ಬೆಳಗಾವಿ ಸುವರ್ಣ ಸೌಧದಲ್ಲಿ ವಿಧಾನಮಂಡಲ ಚಳಿಗಾಲ ಅಧಿವೇಶನ: ಬಸವರಾಜ ಹೊರಟ್ಟಿ
Team Udayavani, Oct 6, 2021, 5:11 PM IST
ಹುಬ್ಬಳ್ಳಿ: ವಿಧಾನಮಂಡಲ ಚಳಿಗಾಲ ಅಧಿವೇಶನ ಡಿಸೆಂಬರ್ ಎರಡನೇ ವಾರ ಬೆಳಗಾವಿಯ ಸುವರ್ಣ ಸೌಧದಲ್ಲಿ ನಡೆಸಲು ಸರಕಾರ ತೀರ್ಮಾನಿಸಿದೆ ಎಂದು ವಿಧಾನ ಪರಿಷತ್ತು ಸಭಾಪತಿ ಬಸವರಾಜ ಹೊರಟ್ಟಿ ತಿಳಿಸಿದರು.
ಬೆಳಗಾವಿಯಲ್ಲಿ ಅಧಿವೇಶನ ನಡೆಸುವ ಬಗ್ಗೆ ಚರ್ಚೆ ಯಾಗಿದೆ. ಕಳೆದ ಮೂರು ವರ್ಷಗಳಿಂದ ಬೆಳಗಾವಿಯಲ್ಲಿ ಅಧಿವೇಶನ ನಡೆದಿಲ್ಲ ಎಂದರು.
ಎರಡು ವಾರಗಳವರೆಗೆ ಅಧಿವೇಶನ ನಡೆಸಲು ನಿರ್ಧರಿಸಲಾಗಿದೆ. ಅಧಿವೇಶನದಲ್ಲಿ ಉತ್ತರ ಕರ್ನಾಟಕದ ವಿಷಯ ಹಾಗೂ ಸಮಸ್ಯಗಳ ಬಗ್ಗೆ ಹೆಚ್ಚಿನ ಚರ್ಚೆ ನಡೆಯುವಂತಾಗಲು ಆದ್ಯತೆ ನೀಡಲಾಗುತ್ತಿದೆ. ಈ ಕುರಿತಾಗಿ ತಾವು ಸೇರಿದಂತೆ ಸ್ಪೀಕರ್, ಮುಖ್ಯಮಂತ್ರಿ, ಉಭಯ ಸದನಗಳ ವಿಪಕ್ಷ ನಾಯಕರು, ಸಭಾನಾಯಕರ ವಿಧನಮಂಡಲ ಜಂಟಿ ಬಿಜಿನೆಸ್ ಕಮಿಟಿ ಸಭೆ ಕರೆಯಲು ತಿಳಿಸಲಾಗಿದೆ ಎಂದರು.
ಸದನವನ್ನು ಶಿಸ್ತುಬದ್ದವಾಗಿ ನಡೆಸಲು ಯೋಜಿಸಲಾಗಿದೆ.ಅದೇ ರೀತಿ ಈ ಭಾಗದ ವಿಷಯಗಳ ಚರ್ಚೆಗೆ ಅನುವಾಗುವಂತೆ ನೋಡಬೇಕೆಂದು ಉಭಯ ಸದನಗಳ ವಿಪಕ್ಷ ನಾಯಕರಿಗೆ ಮನವಿ ಮಾಡಲಾಗಿದೆ ಎಂದರು.
ದೇವಸ್ಥಾನಗಳ ಮಸೂದೆ ಪರಿಷತ್ತು ನಲ್ಲಿ ಅಂಗೀಕಾರವಾದರು ನಾನು ಸಹಿ ಹಾಕಿಲ್ಲ ಎಂದು ಸಚಿವ ಮಾಧುಸ್ವಾಮಿ ಹೇಳಿದ್ದು ತಿಳಿದಿದ್ದೇನೆ. ಅಂದು ತಡರಾತ್ರಿ 1:00 ಗಂಟೆವರಗೂ ನಡೆದಿತ್ತು. ತಡವಾಗಿದ್ದರಿಂದ ಸಹಿ ಹಾಕಿರಲಿಲ್ಲ. ಗುರುವಾರ ಬೆಂಗಳೂರಿಗೆ ಹೋದ ನಂತರ ಸಹಿ ಹಾಕುವೆ ಇದರಲ್ಲಿ ಯಾವುದೇ ಗೊಂದಲ ಇಲ್ಲ ಎಂದು ಹೊರಟ್ಟಿ ಅವರು ಸ್ಪಷ್ಟ ಪಡಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Farmers: ವಂಚನೆ ದೂರು ನೀಡುವ ರೈತರಿಗೆ 1 ಲಕ್ಷ ರೂ.ನಗದು ಬಹುಮಾನ – ಸಚಿವ ಶಿವಾನಂದ ಪಾಟೀಲ
Karnataka; ಸಿಸೇರಿಯನ್ ಹೆರಿಗೆ ತಡೆಯಲು ಹೊಸ ಕಾರ್ಯಕ್ರಮ ಘೋಷಿಸುತ್ತೇವೆ
Waqf; ವಿಜಯೇಂದ್ರ ವಿರುದ್ಧ ಲಂಚ ಆರೋಪ: ಸಿಬಿಐ ತನಿಖೆಗೆ ಬಿಜೆಪಿ ಒತ್ತಾಯ
Siruguppa: ನದಿಗೆ ಹಾರಿ ಆತ್ಮಹತ್ಯೆಗೆ ಶರಣಾದ ಮಹಿಳೆಯ ಶವ ಪತ್ತೆ
Darshan: ಜಾಮೀನು ಹಿನ್ನೆಲೆ: ಮತ್ತೆ ಕೋರ್ಟ್‌ಗೆ ಹಾಜರಾದ ದರ್ಶನ್
MUST WATCH
ಹೊಸ ಸೇರ್ಪಡೆ
Tirumala:ಇನ್ಮುಂದೆ ಭಕ್ತರು ಒಂದೇ ಗಂಟೆಯಲ್ಲಿ ತಿರುಪತಿ ತಿಮ್ಮಪ್ಪನ ದರ್ಶನ ಪಡೆಯಬಹುದು..!
Farmers: ವಂಚನೆ ದೂರು ನೀಡುವ ರೈತರಿಗೆ 1 ಲಕ್ಷ ರೂ.ನಗದು ಬಹುಮಾನ – ಸಚಿವ ಶಿವಾನಂದ ಪಾಟೀಲ
Hanuru: ಮಾದಪ್ಪನ ಬೆಟ್ಟದ ನಿಲ್ದಾಣಕ್ಕೆ ಬೇಕು ಮೂಲಸೌಕರ್ಯ
Karnataka; ಸಿಸೇರಿಯನ್ ಹೆರಿಗೆ ತಡೆಯಲು ಹೊಸ ಕಾರ್ಯಕ್ರಮ ಘೋಷಿಸುತ್ತೇವೆ
Amazon,Flipkart ವಿರುದ್ಧ ತನಿಖೆ: ಸುಪ್ರೀಂನಿಂದ ಎಲ್ಲಾ ಪ್ರಕರಣಗಳು ಕರ್ನಾಟಕ ಹೈಕೋರ್ಟ್‌ಗೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.