ಕೋವಿಡ್‌- 19 ನಿಯಂತ್ರಣಕ್ಕೆ ವಿಶ್ವದ ಮೆಚ್ಚುಗೆ

ಮುಂದಿನ 6 ತಿಂಗಳು ನಿರ್ಣಾಯಕ ಹೋರಾಟವನ್ನು ಎಲ್ಲರೂ ಮಾಡಬೇಕಿದೆ: ಬಿ.ಎಲ್‌.ಸಂತೋಷ್‌

Team Udayavani, May 1, 2020, 11:34 AM IST

ಕೋವಿಡ್‌- 19 ನಿಯಂತ್ರಣಕ್ಕೆ ವಿಶ್ವದ ಮೆಚ್ಚುಗೆ

ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್‌.ಸಂತೋಷ್‌

ಬೆಂಗಳೂರು: ಕೋವಿಡ್‌- 19 ನಿಯಂತ್ರಣಕ್ಕೆ ಕೇಂದ್ರ ಸರ್ಕಾರ ಕೈಗೊಂಡ ಕಠಿಣ ಮತ್ತು ಸೂಕ್ತ ಕ್ರಮಗಳ ಬಗ್ಗೆ ಇಂದು ವಿಶ್ವವೇ ಮೆಚ್ಚುಗೆ ವ್ಯಕ್ತಪಡಿಸುತ್ತಿದೆ. ಲಾಕ್‌ಡೌನ್‌ನ 45 ದಿನಗಳ ಜೀವ ಉಳಿಸಿಕೊಳ್ಳುವ ಪ್ರಯತ್ನದಲ್ಲಿ ದೇಶ ಬಹುತೇಕ ಯಶಸ್ಸು ಕಂಡಿದ್ದು, ಬದುಕು ಕಟ್ಟಿಕೊಳ್ಳಲು ಮುಂದಿನ ಆರು ತಿಂಗಳ ಕಾಲ ನಿರ್ಣಾಯಕ ಹೋರಾಟವನ್ನು ಎಲ್ಲರೂ ಮಾಡಬೇಕಿದೆ ಎಂದು ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್‌.ಸಂತೋಷ್‌ ತಿಳಿಸಿದ್ದಾರೆ.

ಪ್ರಜ್ಞಾ ಪ್ರವಾಹ ಕರ್ನಾಟಕ ಘಟಕ ಏರ್ಪಡಿಸಿದ್ದ “ಭಾರತದ ಕೋವಿಡ್ ವಿರುದ್ಧದ ಹೋರಾಟ ಮತ್ತು ಮುಂಬರುವ ಸವಾಲುಗಳಿಗೆ ಕೇಂದ್ರ ಸರ್ಕಾರ ದ ಸನ್ನದ್ಧತೆ’ ಕುರಿತಂತೆ ಅಂತರ್ಜಾಲ ವಿಶೇಷ ಉಪನ್ಯಾಸ ಮಾಲಿಕೆಯಡಿ ದೆಹಲಿಯ ಬಿಜೆಪಿ ಕೇಂದ್ರ ಕಚೇರಿಯಿಂದ ಆನ್‌ ಲೈನ್‌ ಮೂಲಕ ಬುಧವಾರ ಮಾತನಾಡಿದರು. ವಿಶ್ವ ಆರೋಗ್ಯ ಸಂಸ್ಥೆಯ ಸೂಚನೆಯಂತೆ ಜನವರಿ ಮೊದಲ ವಾರದಲ್ಲಿ ಪ್ರಧಾನಿ ನೇತೃತ್ವದಲ್ಲಿ ಕೋವಿಡ್‌- 19ಕ್ಕೆ ಸಂಬಂಧಪಟ್ಟಂತೆ ಕೇಂದ್ರ ಸರ್ಕಾರದ ಮುಖ್ಯ ಕಾರ್ಯದರ್ಶಿಗಳ ಪ್ರಥಮ ಸಭೆ ನಡೆಯಿತು. ಫೆಬ್ರವರಿಯಿಂದ ಚೀನಾದಿಂದ ದೇಶಕ್ಕೆ ಆಗಮಿಸುವ ಯಾತ್ರಿಕರು, ಜನರ ಆರೋಗ್ಯ ತಪಾಸಣೆ ವಿಮಾನನಿಲ್ದಾಣಗಳಲ್ಲಿ ಪ್ರಾರಂಭವಾಯಿತು. ಹಾಗೆಯೇ ಶಂಕಿತ ಸೋಂಕಿತರನ್ನು ಕ್ವಾರೆಂಟೈನ್‌ಗೆ ಒಳಪಡಿಸಲಾಗುತ್ತಿತ್ತು ಎಂದು ಹೇಳಿದರು.

