ಸಿನೆಮಾ ರಂಗದ ಆಸೆ ಹುಟ್ಟಿಸಿ ದುಬಾೖಗೆ ಮಹಿಳಾ ಕಳ್ಳ ಸಾಗಾಣಿಕೆ: ನಾಲ್ವರ ಬಂಧನ
Team Udayavani, Apr 7, 2022, 9:30 PM IST
ಬೆಂಗಳೂರು: ದುಬಾೖಯ ಸಿನೆಮಾ ರಂಗದಲ್ಲಿ ದುಡಿದರೆ ಹೆಚ್ಚು ಹಣ ಸಂಪಾದಿಸಬಹುದು ಎಂದು ದಕ್ಷಿಣ ಭಾರತದ ಸಿನೆಮಾ ರಂಗದ ಮಹಿಳಾ ಕಲಾವಿದರನ್ನು ಪುಸಲಾಯಿಸಿ ವಿದೇಶಕ್ಕೆ ಕಳುಹಿಸಿ ಅಕ್ರಮ ಚಟುವಟಿಕೆಗೆ ದೂಡುತ್ತಿದ್ದ ಬೃಹತ್ ಜಾಲವನ್ನು ಕೇಂದ್ರ ಅಪರಾಧ ವಿಭಾಗದ ಮಹಿಳಾ ಸಂರಕ್ಷಣ ದಳ ವಿಭಾಗ ಪೊಲೀಸರು ಭೇದಿಸುವಲ್ಲಿ ಯಶಸ್ವಿಯಾಗಿದೆ.
ತಮಿಳುನಾಡಿನ ನಾಲ್ವರು ಮತ್ತು ಕರ್ನಾಟಕ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಕೊಪ್ಪಳ ತಾಲೂಕಿನ ಬಸವರಾಜು ಶಂಕರಪ್ಪ ಕಳಸದ್ (47), ಮೈಸೂರಿನ ನಜರಾಬಾದ್‌ನ ಆದರ್ಶ್ ಅಲಿಯಾಸ್ ಆದಿ (27), ತಮಿಳುನಾಡಿನ ಎಡಪಾಡಿ ನಿವಾಸಿ ರಾಜೇಂದ್ರ ನಾಚಿಮುತ್ತು (37), ಚೆನ್ನೈ ಮಾರಿಯಪ್ಪನ್ (44), ಟಿ.ಅಶೋಕ್ (29), ರಾಜೀವ್‌ಗಾಂಧಿ (35) ಮತ್ತು ಜೆ.ಪಿ.ನಗರದ ಆರ್.ಚಂದು (20) ಬಂಧಿತರು.
ಆರೋಪಿಗಳ ಪೈಕಿ ಪ್ರಕರಣದ ಮಾಸ್ಟರ್ ಮೈಂಡ್ ಬಸವರಾಜು ಶಂಕರಪ್ಪ ಕಳಸದ್ ವಿರುದ್ಧ 2020ರಲ್ಲಿ ನಂದಿನಿ ಲೇಔಟ್ ಠಾಣೆಯಲ್ಲಿ ಕೆಲವು ಮಹಿಳೆಯರಿಗೆ ವಿದೇಶದಲ್ಲಿ ಕೆಲಸ ಕೊಡಿಸುವುದಾಗಿ ಹೇಳಿ, ಅಲ್ಲಿನ ಡ್ಯಾನ್ಸ್ ಬಾರ್‌ಗಳಲ್ಲಿ ಕೆಲಸ ಮಾಡುವಂತೆ ಒತ್ತಾಯಿಸಿದ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ. ಜಾಮೀನು ಪಡೆದು ಹೊರಬಂದಿರುವ ಆರೋಪಿ, ಈಗ ಮತ್ತೆ ಅದೇ ದಂಧೆಯಲ್ಲಿ ತೊಡಗಿದ್ದಾನೆ ಎಂದು ಪೊಲೀಸರು ಹೇಳಿದರು.
ಆರೋಪಿಗಳು ಇತ್ತೀಚೆಗೆ ಹೆಣ್ಣೂರು ಠಾಣೆ ವ್ಯಾಪ್ತಿಯಲ್ಲಿ ವಾಸವಾಗಿರುವ ಮಹಿಳಾ ಕಲಾವಿದೆಗೆ ದುಬಾೖಯಲ್ಲಿ ಕೆಲಸ ಮಾಡಿದರೆ ಲಕ್ಷಾಂತರ ರೂ. ಸಂಪಾದಿಸಬಹುದು ಎಂದು ನಂಬಿಸಿ, ಮುಂಗಡ 50 ಸಾವಿರ ರೂ. ನೀಡಿ ದುಬಾೖಗೆ ಹೋಗಲು ಪಾಸ್‌ಪೋರ್ಟ್ ಮತ್ತು ವೀಸಾ ಮಾಡಿಸಿ ಕಳುಹಿಸಿದ್ದರು. ಆದರೆ, ಅಲ್ಲಿ ಬಾರ್‌ನಲ್ಲಿ ಕುಣಿಯುವಂತೆ ಹೇಳಿದ್ದರಿಂದ ಮಹಿಳೆ ವಾಪಸ್ ಬಂದು ಆರೋಪಿಗಳ ವಿರುದ್ಧ ಹೆಣ್ಣೂರು ಠಾಣೆಯಲ್ಲಿ ದೂರು ನೀಡಿದ್ದರು. ಈ ಪ್ರಕರಣ ಸಿಸಿಬಿಗೆ ವರ್ಗಾವಣೆಯಾಗಿದ್ದು, ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ರಮಣ ಗುಪ್ತಾ ಹೇಳಿದರು.
