ಪಿಎಸ್ಐ ಹಗರಣದಲ್ಲಿ ನನ್ನ ಪಾತ್ರ ಸಾಬೀತಾದರೆ ಚುನಾವಣೆಗೆ ನಿಲ್ಲಲ್ಲ: ವಿಜಯೇಂದ್ರ ಚಾಲೆಂಜ್
Team Udayavani, Jul 23, 2022, 3:07 PM IST
ಬೆಂಗಳೂರು: ಪಿಎಸ್ಐ ಹಗರಣದಲ್ಲಿ ನನ್ನ ಪಾತ್ರವಿದೆ ಎಂದು ಕಾಂಗ್ರೆಸ್ ನವರು ಸುಮ್ಮನೆ ಆರೋಪ ಮಾಡುತ್ತಿದ್ದಾರೆ. ಪಿಎಸ್ಐ ಹಗರಣ ಕಾಂಗ್ರೆಸ್‌ನವರ ಮನೆ ಬಾಗಿಲಿಗೆ ಬರಲಿದೆ. ಸಿದ್ದರಾಮಯ್ಯ ಅವರು ಹಿರಿಯರು. ಈ ರೀತಿಯ ಕಪೋಲ ಕಲ್ಪಿತ ಆರೋಪಗಳು ಸರಿಯಲ್ಲ. ಈ ಹಗರಣದಲ್ಲಿ ನನ್ನ ಪಾತ್ರವಿದೆ ಎಂದಾದರೆ ನಾನು ಮುಂದಿನ ಚುನಾವಣೆಗೆ ನಿಲ್ಲುವುದಿಲ್ಲ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದರಲ್ಲಿ ನಾನು ಖಂಡಿತ ಭಾಗಿಯಾಗಿಲ್ಲ. ಇಂತಹ ಆರೋಪ ಮಾಡುವುದು ಸರಿಯಲ್ಲ ಎಂದರು.
ಶಿಕಾರಿಪುರ ಟಿಕೆಟ್ ಬಗ್ಗೆ ಬಿಎಸ್ ವೈ ಘೋಷಣೆ ಕುರಿತಾಗಿ ಮಾತನಾಡಿದ ವಿಜಯೇಂದ್ರ, ಕುಟುಂಬ ರಾಜಕಾರಣದ ಬಗ್ಗೆ ನಾನು ಒಪ್ಪುವುದಿಲ್ಲ. ನಮ್ಮ ಪಕ್ಷವೂ ಕೂಡ ಈ ಬಗ್ಗೆ ಒಪ್ಪಲ್ಲ. ಬಿಜೆಪಿಯಲ್ಲಿ ಹಲವು ವರ್ಷದಿಂದ ನಾನೂ ದುಡೀತಿದ್ದೇನೆ. ನಿವೃತ್ತಿ ನಂತರವೂ ಸಕ್ರಿಯ ರಾಜಕಾರಣದಲ್ಲಿ ಇರುತ್ತೇನೆಂದು ಬಿಎಸ್ ವೈ ನಿನ್ನೆ ಹೇಳಿದ್ದಾರೆ. ನಾನು ಉಪಾಧ್ಯಕ್ಷನಾಗಿ ಅವರ ಮಾತಿಗೆ ಬದ್ದ. ಪಕ್ಷದ ಸೂಚನೆ ಏನಿದೆ ಅದರಂತೆ ನಡೆಯುತ್ತೇನೆ ಎಂದರು.
ನನ್ನ ಬಗ್ಗೆ ನಾನು ಪ್ರಚಾರ ಮಾಡಿಕೊಳ್ಳುವ ಅವಶ್ಯಕತೆ ಇಲ್ಲ. ನಾನು ಒಂದೇ ಮಾತಿನಲ್ಲಿ ಹೇಳಿದ್ದೇನೆ. ಪಕ್ಷದ ನಿರ್ಧಾರ ಪ್ರಕಾರ ನಡೆದುಕೊಳ್ಳುತ್ತೇನೆ. ಪಕ್ಷದ ನಿರ್ಧಾರಕ್ಕೆ ಯಾವಾಗಲೂ ಬದ್ದನಾಗಿದ್ದೇನೆ ಎಂದರು.
