Chaluvaraya Swamy ಇಷ್ಟು ವರ್ಷ ಪೆನ್‌ಡ್ರೈವ್ ಇಟ್ಟುಕೊಂಡಿದ್ದೇಕೆ?
4ನೇ ಹೆಸರೇಳಲು "ಸ್ವಾಮಿ'ಗಳ ಅಪ್ಪಣೆಯಾಗಿಲ್ಲವೇ? ದೇವರಾಜೇ ವಿರುದ್ಧ ಚಲುವರಾಯಸ್ವಾಮಿ ಸಿಡಿಮಿಡಿ
Team Udayavani, May 19, 2024, 12:24 AM IST
ಬೆಂಗಳೂರು: ಪೆನ್‌ಡ್ರೈವ್ ಪ್ರಕರಣಕ್ಕೂ ನನಗೂ ಸಂಬಂಧವಿಲ್ಲ ಎಂದು ಸ್ಪಷ್ಟನೆ ನೀಡಿರುವ ಕೃಷಿ ಸಚಿವ ಎನ್. ಚಲುವರಾಯಸ್ವಾಮಿ, ಅನಾವಶ್ಯಕವಾಗಿ ಈ ಪ್ರಕರಣದಲ್ಲಿ ನನ್ನ ಹೆಸರನ್ನು ಎಳೆದು ತರಲಾಗುತ್ತಿದೆ ಎಂದಿದ್ದಾರೆ.
ಶನಿವಾರ ಬೆಂಗಳೂರಿನ ಸರಕಾರಿ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಬಿಜೆಪಿಯ ದೇವರಾಜೇಗೌಡ ಯಾರೆಂಬುದೇ ನನಗೆ ಗೊತ್ತಿಲ್ಲ. ಆ ವ್ಯಕ್ತಿಯನ್ನು ನೋಡಿಯೂ ಇಲ್ಲ, ಆತನೊಂದಿಗೆ ಮಾತನಾಡಿಯೂ ಇಲ್ಲ. ನನ್ನ ಬಗ್ಗೆ ಮಾತನಾಡಲು ಆತನಿಗೆ ಯಾವ ನೈತಿಕತೆ ಇದೆ? ಎಂದು ಪ್ರಶ್ನಿಸಿದರು.
ದೇವೇಗೌಡರ ಕುಟುಂಬದ ವಿರುದ್ಧ ಇದ್ದ ದೇವರಾಜೇಗೌಡ, ಪ್ರಜ್ವಲ್‌ನ ಮಾಜಿ ಕಾರು ಚಾಲಕ ಕಾರ್ತಿಕ್ ಜತೆ ಸೇರಿ ಏನೇನು ಮಾಡಿದ್ದಾರೋ ಗೊತ್ತಿಲ್ಲ. ಪೆನ್‌ಡ್ರೈವ್‌ನ ಮಾಸ್ಟರ್ ಮೈಂಡ್ ಯಾರು? ಈಗ ಇದ್ದಕ್ಕಿದ್ದಂತೆ ದೇವೇಗೌಡರ ಕುಟುಂಬದ ಪರವಾಗಿ ದೇವರಾಜೇಗೌಡ ಮಾತನಾಡುತ್ತಿದ್ದಾನೆ. ಇದಕ್ಕೆ ಕಾರಣವೇನು? ವರ್ಷಗಳಿಂದ ತನ್ನ ಬಳಿ ಪೆನ್‌ಡ್ರೈವ್ ಇಟ್ಟುಕೊಂಡಿದ್ದೇಕೆ? ದೇವರಾಜೇಗೌಡ ವಿರುದ್ಧವೇ ಸಾಕಷ್ಟು ಆರೋಪಗಳಿವೆ ಎಂದರು.
ದೇವರಾಜೇಗೌಡ ಮಾತನ್ನು ಕೇಳಿಕೊಂಡು ಎಚ್.ಡಿ. ಕುಮಾರಸ್ವಾಮಿ ಕೂಡ ನನ್ನ ಹೆಸರು ಹೇಳುತ್ತಿದ್ದಾರೆ. ಆರಂಭದಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೆಸರು ಎಳೆದು ತರಲಾಗಿತ್ತು. ಈಗ ನಾನು, ಪ್ರಿಯಾಂಕ್ ಖರ್ಗೆ, ಕೃಷ್ಣಬೈರೇಗೌಡ ಸೇರಿ ನಾಲ್ವರು ಸಚಿವರು ಈ ಪ್ರಕರಣದಲ್ಲಿದ್ದೇವೆ ಎನ್ನುತ್ತಿದ್ದಾರೆ.
