ಇನ್ನೆರಡು ದಿನದಲ್ಲಿ ಸಾರಿಗೆ ನೌಕರರ ಸಂಬಳ ನೀಡುತ್ತೇವೆ: ಲಕ್ಷಣ ಸವದಿ
Team Udayavani, Feb 9, 2021, 4:04 PM IST
ಬೆಂಗಳೂರು: ಸಾರಿಗೆ ನೌಕರರ ಡಿಸೆಂಬರ್ ತಿಂಗಳ ಸಂಬಳ ಇನ್ನೆರಡು ದಿನದಲ್ಲಿ ಹಾಕುತ್ತವೆ. ಜನವರಿ ತಿಂಗಳ 15 ದಿನದ ಸಂಬಳ ಶೀಘ್ರವಾಗಿ ಹಾಕುತ್ತೇವೆ ಎಂದು ಡಿಸಿಎಂ ಲಕ್ಷಣ ಸವದಿ ಹೇಳಿದರು.
ವಿಧಾನಸೌಧದಲ್ಲಿ ಮಾತನಾಡಿದ ಅವರು, ಇಲಾಖೆಯ ಆದಾಯವು ಇಂಧನ ಮತ್ತು ಸಂಬಳಕ್ಕೆ ಸರಿಯಾಗುತ್ತಿದೆ. ಸಂಬಳಕ್ಕೆ ಹಣಕಾಸು ಇಲಾಖೆ ಒಪ್ಪಿಕೊಂಡಿದೆ. ಎರಡು ದಿನದಲ್ಲಿ ಸರಿಯಾಗುತ್ತದೆ. ಯಾವುದೇ ಅಡ್ಡಿ ಆತಂಕವಿಲ್ಲದೆ ನಿಮ್ಮ ಸಂಬಳ ಕೊಡುವ ಕೆಲಸ ಮಾಡುತ್ತೇವೆ ಎಂದರು.
ಇದನ್ನೂ ಓದಿ:ಮೀಸಲಾತಿ ಹೋರಾಟಕ್ಕೆ ಬರೋದು ಸಿದ್ದುಗೆ ಬಿಟ್ಟ ವಿಚಾರ: ಈಶ್ವರಪ್ಪ
ಸಾರಿಗೆ ನೌಕರರ ಬುಧವಾರದ ಪ್ರತಿಭಟನೆ ಮಾಡುವ ಖಚಿತ ಮಾಹಿತಿಯಿಲ್ಲ. ನನ್ನನ್ನು ಯಾರು ಭೇಟಿ ಮಾಡಿಲ್ಲ ಮನವಿ ಕೊಟ್ಟಿಲ್ಲ. ಮಾಧ್ಯಮಗಳಲ್ಲಿ ನೋಡಿಯಷ್ಟೆ ನನಗೆ ಮಾಹಿತಿ ತಿಳಿದಿದೆ. ನಾನು ಅಧಿಕಾರಿಗಳನ್ನು ಕರೆಸಿ ಮಾತನಾಡಿದ್ದೇನೆ ಎಂದರು
ಹಿಂದೆ ಪ್ರತಿಭಟನೆ ಮಾಡಿದಾಗ 9 ಬೇಡಿಕೆ ಇಟ್ಟಿದ್ದರು. ಅದರಲ್ಲಿ ನಾಲ್ಕು ಬೇಡಿಕೆ ಇಡೇರಿಸಿದ್ದೇವೆ. ಐದು ಸಭೆ ನಡೆಸಿದ್ದೇವೆ ಅದು ಅವರಿಗೂ ಗೊತ್ತು. ಇನ್ನು 15 ದಿನದಲ್ಲಿ ನೌಕರರ ಜೊತೆ ಆರನೇ ಸಭೆ ನಡೆಸಿ ವೇತನ ಪರಿಷ್ಕರಣೆ ಬಗ್ಗೆಯು ಮಾತನಾಡುತ್ತೇನೆ ಎಂದು ಸಚಿವರು ಹೇಳಿದರು.
ಯಾವುದೆ ಸಾಲ ಪಡೆಯಲು ಆಸ್ತಿ ಅಡಮಾನ ಇಡಬೇಕಾಗುತ್ತದೆ. ಅದಕ್ಕಾಗಿ ಬಿಎಂಟಿಸಿ ಶಾಂತಿನಗರ ಕಟ್ಟಡವನ್ನು ಅಡಮಾನ ಮಾಡಲಾಗಿದೆ ಎಂದರು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
By Election: ನಾಗೇಂದ್ರ, ಜಮೀರ್, ಡಿಕೆಶಿ ಮೇಲೆ ಚುನಾವಣಾ ಆಯೋಗ ಕಣ್ಣಿಡಲಿ: ಡಿವಿಎಸ್
Waqf: ಮುಸ್ಲಿಮರ ಗುರಿ ಮಾಡುವುದು ಬಿಟ್ಟರೆ ಬಿಜೆಪಿಗೆ ಬೇರೇನೂ ಇಲ್ಲ: ಸಚಿವ ದಿನೇಶ್
Gadaga: ಎಸ್ಪಿ ನೇಮಗೌಡ ಹೆಸರಲ್ಲಿ ನಕಲಿ ಫೇಸ್‌ಬುಕ್ ಖಾತೆ; ವ್ಯಕ್ತಿಗೆ 25 ಸಾವಿರ ರೂ. ವಂಚನೆ
Waqf Property: ಆಡು ಮುಟ್ಟದ ಸೊಪ್ಪಿಲ್ಲ, ವಕ್ಫ್ ಮುಟ್ಟದ ಸ್ವತ್ತಿಲ್ಲ: ತೇಜಸ್ವಿ ಸೂರ್ಯ
Waqf issue: ಬಿಜೆಪಿ ಅಧಿಕಾರದಲ್ಲಿದ್ದಾಗ ಕತ್ತೆ ಕಾಯಿತಿದ್ದರಾ?: ಪ್ರಿಯಾಂಕ್ ಖರ್ಗೆ
MUST WATCH
ಹೊಸ ಸೇರ್ಪಡೆ
By Election: ಯೋಗೇಶ್ವರ್ ನಿಂದಿಸಿದ್ದ ಡಿ.ಕೆ.ಸುರೇಶ್ ಆಡಿಯೋ ಎಚ್‌ಡಿಕೆ ಬಿಡುಗಡೆ
By Election: ನಾಗೇಂದ್ರ, ಜಮೀರ್, ಡಿಕೆಶಿ ಮೇಲೆ ಚುನಾವಣಾ ಆಯೋಗ ಕಣ್ಣಿಡಲಿ: ಡಿವಿಎಸ್
Waqf: ಮುಸ್ಲಿಮರ ಗುರಿ ಮಾಡುವುದು ಬಿಟ್ಟರೆ ಬಿಜೆಪಿಗೆ ಬೇರೇನೂ ಇಲ್ಲ: ಸಚಿವ ದಿನೇಶ್
Maharashtra: ಸ್ತ್ರೀಯರಿಗೆ ಮಾಸಿಕ 3000, ರೈತರ ಸಾಲ ಮನ್ನಾ: ಎಂವಿಎ
Jet Airways ಆಸ್ತಿ ಮಾರಾಟಕ್ಕೆ ಸುಪ್ರೀಂ ಕೋರ್ಟ್ ಅನುಮತಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.