ರೋಹಿತ್ ಚಕ್ರತೀರ್ಥ ಮತ್ತು ಬರಗೂರು ರಾಮಚಂದ್ರಪ್ಪರ ತುಲಾಭಾರ ಮಾಡಿ: ಪ್ರಿಯಾಂಕ್ ಖರ್ಗೆ

ಅಶ್ಲೀಲ ಚಿತ್ರ ವೀಕ್ಷಣೆ ಮಾಡಿದರೆ ಡಿಸಿಎಂ ಆಗುತ್ತಾರೆ..

Team Udayavani, Jun 4, 2022, 3:43 PM IST

priyank-kharge

ಬೆಂಗಳೂರು : ಈ ರೋಹಿತ್ ಚಕ್ರತೀರ್ಥ ಯಾರು? ಇವರ ಅರ್ಹತೆ ಏನು? ಬರಗೂರು ರಾಮಚಂದ್ರಪ್ಪ ಅವರ ಅರ್ಹತೆ ಹಾಗೂ ಇವರ ಅರ್ಹತೆಯನ್ನು ನೀವೇ ತುಲಾಭಾರ ಮಾಡಿ. ಇವರ ಅರ್ಹತೆ ಬಗ್ಗೆ ಪ್ರಶ್ನೆ ಮಾಡಿದರೆ ಸರ್ಕಾರ ಮಂತ್ರಿಗಳು ಯಾಕೆ ಸಮರ್ಥಿಸಿಕೊಳ್ಳುತ್ತಿದ್ದಾರೆ ಎಂದು ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ಚಕ್ರತೀರ್ಥ ಹಿನ್ನೆಲೆ ಬಗ್ಗೆ ಅಂತರ್ಜಾಲದಲ್ಲಿ ಹುಡುಕಿದರೆ, ಅವರು ಯೂಟ್ಯೂಬ್ ನಲ್ಲಿ ಹೇಳಿಕೊಡುತ್ತಿರುವ ಪಾಠಕ್ಕೆ 20 ಜನ ವೀಕ್ಷಕರಿಲ್ಲ. ಇಂತಹ ಮೇಧಾವಿಯನ್ನು 1 ಕೋಟಿ ಮಕ್ಕಳ ಭವಿಷ್ಯ ರೂಪಿಸುವ ಜವಾಬ್ದಾರಿ ಹೊತ್ತಿದ್ದಾರೆ. ಇವರು ಶಿಕ್ಷಣ ತಜ್ಞರಿದ್ದರೆ ಸರ್ಕಾರ ಯಾಕೆ ಸಮರ್ಥನೆಗೆ ಮುಂದೆ ಬರುತ್ತಿದೆ. ಬಿಜೆಪಿಯಲ್ಲಿ ಇರುವುದು ಒಂದೇ ಮಾನದಂಡ. ಅದು ಅಶ್ಲೀಲತೆ ಎಂದು ಟೀಕಿಸಿದರು.