ಜಾಲದ ಹಿನ್ನೆಲೆ? :
ಆರೋಪಿಗಳು ದಕ್ಷಿಣ ಭಾರತದ ಸಿನೆಮಾ ರಂಗದ ಜ್ಯೂನಿಯರ್ ಆರ್ಟಿಸ್ಟ್ ಹಾಗೂ ಈವೆಂಟ್ ಮ್ಯಾನೇಜ್‌ಮೆಂಟ್, ಆರ್ಟಿಸ್ಟ್ ಏಜೆಂಟ್, ಡ್ಯಾನ್ಸರ್‌ಗಳಾಗಿ ಕೆಲಸ ಮಾಡುತ್ತಿದ್ದಾರೆ. ಜತೆಗೆ ಕರ್ನಾಟಕ, ತಮಿಳುನಾಡು, ತೆಲಂಗಾಣ, ಆಂಧ್ರ ಪ್ರದೇಶ, ಮಹಾರಾಷ್ಟ್ರ ಹಾಗೂ ಪಂಜಾಂಬ್‌ನ ಸಿನೆಮಾ ರಂಗದಲ್ಲಿ ತಮ್ಮೊಂದಿಗೆ ಜ್ಯೂನಿಯರ್ ಆರ್ಟಿಸ್ಟ್ ಹಾಗೂ ಡ್ಯಾನ್ಸರ್‌ಗಳಾಗಿ ಕೆಲಸ ಮಾಡುವ ಹಾಗೂ ಪರಿಚಯವಿರುವ ಆರ್ಥಿಕವಾಗಿ ಹಿಂದುಳಿದ ಮಹಿಳೆಯರನ್ನು ಪತ್ತೆ ಹಚ್ಚುತ್ತಿದ್ದರು. ಬಳಿಕ ವಿದೇಶದ ಸಿನೆಮಾ ರಂಗದಲ್ಲಿ ಕೆಲಸ ಮಾಡಿದರೆ ಲಕ್ಷಾಂತರ ರೂ. ಸಂಪಾದನೆ ಮಾಡಬಹುದೆಂದು ಆಮಿಷ ಒಡ್ಡುತ್ತಿದ್ದರು.
ಅನಂತರ ಪಾಸ್‌ಪೋರ್ಟ್ ಇದ್ದವರಿಗೆ ಮುಂಗಡ 50 ಸಾ. ದಿಂದ 1 ಲಕ್ಷ ರೂ.ವರೆಗೆ ಕೊಡುತ್ತಿದ್ದರು. ಪಾಸ್‌ಪೋರ್ಟ್ ಇಲ್ಲವಾದರೆ ಅವರಿಂದಲೇ 50 ಸಾವಿರ ರೂ.ನಿಂದ 75 ಸಾವಿರ ರೂ.ಪಡೆದುಕೊಂಡು, ಪಾಸ್‌ಪೋರ್ಟ್ ಮತ್ತು ವೀಸಾ ಕೊಡಿಸಿ, ಅನಂತರ ಅವರ ಖಾತೆಗೂ ಲಕ್ಷಾಂತರ ರೂ. ವರ್ಗಾಯಿಸಿ ದುಬಾೖಗೆ ಕಳುಹಿಸುತ್ತಿದ್ದರು.
