![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
Team Udayavani, Feb 3, 2019, 1:18 AM IST
ಹಾಸನ: ಸಂತೆಯಲ್ಲಿ ದನದ ಮಾಂಸದ ತಿನಿಸುಗಳನ್ನು ಮಾರಾಟ ಮಾಡುತ್ತಿದ್ದಾರೆ ಎಂದು ಆರೋಪಿಸಿ ಬಜರಂಗದಳದ ಕಾರ್ಯಕರ್ತರು ಸಂತೆಯಲ್ಲಿ ಮಹಿಳೆಯೊಬ್ಬಳ ಮೇಲೆ ಹಲ್ಲೆ ನಡೆಸಿ, ಟೆಂಟ್‌ಗೆ ಬೆಂಕಿ ಹಚ್ಚಿ, ಪಾತ್ರೆಗಳನ್ನು ಜಜ್ಜಿ ಹಾಕಿರುವ ಪ್ರಕರಣ ಸಕಲೇಶಪುರದಲ್ಲಿ ನಡೆದಿದೆ.
ಸಕಲೇಶಪುರ ಪಟ್ಟಣದ ಬಾಳಗದ್ದೆ, ರಾಘವೇಂದ್ರನಗರ ಶಮೀಮ್ ಎಂಬುವರು ತಮ್ಮ ಅತ್ತಿಗೆ ಕಮ್ರುನ್ನೀಸಾ ಅವರೊಂದಿಗೆ ಸಕಲೇಶಪುರ ಪಟ್ಟಣದ ಎಪಿಎಂಸಿ ಯಾರ್ಡ್‌ನ ಪ್ರೇಮನಗರದ ಕಡೆಗೆ ಹೋಗುವ ರಸ್ತೆಯ ಪಕ್ಕದಲ್ಲಿರುವ ಸಂತೆ ಮೈದಾನದ ಗೇಟ್ ಸಮೀಪ ಪ್ಲಾಸ್ಟಿಕ್ ಟಾರ್ಪಲ್‌ನಲ್ಲಿ ಟೆಂಟ್ ಹಾಕಿಕೊಂಡು ಕುರಿ ಹಾಗೂ ಕೋಳಿ ಮಾಂಸದ ಆಹಾರವನ್ನು ತಯಾರಿಸಿ, ಸಂತೆಗೆ ಬರುವವರಿಗೆ ಮಾರಾಟ ಮಾಡುತ್ತಿದ್ದರು. ಸ್ಥಳಕ್ಕೆ ಬಂದ 5-6 ಭಜರಂಗದಳದ ಕಾರ್ಯ ಕರ್ತರು, ದನದ ಮಾಂಸವನ್ನು ಬೇಯಿಸಿ ಮಾರಾಟ ಮಾಡುತ್ತಿದ್ದೀರಾ ಎಂದು ನಿಂದಿಸಿ ಬೇಯಿಸಿದ ಆಹಾರ ಪದಾರ್ಥಗಳೆಲ್ಲವನ್ನು ಕಿತ್ತು ಎಸೆದು ಪಾತ್ರೆಗಳನ್ನು ಜಜ್ಜಿ ಹಾಕಿದರು. ಹೋಟೆಲ್ ಮಾಡಲು ಹಾಕಿಕೊಂಡಿದ್ದ ಟಾರ್ಪಲ್‌ಗೆ ಬೆಂಕಿ ಹಚ್ಚಿ ಸುಟ್ಟು ಹಾಕಿ ದ್ದಾರೆ ಎಂದು ಸಕಲೇಶಪುರ ಠಾಣೆಯಲ್ಲಿ ಶಮೀಮ್
You seem to have an Ad Blocker on.
To continue reading, please turn it off or whitelist Udayavani.