ವಂಡರ್‌ಲಾನಲ್ಲಿ ಅದ್ದೂರಿ ಕ್ರಿಸ್ಮಸ್, ಹೊಸ ವರ್ಷ ಆಚರಣೆ
Team Udayavani, Dec 22, 2019, 3:05 AM IST
ಬೆಂಗಳೂರು: ಭಾರತದ ಅತಿದೊಡ್ಡ ಅಮ್ಯೂಸ್ಮೆಂಟ್ ಪಾರ್ಕ್ ಆಗಿರುವ ವಂಡರ್‌ಲಾ ಕ್ರಿಸ್ಮಸ್ ಹಾಗೂ ಹೊಸ ವರ್ಷವನ್ನು ಅದ್ಧೂರಿಯಾಗಿ ಆಚರಿಸಲು ಎಲ್ಲ ರೀತಿಯ ಸಿದ್ಧತೆ ಮಾಡಿಕೊಂಡಿದೆ. ಡಿ.21ರಿಂದ ಆರಂಭಗೊಂಡು, 2020ರ ಜ.1ರವರೆಗೂ ಅದ್ದೂರಿಯಾಗಿ ನಡೆಯಲಿರುವ ಈ ಎರಡು ಆಚರಣೆ ಯಲ್ಲಿ ಅಭೂತಪೂರ್ವ ಮೆರವಣಿಗೆ, ಆಕರ್ಷಕ ಲೈವ್ ಶೋಗಳು, ಸ್ಟ್ರೀಟ್ ಮ್ಯಾಜಿಕ್, ಫುಡ್‌ಫೆಸ್ಟ್ ಹಾಗೂ ಇನ್ನು ಅನೇಕ ರೀತಿಯ ಆಕರ್ಷಣೆಗಳು ಪ್ರೇಕ್ಷಕರಿಗೆ ಸಿಗಲಿದೆ.
ಕ್ರಿಸ್ಮಸ್ ಆಚರಣೆಯನ್ನು ಇನ್ನಷ್ಟು ಸಂತಸದಿಂದ ನಡೆಸುವ ಉದ್ದೇಶದಿಂದ ವಿಶೇಷ ಡಿಸ್ಕೌಂಟ್ ಆಫರ್‌ಗಳನ್ನು ಇಡಲಾಗಿದೆ. 8088020000 ಸಂಖ್ಯೆಗೆ ಮಿಸ್ಡ್ಕಾಲ್ ನೀಡುವ ಮೂಲಕ ವಿಶೇಷ ಡಿಸ್ಕೌಂಟ್‌ಗೆ ಅರ್ಹತೆ ಪಡೆಯಬಹು ದಾಗಿದೆ. ಈ ಡಿಸ್ಕೌಂಟ್ ಆಫರ್ ಮಕ್ಕಳು ಮತ್ತು ವಯಸ್ಕರಿಗೆ ಅನ್ವಯವಾಗುತ್ತದೆ. ಇದರ ಜತೆಗೆ ಕ್ರಿಸ್ಮಸ್ ಆಚರಣೆ ಸಂದರ್ಭದಲ್ಲಿ ಅತಿಥಿಯಾಗಿ ಆಗಮಿಸು ವವರಿಗೆ ಲಕ್ಕಿ ಡ್ರಾ ಸ್ಪರ್ಧೆಯನ್ನು ಆಯೋಜಿ ಸಲಾಗಿದೆ ಎಂದು ವಂಡರ್ ಲಾ ತಿಳಿಸಿದೆ.
ವಂಡರ್ ಲಾ ಜಂಟಿ ವ್ಯವಸ್ಥಾಪಕ ನಿರ್ದೇಶಕ ಜಾರ್ಜ್ ಜೊಸೇಫ್ ಈ ಸಂಬಂಧ ಮಾಹಿತಿ ನೀಡಿ, ನಾವು ಅತ್ಯಂತ ಸಂತೋಷದಿಂದ ಇಲ್ಲಿಗೆ ಬರುವವರ ಖುಷಿಗಾಗಿ ಆಚರಣೆಗಳನ್ನು ನಡೆಸುತ್ತಿರುತ್ತೇವೆ. ಇಲ್ಲಿಗೆ ಬರುವ ಪ್ರತಿಯೊಬ್ಬರು ತಮ್ಮ ಒಂದೊಂದು ಕ್ಷಣವನ್ನು ಖಷಿಯಿಂದ ಕಳೆಯುವಂತೆ ಮಾಡುವುದು ನಮ್ಮ ಉದ್ದೇಶವಾಗಿದೆ ಎಂದು ಹೇಳಿದರು.