ದುಬಾೖಯಲ್ಲಿ ಅವರನ್ನು ಬಾರ್‌ಗಳಲ್ಲಿ ಡ್ಯಾನ್ಸ್ ಮಾಡುವಂತೆ ಒತ್ತಾಯಿಸಲಾಗಿತ್ತು. ಕೆಲವು ಮಹಿಳೆಯರು ಅನಿವಾರ್ಯವಾಗಿ ನೃತ್ಯ ಮಾಡುತ್ತಿದ್ದರು. ಅಲ್ಲದೆ, ಗ್ರಾಹಕರನ್ನು ಆಕರ್ಷಿಸಬೇಕು. ಗ್ರಾಹಕರು ಕರೆದಾಗ ಶಾಂಪಿಂಗ್‌ಗೆ ಹೋಗಬೇಕು. ಅವರ ಜತೆ ಅನೈತಿಕ ಚಟುವಟಿಕೆಯಲ್ಲಿ ತೊಡಗಬೇಕೆಂದು ಬಲವಂತ ಮಾಡುತ್ತಿದ್ದರು. ಒಂದು ವೇಳೆ ಮಹಿಳೆಯೊಬ್ಬರು ಒಪ್ಪದಿದ್ದರೆ ಮುಂಗಡ ಹಣ ಕೊಡುವಂತೆ ಪೀಡಿಸುತ್ತಿದ್ದರು. ಅದರಿಂದ ಕೆಲ ಮಹಿಳೆಯರು ಅನಿವಾರ್ಯವಾಗಿ ಆರೋಪಿಗಳು ಹೇಳಿದಂತೆ ಕೇಳುತ್ತಿದ್ದರು. ಕೆಲವರು ಅಕ್ರಮ ಚಟುವಟಿಕೆಯಲ್ಲಿ ತೊಡಗಲು ಇಷ್ಟವಿಲ್ಲದೆ ಕರ್ನಾಟಕಕ್ಕೆ ಮರಳಿ ಆರೋಪಿಗಳ ವಿರುದ್ಧ ದೂರು ನೀಡಿದ್ದಾರೆ ಎಂದು ಪೊಲೀಸರು ಹೇಳಿದರು.
ಆರೋಪಿಗಳ ಜಾಲಕ್ಕೆ ಸಿಲುಕಿರುವ ನೂರಾರು ಮಂದಿ ಮಹಿಳೆಯರ ಪೈಕಿ 95 ಮಂದಿ ಮಹಿಳೆಯರು ದುಬಾೖಗೆ ಹೋಗಿ ವಾಪಸ್ ಬಂದಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ. ಜತೆಗೆ ವಿದೇಶಕ್ಕೆ ಕಳುಹಿಸಲು ಸಿದ್ಧವಾಗಿದ್ದ 17 ಮಹಿಳೆಯರನ್ನು ರಕ್ಷಿಸಿ, ಎಲ್ಲ ಮಹಿಳೆಯರ ಪಾಸ್‌ಪೋರ್ಟ್ ಜಪ್ತಿ ಮಾಡಲಾಗಿದೆ. ಅವರ ಬಳಿಯಿದ್ದ 7 ಮೊಬೈಲ್‌ಗಳು, ಒಂದು ಲ್ಯಾಪ್‌ಟಾಪ್, 1,06 ಲ.ರೂ. ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Demand: ಮನೆ ನಿರ್ಮಾಣ: ಶೇ.18 ಜಿಎಸ್‌ಟಿ ರದ್ಧತಿಗೆ ಆಗ್ರಹಿಸುವೆ: ಟಿ.ಬಿ.ಜಯಚಂದ್ರ
Re-Enforcement: ಹಳೇ ಪಿಂಚಣಿ ಯೋಜನೆ ಜಾರಿಗೊಳಿಸಿ: ಸಿ.ಎಸ್.ಷಡಾಕ್ಷರಿ ಮನವಿ
Response to Demand: ಬಿಸಿಯೂಟ ನೌಕರರಿಗೆ ಇಡುಗಂಟು: ಸರಕಾರದ ಮಾರ್ಗ ಸೂಚಿ ಪ್ರಕಟ
Winter Session Issue: ಬಂಧನ, ಪೊಲೀಸ್ ದೌರ್ಜನ್ಯ: ಡಿಜಿಪಿಗೆ ಸಿ.ಟಿ.ರವಿ ದೂರು
Valmiki Nigama: ಜಪ್ತಿ ಮಾಡಿರುವ 6.11 ಕೋಟಿ ರೂ. ಬಿಡುಗಡೆಗೆ ಸೂಚನೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mysuru: ಇನ್ಫೋಸಿಸ್ ಆವರಣದಲ್ಲಿ ಚಿರತೆ: ಸಿಬಂದಿಗೆ ವರ್ಕ್ ಫ್ರಂ ಹೋಂ
Professional Life: ಚಿತ್ರರಂಗಕ್ಕೆ ನಟ ದರ್ಶನ್ ಮರುಪ್ರವೇಶ!
Demand: ಮನೆ ನಿರ್ಮಾಣ: ಶೇ.18 ಜಿಎಸ್‌ಟಿ ರದ್ಧತಿಗೆ ಆಗ್ರಹಿಸುವೆ: ಟಿ.ಬಿ.ಜಯಚಂದ್ರ
Haveri: ಬಾಲಕಿಗೆ ಲೈಂಗಿಕ ದೌರ್ಜನ್ಯ, ಮತಾಂತರಕ್ಕೆ ಯತ್ನ: ಇಬ್ಬರ ವಶ
Re-Enforcement: ಹಳೇ ಪಿಂಚಣಿ ಯೋಜನೆ ಜಾರಿಗೊಳಿಸಿ: ಸಿ.ಎಸ್.ಷಡಾಕ್ಷರಿ ಮನವಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.