ಇದನ್ನೂ ಓದಿ:ನಾನೇ ಸಿಎಂ ಎಂದು ಮೊದಲು ಆರಂಭಿಸಿದ್ಯಾರು?: ಡಿಕೆಶಿಗೆ ಮತ್ತೆ ಸೆಡ್ಡು ಹೊಡೆದ ಜಮೀರ್
ಮುಂದಿನ ವಿಧಾನಸಭೆ ಚುನಾವಣೆಗೆ ಮೈಸೂರು ಅಥವಾ ಶಿಕಾರಿಪುರದಲ್ಲಿ ಸ್ಪರ್ಧೆಯ ಬಗ್ಗೆ ಮಾತನಾಡಿದ ಅವರು, ನಿನ್ನೆಯ ವಿಚಾರದ ಬಳಿಕ ಅನೇಕ ಚರ್ಚೆಗಳು ಆಗುತ್ತಿವೆ. ವೈಯಕ್ತಿಕ ಹಿತದೃಷ್ಟಿಯಿಂದ ಯಡಿಯೂರಪ್ಪ ಈಗ ನಿರ್ಧಾರ ತೆಗೆದುಕೊಂಡಿದ್ದಾರೆ. ಹಿಂದೆಯೂ ಅನೇಕ ನಿರ್ಧಾರ ಮಾಡಿದ್ದಾರೆ. ನಾನು ಶಿಕಾರಿಪುರದಲ್ಲಿ ಸ್ಪರ್ಧೆ ಮಾಡುತ್ತೇನೆ ಎಂದರು.
ರಾಜ್ಯಾದ್ಯಂತ ಪ್ರವಾಸ ಮಾಡಿ ಹಳೆ ಮೈಸೂರು ಭಾಗದಲ್ಲಿ ಸಂಘಟನೆ ಮಾಡಬೇಕೆಂದು ಹೈಕಮಾಂಡ್ ಬಯಸಿದೆ. ನಾನು ಪಕ್ಷ ಸಂಘಟನೆ ಮಾಡಲು ಸಿದ್ದನಿದ್ದೇನೆ. ಯಡಿಯೂರಪ್ಪ ಅವರಾಗಿರಬಹುದು, ಬೇರೆಯವರೇ ಆಗಿರಬಹುದು. ತಮ್ಮ ಮಕ್ಕಳು ಪರಿಶ್ರಮದಿಂದ ಮೇಲೆ ಬರಬೇಕೆಂದು ಬಯಸುತ್ತಾರೆ. ವಿಜಯೇಂದ್ರಗೆ ಶಕ್ತಿ ಇದೆ, ತಾಕತ್ ಇದೆ ಅನ್ನೋದು ಅವರಿಗೆ ಅನಿಸಿದರೆ ಜವಾಬ್ದಾರಿ ಕೊಡುತ್ತಾರೆ ಎಂದು ವಿಜಯೇಂದ್ರ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ
Waqf: ರೈತರಿಗೆ ನೀಡಿರುವ ನೋಟಿಸ್ ತಕ್ಷಣ ವಾಪಸ್: ಅಧಿಕಾರಿಗಳಿಗೆ ಸಿಎಂ ಖಡಕ್ ಸೂಚನೆ
Waqf Issue: ನ.4ರಂದು ರಾಜ್ಯಾದ್ಯಂತ ಕಾಂಗ್ರೆಸ್ ಸರ್ಕಾರದ ವಿರುದ್ದ ಬಿಜೆಪಿ ಪ್ರತಿಭಟನೆ
High Court: ಕ್ರಿಮಿನಲ್ ಕೇಸ್ ಡೈರಿ ಪ್ರತೀ ಪುಟಕ್ಕೆ ಸಹಿ:ಅರ್ಜಿ ವಜಾಗೊಳಿಸಿದ ಹೈಕೋರ್ಟ್
Bengaluru: ಸುವರ್ಣ ಸಂಭ್ರಮದಲ್ಲಿ ರಾಜ್ಯೋತ್ಸವ ವೈಭವ
MUST WATCH
ಹೊಸ ಸೇರ್ಪಡೆ
Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ
Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ
Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ
J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.