ಈ ವರ್ಷದ ವಿಶೇಷವೆಂದರೆ 5999 ರೂ.(ಜಿಎಸ್‌ಟಿ ಹೊರತುಪಡಿಸಿ)ಗಳಿಗೆ ಪಾರ್ಕ್‌ಗೆ 2 ಟಿಕೆಟ್ ಮತ್ತು ಬೆಳಗಿನ ತಿಂಡಿಯ ಜತೆಗೆ ವಂಡಲ್ ಲಾ ರೆಸಾರ್ಟ್‌ನಲ್ಲಿ ಒಂದು ರಾತ್ರಿ ಉಳಿಯಲು ಅವಕಾಶವಿದೆ. ಹಾಗೆಯೇ, 9999ರೂ.(ಜಿಎಸ್‌ಟಿ ಹೊರತುಪಡಿಸಿ)ಗೆ ಇಬ್ಬರು, ಎರಡು ದಿನ ಪಾರ್ಕ್‌ನಲ್ಲಿ ವಿವಿಧ ಆಟಗಳನ್ನು ಸವಿಯಬಹುದಾಗಿದೆ. ಜತೆಗೆ, ಬೆಳಗಿನ ತಿಂಡಿಯೊಂದಿಗೆ 2 ರಾತ್ರಿ ವಂಡಲ್ ಲಾ ರೆಸಾರ್ಟ್‌ನಲ್ಲಿ ಉಳಿಯಲು ಅವಕಾಶ ಇದೆ ಎಂದರು.
ಇದರ ಜತೆಗೆ, ವಂಡಲ್ ಲಾ ರೆಸಾರ್ಟ್ ರೆಸಿಡೆನ್ಸಿಯಲ್ ಪ್ಯಾಕೇಜ್‌ನ್ನು ಕೂಡ ಬಿಡುಗಡೆ ಮಾಡಲಾಗಿದೆ. 14,999 ರೂ.ಗಳಿಗೆ(ಜಿಎಸ್‌ಟಿ ಹೊರತುಪಡಿಸಿ), ಊಟ, ತಿಂಡಿ ಹಾಗೂ ಇತರ ಸೌಲಭ್ಯ ಇದರಡಿಯಲ್ಲಿ ಸಿಗಲಿದೆ. ವಂಡಲ್ ಲಾ ವೆಬ್‌ಸೈಟ್ www.wonderla.com ಮೂಲಕ 10 ದಿನಗಳ ಮೊದಲು ಮುಂಗಡ ಬುಕ್ಕಿಂಗ್ ಮಾಡಿಕೊಳ್ಳುವ ಮೂಲಕ ಶೇ.10ರಷ್ಟು ಡಿಸ್ಕೌಂಟ್ ಕೂಡ ಪಡೆಯಬಹುದಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru: ಕುಮಾರಸ್ವಾಮಿ ಯಾವಾಗ, ಹೇಗೆ ಬೇಕಾದರೂ ಟರ್ನ್ ಆಗುತ್ತಾರೆ: ಜಮೀರ್ ಅಹಮದ್
Hubli: ವಿದ್ಯಾರ್ಥಿನಿಗೆ ಚುಡಾಯಿಸಿದ ಇಬ್ಬರು, ಸಹಕರಿಸಿದ ಮೂವರ ಬಂಧನ
Siraguppa: ಮುಂಜಾನೆ ತಾಲೂಕಿನಲ್ಲಿ ದಟ್ಟ ಮಂಜು… ವಾಹನ ಸವಾರರ ಪರದಾಟ
Belagavi: ವಿವಾಹಿತ ಮಹಿಳೆ ಮತ್ತು ತಾಯಿಯ ಸೀರೆ ಬಿಚ್ಚಿ ಹಲ್ಲೆ ನಡೆಸಿದ ನೆರೆಹೊರೆಯವರು!
Waqf Notice: ಬಸನಗೌಡ ಪಾಟೀಲ್ ಯತ್ನಾಳ್ ತಂಡದಿಂದ 1 ತಿಂಗಳು ಜನ ಜಾಗೃತಿ
MUST WATCH
ಹೊಸ ಸೇರ್ಪಡೆ
Udupi: ಸಿಎನ್‌ಜಿ ಪೂರೈಕೆಯಲ್ಲಿ ಕೊರತೆಯಾಗದಂತೆ ಕ್ರಮ ಕೈಗೊಳ್ಳಿ: ಸಂಸದ ಕೋಟ ಸೂಚನೆ
BGT: ಟೀಂ ಇಂಡಿಯಾಗೆ ಮತ್ತೆ ಆಘಾತ; ವಿರಾಟ್, ರಾಹುಲ್ ಬಳಿಕ ಮತ್ತೊಬ್ಬ ಬ್ಯಾಟರ್ ಗೆ ಗಾಯ
PM Modi ಅವರು ಜೋ ಬೈಡೆನ್ ಅವರಂತೆ ನೆನಪಿನ ಶಕ್ತಿ ಕಳೆದುಕೊಳ್ಳುತ್ತಿದ್ದಾರೆ: ರಾಹುಲ್ ಗಾಂಧಿ
Resign: ಶಿರೋಮಣಿ ಅಕಾಲಿದಳದ ಅಧ್ಯಕ್ಷ ಸ್ಥಾನಕ್ಕೆ ಸುಖಬೀರ್ ಸಿಂಗ್ ಬಾದಲ್ ರಾಜೀನಾಮೆ
Maharashtra; ನಮ್ಮ ಮೈತ್ರಿ ಕೂಟ ಗೆದ್ದು ಮಹಾರಾಷ್ಟ್ರ ಉಳಿಸಲಿದೆ: ಡಿ.ಕೆ. ಶಿವಕುಮಾರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.