ಸಿ.ಡಿ ಮಾಡುವವರು ಮಂತ್ರಿಯಾಗುತ್ತಾರೆ ಎಂದು ಯತ್ನಾಳ್ ಅವರೇ ಹೇಳುತ್ತಾರೆ. ಸದನದಲ್ಲಿ ಅಶ್ಲೀಲ ಚಿತ್ರ ವೀಕ್ಷಣೆ ಮಾಡಿದರೆ ಉಪಮುಖ್ಯಮಂತ್ರಿ ಆಗುತ್ತೀರ. ಸಮಿತಿಯ ಅಧ್ಯಕ್ಷರ ಹಿಂದಿನ ಪೋಸ್ಟ್ ನೋಡಿದರೆ ಇವರು ಶಿಕ್ಷಣ ಚಕ್ರತೀರ್ಥ ಅಲ್ಲ, ಅವರುಅಶ್ಲೀಲ ಚಕ್ರವರ್ಥಿ ಅನಿಸುತ್ತದೆ. ಇದೇ ಮಾನದಂಡದ ಮೇಲೆ ಆಯ್ಕೆ ಮಾಡಿದ್ದಾರಾ?  ನೀವು ಎಷ್ಟು ಅಶ್ಲೀಲರಾಗಿರುತ್ತೀರೋ ಅಷ್ಟು ಪ್ರಾಮುಖ್ಯತೆ ಬಿಜೆಪಿ ಸರ್ಕಾರದಲ್ಲಿ ಸಿಗುತ್ತದೆ. ಮೀಟೂ ಹಗರಣದಲ್ಲಿ ಬಿಜೆಪಿ ನೇತಾರರು ಇದ್ದರು. ಅವರಿಗೆ ನೇರವಾಗಿ ಅವರ ರಾಷ್ಟ್ರೀಯ ಮೋರ್ಚಾದ ಅಧ್ಯಕ್ಷರನ್ನಾಗಿ ಮಾಡಿದರು. ಇನ್ನುಇವರ ಮಂತ್ರಿಗಳು ನ್ಯಾಯಾಲಯದಲ್ಲಿ ಸಿ.ಡಿ ವಿರುದ್ಧ ತಡೆಯಾಜ್ಞೆ ತಂದಿರುವು ಸುಳ್ಳಾ? ಬಿಜೆಪಿಯಲ್ಲಿ ಆದ್ಯತೆಗೆ ಇರುವ ಏಕೈಕ ಮಾನದಂಡ ಅಶ್ಲೀಲತೆ ಮಾತ್ರ. ನೀವು ಪ್ರಬುದ್ಧರಾಗಿ ಕೆಲಸ ಮಾಡುವ ಅಗತ್ಯವಿಲ್ಲ ಎಂದು ಆರೋಪಿಸಿದರು.

ಇದನ್ನೂ ಓದಿ : ದಲಿತ ನಾಯಕರೆಂದರೆ ಏಕೆ ಇಷ್ಟು ಅಸಹನೆ?: ಖರ್ಗೆ ಪರ ಬಿಜೆಪಿ ಸರಣಿ ಟ್ವೀಟ್!!

ಈ ಸರ್ಕಾರ ಆರ್ ಎಸ್ಎಸ್ ಇತಿಹಾಸ ಹಾಗೂ ಅದರ ನಾಯಕರ ಜೀವನ ಚರಿತ್ರೆಯನ್ನು ಸೇರಿಸಲು ಪ್ರಯತ್ನಿಸುತ್ತಿರುವುದೇಕೆ? ಅವರ ಜೀವನ ಚರಿತ್ರೆ ಭಾಗವನ್ನು ಪಠ್ಯದಲ್ಲಿ ಸೇರಿಸುವ ಬದಲು ಕೈಪಿಡಿ ಮಾಡಿಬಿಡಿ. ನಿಮಗೆ ಧೈರ್ಯವಿದ್ದರೆ ಆರ್ ಎಸ್ಎಸ್ ಕೈಪಿಡಿಯಲ್ಲಿ ಧೈರ್ಯವಾಗಿ ನೀವು ಯಾಕೆ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಲಿಲ್ಲ? ಯಾಕೆ ಗಾಂಧೀಜಿ ಕೊಂದಿರಿ? ನಿಮ್ಮ ಕಚೇರಿಯಲ್ಲಿ 57 ವರ್ಷ ನಮ್ಮ ರಾಷ್ಟ್ರಧ್ವಜ ಹಾರಿಸಲಿಲ್ಲ ಯಾಕೆ? ಹೆಗಡೆವಾರ್ ಅವರು ರಾಷ್ಟ್ರಧ್ವಜ ತಿರಸ್ಕಾರ ಮಾಡಿದ್ದು ಯಾಕೆ? ಸಂವಿಧಾನದ ಚರ್ಚೆ ನಡೆಯುವಾರ ಅಂಬೇಡ್ಕರ್, ನೆಹರೂ, ಪಟೇಲರು ಚರ್ಚೆ ಮಾಡುವಾಗ ನೀವು ರಾಮ್ ಲೀಲಾ ಮೈದಾನದಲ್ಲಿ 150 ಬಾರಿ ಪ್ರತಿಭಟನೆ ಮಾಡಿದಿರಿ? ಯಾಕೆ ನೀವು ಸಂವಿಧಾನ ಸುಟ್ಟಿ, ಮನುಸ್ಮೃತಿ ಸಂವಿಧಾನ ಆಗಬೇಕಿತ್ತು ಎಂದು ಹೇಳಿದ್ದೀರಿ ಎಂದು ಉತ್ತರಿಸಿ ಎಂದು ಸವಾಲು ಹಾಕಿದರು.