ನಾಲ್ಕನೆಯವರ ಹೆಸರು ಹೇಳಲು ದೇವರಾಜೇಗೌಡಗೆ “ಸ್ವಾಮಿ’ಗಳ ಅಪ್ಪಣೆ ಆಗಿಲ್ಲ ಎನಿಸುತ್ತದೆ. ಹೀಗಾಗಿ ಶಿವರಾಮೇಗೌಡ ಹೆಸರಿನೊಂದಿಗೆ ನಮ್ಮ ಹೆಸರುಗಳನ್ನೂ ಥಳಕು ಹಾಕಲಾಗುತ್ತಿದೆ. ನಾನು ವಿಧಾನಸಭೆ ಚುನಾವಣೆಗೂ ಮುನ್ನ ಬೌರಿಂಗ್ ಕ್ಲಬ್‌ಗ ಹೋಗಿದ್ದು ಬಿಟ್ಟರೆ ಇತ್ತೀಚೆಗೆ ಹೋಗಿಯೇ ಇಲ್ಲ. ಮೇಲ್ಮನೆಯಲ್ಲಿ ನಮ್ಮ ಪಕ್ಷದ ಸದಸ್ಯರಾಗಿರುವ ಗೋಪಾಲಸ್ವಾಮಿ ಅವರು ಹೋಗಿದ್ದರ ಬಗ್ಗೆ ಗೊತ್ತಿಲ್ಲ ಎಂದರು.
ಉನ್ನತ ಸ್ಥಾನಕ್ಕೆ ಏರುವರೆಂದು ಆರೋಪ
ಕುಮಾರಸ್ವಾಮಿ ಅವರಿಗೂ ಡಿ.ಕೆ. ಶಿವಕುಮಾರ್ ಅವರಿಗೂ ವೈಯಕ್ತಿಕವಾಗಿ ಏನಿದೆಯೋ ಗೊತ್ತಿಲ್ಲ. ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಡಿಸಿಎಂ ಶಿವಕುಮಾರ್ ಅವರು ಮುಂದಿನ ದಿನಗಳಲ್ಲಿ ಉನ್ನತ ಸ್ಥಾನಕ್ಕೆ ಹೋಗಬಹುದು ಎಂಬ ಕಾರಣಕ್ಕೆ ಕುಮಾರಸ್ವಾಮಿ ಈ ರೀತಿ ಆರೋಪಿಸುತ್ತಿರಬಹುದು. ಇದು ಯಾರಿಗೂ ಗೌರವ ಇರುವ ವಿಚಾರ ಅಲ್ಲ. ಇದರ ಬಗ್ಗೆ ಎಷ್ಟು ಬೆಳಕು ಚೆಲ್ಲಬೇಕೋ ಅಷ್ಟೇ ಹೇಳಬೇಕು. ಪ್ರಜ್ವಲ್‌ಗೆ ಸಂಬಂಧವಿಲ್ಲ, ರೇವಣ್ಣಗಾಗಿ ಹೋರಾಟ ಎನ್ನುವ ಕುಮಾರ ಸ್ವಾಮಿ, ಒಂದೊಂದು ಸಲ ಒಂದೊಂದು ರೀತಿಯ ಹೇಳಿಕೆಗಳನ್ನು ಕೊಡುತ್ತಿದ್ದಾರೆ. ಇದರಿಂದ ಯಾವ ಲಾಭವೂ ಆಗಿಲ್ಲ ಎಂದರು.
