತಕ್ಕ ಹಾಗೆ ಮಾತಾಡಲಿ.ಅವರ ಮಾತಿನಲ್ಲಿ ಗಾಂಭೀರ್ಯ ಮತ್ತು ಹಿಡಿತ ಇರಲಿ. ನಾವು ಅಧಿಕಾರ ಇದ್ದಾಗ ರಾಜ್ಯದ ಸಂಪತ್ತು ಉಳಿಸಲು ಯತ್ನಿಸಿದವರು. ಸರ್ಕಾರ ನನ್ನ ಕೈಯಲ್ಲಿ ಇದೆ, ನಾಳೆ ಬೆಳಗ್ಗೆ ಏನು ಮಾಡಬೇಕು ಎಂದು ಗೊತ್ತಿದೆ. ಸ್ವಲ್ಪ ಎಚ್ಚರಿಕೆಯಿಂದ ಮಾತಾಡಿ’ ಎಂದರು.
‘ಅಯ್ಯೋ ರಾಮ ಯಡಿಯೂರಪ್ಪ ಏನು ಮಾಡಲ್ಲ, ಅದೇ ಆಗಿ ಬಿದ್ದು ಹೋಗಲಿ ಅಂತಾರೆ. 18 ಜನರನ್ನು ಕರೆದುಕೊಂಡು ಮುಂಬಯಿಗೆ ಪ್ರಯಾಣ ಮಾಡ್ತಾರಂತೆ. ತುರ್ತು ಅಂತ ನಾಗಮಂಗಲ ಎಂಎಲ್‌ಎ ಸುರೇಶ್ ಗೌಡ್ರಿಗೆ ಫೋನ್ ಮಾಡ್ತಾರೆ’ ಎಂದು ಕಿಡಿ ಕಾರಿದರು.
‘ಬೌರಿಂಗ್ ಇನ್ಸಿಟ್ಯೂಟ್‌ನಲ್ಲಿ ಸಭೆ ನಡೆಸುತ್ತಿದ್ದಾರೆ. ನನಗೆ ಇಂಚಿಂಚು ಮಾಹಿತಿ ಬರುತ್ತದೆ. ನಮ್ಮ ಶಾಸಕ ಶಿವಳ್ಳಿ ಅವರಿಗೆ ಮಧ್ಯ ರಾತ್ರಿ ಕರೆ ಬರುತ್ತದೆ. ಮುಂಬಯಿಯಿಂದ ಶಾಸಕರನ್ನು ಮಿಲಿಟರಿ ಫೋರ್ಸ್ ಜೊತೆ ವಿಧಾನಸೌಧಕ್ಕೆ ಕರೆದುಕೊಂಡು ಬರುತ್ತಾರಂತೆ. ವ್ಯರ್ಥ ಕಸರತ್ತು ಯಾತಕೆ , ಘನಂದಾರಿ ಕೆಲ್ಸ ಮಾಡ್ತಾ ಇದ್ದೀರಾ ? ನೀವು ನಮ್ಮ ಮೇಲೆ ಯಾಕೆ ಆರೋಪ ಮಾಡುತ್ತೀರಿ , ರಾಜ್ಯದ ಜನ ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ’ ಎಂದು ಕಿಡಿ ಕಾರಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
High Court: ಮುಮ್ತಾಜ್ ಅಲಿ ಆತ್ಮಹ*ತ್ಯೆ ಪ್ರಕರಣ: ಆರೋಪಿಗಳನ್ನು ಪೊಲೀಸ್ ವಶಕ್ಕೆ ನೀಡಲ್ಲ
Karnataka: ಲೋಕಾಯುಕ್ತ ದಾಳಿ; ಕಂತೆ ಕಂತೆ ಹಣ ವಶಕ್ಕೆ
H. D. Kumaraswamy: ರಾಜ್ಯದಲ್ಲಿ ಪ್ರಜಾಪ್ರಭುತ್ವ ಕೊನೆಯುಸಿರೆಳೆಯುತ್ತಿದೆಯೇ?
Vijaypura: ಕೋರ್ಟ್ ನಲ್ಲೆ ಕತ್ತು ಕೊ*ಯ್ದುಕೊಂಡ ಆರೋಪಿ!!
C.T.Ravi; ಬಿಡುಗಡೆ ಬಳಿಕ ಬಿಜೆಪಿ ಕಿಡಿ ಕಿಡಿ: ನಾವೇನು ಬಳೆ ತೊಟ್ಟು ಕುಳಿತಿಲ್ಲ…!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.