ಈ ವಿಚಾರದ ಬಗ್ಗೆ ಎನ್ ಇಪಿಯಲ್ಲೂ ತನ್ನಿ.ಇದೆಲ್ಲವನ್ನು ಯುವಕರು ಓದಿ ನಂತರ ದೇಶಭಕ್ತರು ಯಾರು? ದೇಶದ್ರೋಹಿಗಳು ಯಾರು? ಎಂದು ತೀರ್ಮಾನಿಸಲಿ. ನೀವು ಕ್ವಿಟ್ ಇಂಡಿಯಾ ಚಳುವಳಿ ಸಮಯದಲ್ಲಿ ಏನು ಮಾಡಿದಿರಿ, ಸುಭಾಷ್ ಚಂದ್ರ ಬೋಸ್ ಅವರು ಇಂಡಿಯನ್ ಆರ್ಮಿ ಕಟ್ಟುವಾಗ ನೀವೇನು ಮಾಡಿದಿರಿ? ದಂಡಿ ಸತ್ಯಾಗ್ರಹ ಮಾಡುವಾಗ ನೀವೇನು ಮಾಡಿದಿರಿ? ದುಂಡು ಮೇಜು ಸಭೆ, ಅಸಹಕಾರ ಚಳುವಳಿ ಸಮಯದಲ್ಲಿ ನೀವು ಏನು ಮಾಡಿದ್ದೀರಿ ಎಂದು ಚರ್ಚಿಸಿ. ರಾಷ್ಟ್ರ ನಿರ್ಮಾಣ ಮಾಡುವಾಗ, ಭಾರತ ಪಾಕ್ ಯುದ್ಧವಾಗುವಾಗ, ಭಾರತ ಚೀನಾ ಯುದ್ಧವಾಗುವಾಗ, ಬಾಂಗ್ಲಾ ವಿಮೋಚನೆಯಾಗುವಾಗ ನೀವು ಎಲ್ಲಿದ್ದಿರಿ? ಸಂವಿಧಾನದ ಮೂಲ ಆಶಯ ಜಾರಿ ಮಾಡುವಾಗ ಎಲ್ಲಿದ್ದಿರಿ ಎಂಬ ಎಲ್ಲ ವಿಚಾರದ ಬಗ್ಗೆ ಚರ್ಚೆ ಮಾಡೋಣ ಬನ್ನಿ ಎಂದರು.