ದೇವೇಗೌಡರಿಗೆ ನೋವು ಕೊಡುವ ಉದ್ದೇಶವಿಲ್ಲ
ಮಾತೆತ್ತಿದ್ದರೆ ದೇವೇಗೌಡರ ಕುಟುಂಬದ ವಿರುದ್ಧ ಷಡ್ಯಂತ್ರ ಎನ್ನುತ್ತಾರೆ. ದೇವೇಗೌಡರು ಅವರಿಗೆ ತಂದೆ ಇರಬಹುದು. ಅವರು ಈ ನಾಡಿನ ಆಸ್ತಿ. ನಾವೂ ಅವರ ಗರಡಿಯಿಂದಲೇ ಬಂದಿದ್ದೇವೆ. ಅವರ ಬಗ್ಗೆ ಗೌರವ ಇದೆ. ಅವರಿಗೆ ನೋವು ಕೊಡುವ ಉದ್ದೇಶವಿಲ್ಲ. ಈ ಪ್ರಕರಣದಿಂದ ಅವರಿಗೆ ನೋವು ಇದೆಯೋ ಇಲ್ಲವೋ ಗೊತ್ತಿಲ್ಲ. ಆದರೆ, ನಮಗೆ ನೋವಿದೆ. ಅವರ ಕುಟುಂಬದ ಸಂಪರ್ಕದಲ್ಲಿ ಪ್ರಜ್ವಲ್ ಇಲ್ಲ ಎನ್ನುವುದು ಸರಿಯಲ್ಲ. ಆತನನ್ನು ಕರೆಸಿದರೆ ಎಲ್ಲದಕ್ಕೂ ತೆರೆ ಬೀಳಲಿದೆ. ಆ ಕೆಲಸವನ್ನು ಕುಮಾರಸ್ವಾಮಿ ಮಾಡಲಿ. ಮಹಿಳೆಯ ಅಪಹರಣ ಪ್ರಕರಣದಲ್ಲಿ ರೇವಣ್ಣ ಹೆಸರು ಇಲ್ಲದಿದ್ದರೆ ಬಂಧನವೇ ಆಗುತ್ತಿರಲಿಲ್ಲ. ಈ ವಿಚಾರದಲ್ಲಿ ಎಸ್‌ಐಟಿ ಹಾಗೂ ನ್ಯಾಯಾಂಗ ಕ್ರಮ ತೆಗೆದುಕೊಳ್ಳುತ್ತದೆ ಎಂದರು.
ಕುಮಾರಸ್ವಾಮಿ ಮತ್ತು ಡಿಸಿಎಂ ಶಿವಕುಮಾರ್ ನಡುವೆ ವೈಮನಸ್ಸು ಏನೇ ಇರಲಿ. ಏಕವಚನ ಬಳಸುವುದು ತಪ್ಪು. ಈ ವಿಚಾರವಾಗಿ ಇಬ್ಬರೂ ನಿತ್ಯ ಹೇಳಿಕೆ-ಪ್ರತಿಹೇಳಿಕೆ ಕೊಡದಿರುವುದೇ ಒಳ್ಳೆಯದು. ಸಂಬಂಧವೇ ಇಲ್ಲದ ನಮ್ಮನ್ನೆಲ್ಲ ಪ್ರಕರಣದಲ್ಲಿ ಎಳೆದು ತರುವುದು ಸರಿಯಲ್ಲ. ಕುಟುಂಬದ ಯಾರ ಸಂಪರ್ಕದಲ್ಲೂ ಪ್ರಜ್ವಲ್ ಇಲ್ಲ ಎಂಬುದನ್ನು ಯಾರೂ ನಂಬುವುದಿಲ್ಲ. ಮೊದಲು ಪ್ರಜ್ವಲ್‌ನನ್ನು ಕರೆಯಿಸುವ ಕೆಲಸ ಮಾಡಲಿ.
– ಎನ್. ಚಲುವರಾಯಸ್ವಾಮಿ,
ಕೃಷಿ ಸಚಿವ
ಪ್ರಜ್ವಲ್ ಬಂಧನಕ್ಕೆ ಅರೆಸ್ಟ್ ವಾರಂಟ್ ಪಡೆದ ಎಸ್‌ಐಟಿ?
ಬೆಂಗಳೂರು: ಹೊಳೆನರಸೀಪುರ ಠಾಣೆಯಲ್ಲಿ ದಾಖಲಾದ ಮಹಿಳೆ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ಬಂಧಿಸಲು ಎಸ್‌ಐಟಿ ಅಧಿಕಾರಿಗಳು ನ್ಯಾಯಾಲಯದಿಂದ ಅರೆಸ್ಟ್ ವಾರಂಟ್ ಪಡೆದಿದ್ದಾರೆ ಎನ್ನಲಾಗಿದೆ. ಆದರೆ, ಎಸ್‌ಐಟಿ ಅಧಿಕಾರಿಗಳು ಈ ವಿಚಾರವನ್ನು ದೃಢಪಡಿಸಲು ನಿರಾಕರಿಸಿದ್ದಾರೆ.