ಕೇವಲ ಒಂದು ಪಾಠ ತಿರುಚಿ ಹೇಳುತ್ತೀರಿ. ಹೆಡೆಗೆವಾರ್ ಅವರು ಭಾಗವಧ್ವಜಕ್ಕೆ ನಮ್ಮ ನಿಯತ್ತು ಇರಬೇಕು ಎಂದು ಹೇಳಿದ್ದು, ಪಠ್ಯದಲ್ಲಿ ಕೇವಲ ಧ್ವಜ ಎಂದು ಯಾಕೆ ಹೇಳಿದ್ದೀರಿ? ಅದನ್ನು ಹೇಳಲು ಧೈರ್ಯ ಇಲ್ಲವೇ? ಸಾಮಾಜಿಕ ಜಾಲತಾಣದಲ್ಲಿ ಅಶ್ಲೀಲ ಪೋಸ್ಟ್, ಹೇಳಿಕೆ ನೀಡುವವರನ್ನು ಸಮಿತಿ ಅಧ್ಯಕ್ಷರನ್ನಾಗಿ ಮಾಡುಚತ್ತೀರಾ? ನಮ್ಮ ವಿದ್ಯಾರ್ಥಿ ಭವಿಷ್ಯ ಹಾಳು ಮಾಡುತ್ತಿದ್ದರೆ ನಾವದನ್ನು ನೋಡಿ ಸುಮ್ಮನೆ ಕೂರಬೇಕಾ? ಈ ಸಮಿತಿ, ಸರ್ಕಾರಕ್ಕೆ ಸಮಾನತೆ ಎಂದರೆ, ಸಂವಿಧಾನ, ದಲಿತರು ಎಂದರೆ ಅಲರ್ಜಿ. ಮಹಿಳೆಯರು ಹಿಂದುಳಿದವರು ಮುಖ್ಯವಾಹಿನಿಗೆ ಬರಬಾರದು, ಆರ್ಥಿಕವಾಗಿ ಮುಂದೆಬರಬಾರದು ಎಂಬ ಧೋರಣೆಗಳಿವೆ. ಇವರು ಎಂತಹ ತತ್ವಜ್ಞಾನಿಗಳು, ಸಮಾನತೆ ಪ್ರತಿಪಾದನೆ ಮಾಡಿದವರು, ಸಾಮಾಜಿಕ ನ್ಯಾಯದ ಬಗ್ಗೆ ಮಾತನಾಡಿದವರ ಜೀವನ ಚರಿತ್ರೆ ತಿರುಚಿದ್ದಾರೆ ಅಥವಾ ಕೈಬಿಟ್ಟಿದ್ದಾರೆ. ಬುದ್ಧ, ಬಸವ, ನಾರಾಯಣಗುರು ಅವರಿಗೆ ಅನ್ಯಾಯ ಮಾಡಿದ್ದು, ಕುವೆಂಪು ಅವರಿಗೆ ಅಪಮಾನ ಮಾಡಿದ್ದಾರ. ಸಾವಿತ್ರಿ ಭಾಯಿ ಪುಲೆ ಅವರ ಪಠ್ಯ ಬಿಟ್ಟಿದ್ದಾರೆ. ಪಿ.ಲಂಕೇಶ್, ಮಾಲಗತ್ತಿ, ದೇವನೂರು ಮಹಾದೇವ ಅವರ ಲೇಖನ ಬಿಟ್ಟಿದ್ದಾರೆ. ಇದಕ್ಕೆ ಕಾರಣ ಏನು? ಪ್ರಸ್ತುತವಲ್ಲವೇ? ವೈಜ್ಞಾನಿಕ ಭಾವನೆ, ಸಂವಿಧಾನ ಆಶಯ ಇಲ್ಲವೇ? ಇವರ ಲೇಖನ ಬದಲಾಗಿ ಮೋದಿಗೆ ಜೈಕಾರ ಹಾಕುವವರ ಲೇಖನ ಹಾಕಿದ್ದಾರೆ ಎಂದರು.

ನಿನ್ನೆ ಮುಖ್ಯಮಂತ್ರಿಗಳು ಪತ್ರಿಕಾಪ್ರಕಟಣೆ ಪ್ರಕಟಿಸಿದ್ದು, ನನಗೆ ಇವರ ಉತ್ತರ ಕೇಳಿ ಸಾಕಾಗಿದೆ. ನನಗೆ ಒಂದು ಸ್ಪಷ್ಟನೆ ಬೇಕಾಗಿದೆ. ನಮ್ಮ ರಾಜ್ಯದ ಮುಖ್ಯಮಂತ್ರಿ ಯಾರು? ಯಾವುದೇ ವಿಚಾರ ನೋಡಿದರೂ ಮುಖ್ಯಮಂತ್ರಿಗಳು ಮೂಖಬಸವರಾಗಿರುತ್ತಾರೆ ಯಾಕೆ? ಯಾರ ಬಳಿ ನ್ಯಾಯ ಕೇಳಬೇಕು? ಪಿಎಸ್ಐ ಹಗರಣ ಅಂದರೂ ಸುಮ್ಮನಿರುತ್ತಾರೆ, ಅವರು ಹಿಂಜರಿಯುತ್ತಿರುವುದೇಕೆ. ನಾಡಗೀತೆ ತಿರುಚಿದ ವ್ಯಕ್ತಿ ವಿರುದ್ಧ ಕ್ರಮ ಕೈಗೊಳ್ಳು ಸಾಧ್ಯವಾಗುತ್ತಿಲ್ಲ ಯಾಕೆ? ಆತ ಅಷ್ಟೋಂದು ಪ್ರಭಾವಿ ವ್ಯಕ್ತಿಯೇ? ಕುವೆಂಪು, ಬುದ್ಧ, ನಾರಾಯಣ ಗುರು, ಅಂಬೇಡ್ಕರ್ ಅವರಿಗೆ ಅಪಮಾನ ಮಾಡಿದ್ದು ಆತನ ಮುಂದೆ ಮಂಡಿಯೂರುತ್ತಿರುವುದೇಕೆ? ಎಂದು ಪ್ರಶ್ನಿಸಿದರು.