ಪ್ರಜ್ವಲ್ ರೇವಣ್ಣ ವಿರುದ್ಧ ಹೊರಡಿಸಿರುವ ಲುಕ್‌ಔಟ್ ನೋಟಿಸ್, ಬ್ಲೂ ಕಾರ್ನರ್ ನೋಟಿಸ್ ಬಗ್ಗೆ ಎಸ್‌ಐಟಿ ಪರ ವಕೀಲರು 42ನೇ ಎಸಿಎಂಎಂ ನ್ಯಾಯಾಲಯಕ್ಕೆ ಮನವರಿಕೆ ಮಾಡಿದ್ದರು. ಇದರ ಬೆನ್ನಲ್ಲೇ ನ್ಯಾಯಾಲಯದ ಅನುಮತಿಯ ಮೇರೆಗೆ ಪ್ರಜ್ವಲ್ ರೇವಣ್ಣ ವಿರುದ್ಧ ಎಸ್‌ಐಟಿ ಅರೆಸ್ಟ್ ವಾರೆಂಟ್ ಪಡೆದಿದೆ ಎಂದು ತಿಳಿದು ಬಂದಿದೆ. ಎಸ್‌ಐಟಿ ತಂಡದ ಮೂವರು ಐಪಿಎಸ್ ಅಧಿಕಾರಿಗಳು ಸಹ ಈ ಬಗ್ಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Derogatory Remark: ಧರ್ಮಸ್ಥಳದಲ್ಲಿ ಆಣೆ, ಪ್ರಮಾಣ ಮುಗಿದ ಕತೆ: ಸಿ.ಟಿ.ರವಿ
CT Ravi Case ನ್ಯಾಯಾಂಗ ತನಿಖೆಗೆ ಒಪ್ಪಿಸಲು ಗೌರ್ನರ್‌ಗೆ ಬಿಜೆಪಿ ದೂರು
Agriculture: ಬೆಂಬಲ ಬೆಲೆಯಲ್ಲಿ ತೊಗರಿ, ಕಡಲೆ ಖರೀದಿಗೆ ಅನುಮತಿ: ಸಚಿವ ಶಿವಾನಂದ ಪಾಟೀಲ್
ಸಿ.ಟಿ.ರವಿ ಆ ಪದ ಬಳಸಿಲ್ಲವಾದ್ರೆ ಧರ್ಮಸ್ಥಳಕ್ಕೆ ಬಂದು ಆಣೆ ಪ್ರಮಾಣ ಮಾಡಲಿ: ಸಚಿವೆ ಲಕ್ಷ್ಮೀ
Belagavi: ಕಾಂಗ್ರೆಸ್ ಶಕ್ತಿ ಏನೆಂದು ನಮಗಿಂತ ಚೆನ್ನಾಗಿ ಬಿಜೆಪಿಯವರಿಗೆ ಗೊತ್ತಿದೆ: ಡಿಕೆಶಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
BBK11: ಬಿಗ್ ಬಾಸ್ ರೆಸಾರ್ಟ್ ನಲ್ಲಿ ಹೆಣ್ಮಕ್ಕಳ ಬಟ್ಟೆ ಒಗೆದ ರಜತ್ – ತ್ರಿವಿಕ್ರಮ್
ಶ್ರೀಕೃಷ್ಣ ಮಠದಲ್ಲಿ ಡಿ.25ಕ್ಕೆ ನ್ಯಾಯಾಂಗದಲ್ಲಿ ಭಗವದ್ಗೀತೆ ಪ್ರಸ್ತುತತೆಯ ವಿಶೇಷ ಸಂವಾದ
New Appointment: ಐದು ರಾಜ್ಯಗಳಿಗೆ ಹೊಸ ರಾಜ್ಯಪಾಲರ ನೇಮಿಸಿದ ಕೇಂದ್ರ ಸರ್ಕಾರ
Derogatory Remark: ಧರ್ಮಸ್ಥಳದಲ್ಲಿ ಆಣೆ, ಪ್ರಮಾಣ ಮುಗಿದ ಕತೆ: ಸಿ.ಟಿ.ರವಿ
Police: ಬಾಂಗ್ಲಾದಿಂದ ಅಕ್ರಮ ವಲಸೆ: ಮುಂಬೈಯಲ್ಲಿ10,ದೆಹಲಿಯಲ್ಲಿ11 ಮಂದಿ ಸೆರೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.