ಟಾಪ್ ನ್ಯೂಸ್

Karkala: ತಿಂಗಳ ಹಿಂದೆ ಮೃತಪಟ್ಟಿದ್ದ ಪತಿ, ಆತ್ಮಹತ್ಯೆಗೆ ಶರಣಾದ ಅಂಗನವಾಡಿ ಶಿಕ್ಷಕಿ

Karkala: ತಿಂಗಳ ಹಿಂದೆ ಮೃತಪಟ್ಟ ಪತಿ, ಮನನೊಂದು ಆತ್ಮಹತ್ಯೆಗೆ ಶರಣಾದ ಅಂಗನವಾಡಿ ಶಿಕ್ಷಕಿ

Karkala: ಅಣ್ಣನ ತಿಥಿಗೆ ಬಂದಿದ್ದ ತಂಗಿಯೂ ವಿದ್ಯುತ್ ಆಘಾತದಿಂದ ಮೃ*ತ್ಯು

Karkala: ಅಣ್ಣನ ತಿಥಿಗೆ ಬಂದಿದ್ದ ತಂಗಿ ವಿದ್ಯುತ್ ಆಘಾತದಿಂದ ಮೃ*ತ್ಯು

Sanju Weds Geetha 2: ಅವನು ಸಂಜು ಅವಳು ಗೀತಾ!; ಹಾಡಿನಲ್ಲಿ ಪ್ರೇಮ ಕಥನ

Sanju Weds Geetha 2: ಅವನು ಸಂಜು ಅವಳು ಗೀತಾ!; ಹಾಡಿನಲ್ಲಿ ಪ್ರೇಮ ಕಥನ

Ranji Trophy: ಇನ್ನಿಂಗ್ಸ್‌ ನ ಎಲ್ಲಾ 10 ವಿಕೆಟ್‌ ಕಿತ್ತು ಅನ್ಶುಲ್‌ ಕಾಂಬೋಜ್‌ ದಾಖಲೆ

Ranji Trophy: ಇನ್ನಿಂಗ್ಸ್‌ ನ ಎಲ್ಲಾ 10 ವಿಕೆಟ್‌ ಕಿತ್ತು ಅನ್ಶುಲ್‌ ಕಾಂಬೋಜ್‌ ದಾಖಲೆ

ಅಕ್ಕಿ ಗಿರಣಿ ಮುಂದೆ ಭತ್ತ ತುಂಬಿದ ವಾಹನಗಳ ಸಾಲು… ಮುಂಗಾರು ಮುಗಿದರೂ ನಿಲ್ಲದ ಕೃಷಿಕರ ಗೋಳು

ಅಕ್ಕಿ ಗಿರಣಿ ಮುಂದೆ ಭತ್ತ ತುಂಬಿದ ವಾಹನಗಳ ಸಾಲು… ಮುಂಗಾರು ಮುಗಿದರೂ ನಿಲ್ಲದ ಕೃಷಿಕರ ಗೋಳು

Sri Lanka Election Result:ಸಂಸತ್‌ ಚುನಾವಣೆ-ಅಧ್ಯಕ್ಷ ಅನುರಾ ದಿಸ್ಸಾನಾಯಕೆ ಪಕ್ಷ ಜಯಭೇರಿ

Sri Lanka Election Result:ಸಂಸತ್‌ ಚುನಾವಣೆ-ಅಧ್ಯಕ್ಷ ಅನುರಾ ದಿಸ್ಸಾನಾಯಕೆ ಪಕ್ಷ ಜಯಭೇರಿ

India Vs India A ಅಭ್ಯಾಸ ಪಂದ್ಯ: ಅಗ್ಗಕ್ಕೆ ಔಟಾದ ಕೊಹ್ಲಿ, ಪಂತ್;‌ ಗಾಯಗೊಂಡ ರಾಹುಲ್

India Vs India A ಅಭ್ಯಾಸ ಪಂದ್ಯ: ಅಗ್ಗಕ್ಕೆ ಔಟಾದ ಕೊಹ್ಲಿ, ಪಂತ್;‌ ಗಾಯಗೊಂಡ ರಾಹುಲ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

10-thirthahalli

Thirthahalli: ಶಾಸಕ ಸ್ಥಾನವನ್ನು ಗಿರವಿ ಇಟ್ಟರಾ ಆರಗ ಜ್ಞಾನೇಂದ್ರ ?

9-munirathna

Bengaluru: ಮುನಿರತ್ನ ವಿರುದ್ಧ ಹನಿಟ್ರ್ಯಾಪ್‌ ಕೇಸ್‌: ಪಿಐ ಸೆರೆ

7-r-ashok

Bengaluru: ಇ-ಖಾತಾ ಗೊಂದಲದಿಂದ ಲಂಚಕ್ಕೆ ದಾರಿ: ಆರ್‌. ಅಶೋಕ್‌

Shimoga; Deport Zameer Ahmed: ​​MLA Channabasappa

Shimoga; ಜಮೀರ್‌ ಅವರನ್ನು ಗಡಿಪಾರು ಮಾಡಿ: ಶಾಸಕ ಚನ್ನಬಸಪ್ಪ

Leopard: ಮನೆಯ ತಾರಸಿ ಮೇಲೆ ಚಿರತೆ ಓಡಾಟ… ಆತಂಕದಲ್ಲಿ ಗ್ರಾಮಸ್ಥರು

Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು

MUST WATCH

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

udayavani youtube

ನನ್ನ ಎದುರು ನೀನು ಬಚ್ಚ ! ಏಕವಚದಲ್ಲಿ ಕಿತ್ತಾಡಿಕೊಂಡ ಲಾಯರ್ ಜಗದೀಶ್ & ಕುಡುಪಲಿ ನಾಗರಾಜ್

ಹೊಸ ಸೇರ್ಪಡೆ

11-bantwala

Bantwala: ಶಾಲಾ ವಾಹನ ಡಿಕ್ಕಿಯಾಗಿ ಗಂಭೀರ ಗಾಯಗೊಂಡಿದ್ದ ಸ್ಕೂಟರ್ ಸವಾರ ಮೃತ್ಯು

8

Manipal: ನಿತ್ಯ ಅಪಘಾತ ತಾಣವಾದ ಈಶ್ವರ ನಗರ-ಪರ್ಕಳ ರಸ್ತೆ

7

Siruguppa: ಬೈಕ್ ಮತ್ತು ಅಪರಿಚಿತ ವಾಹನದ ಮಧ್ಯೆ ಭೀಕರ ಅಪಘಾತ; ಇಬ್ಬರ ಸಾವು

Karkala: ತಿಂಗಳ ಹಿಂದೆ ಮೃತಪಟ್ಟಿದ್ದ ಪತಿ, ಆತ್ಮಹತ್ಯೆಗೆ ಶರಣಾದ ಅಂಗನವಾಡಿ ಶಿಕ್ಷಕಿ

Karkala: ತಿಂಗಳ ಹಿಂದೆ ಮೃತಪಟ್ಟ ಪತಿ, ಮನನೊಂದು ಆತ್ಮಹತ್ಯೆಗೆ ಶರಣಾದ ಅಂಗನವಾಡಿ ಶಿಕ್ಷಕಿ

6

Hampanakatte: ಗುಟ್ಕಾ ಉಗುಳುವವರು, ಧೂಮಪಾನಿಗಳ ಹಾವಳಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.