ಜಗತ್ತಿನ ಆರ್ಥಿಕ ಮತ್ತು ವೈದ್ಯಕೀಯ ಸೌಲಭ್ಯ ದೃಷ್ಟಿಯಿಂದ ಶಕ್ತಿಶಾಲಿ ರಾಷ್ಟ್ರಗಳಾದ ಅಮೆರಿಕ, ಬ್ರೆಜಿಲ್‌, ಸ್ಪೇನ್‌, ಇಟಲಿ, ಲಂಡನ್‌ ಮತ್ತು ಫ್ರಾನ್ಸ್‌  ನಲ್ಲಿ ಸೋಂಕಿತರ ಸಂಖ್ಯೆ ಲಕ್ಷ ದಾಟಿದ್ದರೆ, ಮೃತರ ಸಂಖ್ಯೆ ಐದಂಕಿ ದಾಟಿದೆ. ಆದರೆ ಭಾರತದಲ್ಲಿ ಮಾರ್ಚ್‌ನಲ್ಲಿ ಸೋಂಕಿತರ ಸಂಖ್ಯೆ 200 ದಾಟಿದಾಗ ಅದರ ತೀವ್ರತೆ ಅರಿತ ಕೇಂದ್ರ ಸರ್ಕಾರ ಜಿ-20 ರಾಷ್ಟ್ರಗಳ ಸಭೆ ಕರೆದು ಅದರ ನೇತೃತ್ವ ವಹಿಸಿ ಚರ್ಚಿಸಿತು. ವಿದೇಶಗಳಲ್ಲಿ ನೆಲೆಸಿದ್ದ ಭಾರತೀಯರನ್ನು ಸ್ವದೇಶಕ್ಕೆ ಕರೆತರಲಾಯಿತು. ರಾಜ್ಯ ಸರ್ಕಾರಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅಗತ್ಯ ಸಲಹೆ ನೀಡುವ ಮೂಲಕ ಪ್ರಧಾನಿ ಮೋದಿಯವರು ಕೋವಿಡ್ ವಿರುದ್ಧ ಹೋರಾಡಲು ಎಲ್ಲರನ್ನೂ ಒಟ್ಟುಗೂಡಿಸಿದರು ಎಂದು ತಿಳಿಸಿದರು.

ಮೊದಲಿಗೆ ಶಾಲಾ- ಕಾಲೇಜುಗಳಿಗೆ ರಜೆ ಘೋಷಿಸಲಾಯಿತು. ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಜಾಗೃತಿ ಮೂಡಿಸಲಾಯಿತು. ಹಂತ ಹಂತವಾಗಿ ಲಾಕ್‌ಡೌನ್‌ ಘೋಷಿಸಲಾಯಿತು. ಪ್ರಧಾನಿ ಮೋದಿಯವರು ಮಾ.22ರಂದು ಜನತಾ ಕರ್ಫ್ಯೂಗೆ ಕರೆ ನೀಡಿದಾಗ ದೇಶದ ಜನರಿಂದ ಅಭೂತಪೂರ್ವ ಬೆಂಬಲ ದೊರೆಯಿತು. ನಂತರ ಲಾಕ್‌ಡೌನ್‌ 1 ಮತ್ತು 2 ಘೋಷಣೆಗೂ ಜನ ಬೆಂಬಲಿಸಿ ಸಂಯಮ ಮತ್ತು ಶಿಸ್ತು ಕಾಪಾಡಿಕೊಂಡು ಬಂದಿರುವುದು ಶ್ಲಾಘನೀಯ ಎಂದು ಹೇಳಿದರು.

ಕೋವಿಡ್ ಪರೀಕ್ಷಾ ಕಿಟ್‌ಗಳು ವಿಶ್ವ ಮಾರುಕಟ್ಟೆಯಲ್ಲಿ ಲಭ್ಯವಿಲ್ಲದ ಕಾರಣ ಐಐಟಿ ದೆಹಲಿ ಸೇರಿ ನಾನಾ ಸಂಶೋಧನಾ ಕೇಂದ್ರಗಳು ಕಿಟ್‌ ತಯಾರಿಕೆಗೆ ಮುಂದಾಗಿವೆ. ಮೇ ತಿಂಗಳಲ್ಲಿ ರ್ಯಾಪಿಡ್‌ ಪರೀಕ್ಷೆಗೆ ಅವಶ್ಯಕವಿರುವ ಲಕ್ಷಾಂತರ ಕಿಟ್‌ಗಳು ದೊರೆಯಲಿವೆ. ಫೆಬ್ರವರಿಯಲ್ಲಿ ಕೋವಿಡ್‌- 19 ಪರೀಕ್ಷೆಗೆ ಕೇವಲ 3 ಪ್ರಯೋಗಾಲಯಗಳಷ್ಟೇ ಇದ್ದವು. ಇಂದು 372ಕ್ಕೂ ಹೆಚ್ಚು
ಪ್ರಯೋಗಾಲಯ ಸಿದ್ಧಪಡಿಸಲಾಗಿದೆ. ಮೇ ಅಂತ್ಯದ ಹೊತ್ತಿಗೆ 750 ಪ್ರಯೋಗಾಲಯ ಸ್ಥಾಪನೆ ಗುರಿ ಇದೆ. ಹೈಡ್ರೊಕ್ಲೋರೊಫೈನ್‌ ಔಷಧ ನೆರವನ್ನು ವಿಶ್ವದ ಬಹುತೇಕ ರಾಷ್ಟ್ರಗಳಿಗೆ ಒದಗಿಸುವ ಮೂಲಕ ಭಾರತ ಸಂಜೀವಿನಿಯಾಗಿದೆ ಎಂದು ಹೇಳಿದರು.

ಕೋವಿಡ್‌- 19ಕ್ಕೆ ಔಷಧ ಕಂಡುಹಿಡಿಲು ಅಮೆರಿಕ, ಚೀನಾ, ದಕ್ಷಿಣ ಕೊರಿಯಾ, ಇಂಗ್ಲೆಂಡ್‌ ಹಾಗೂ ಜರ್ಮನಿ ಸಂಶೋಧನೆಗೆ ಮುಂದಾಗಿವೆ. ಭಾರತದ ಜೈವಿಕ ತಂತಜ್ಞಾನ ವಿಭಾಗವು ಕ್ಯಾಂಡಿಲಾ ಇಂಡಿಯಾ ಲಿಮಿಟೆಡ್‌, ಸೆರೆಮನ್‌ ಚೂಟ್‌ ಮತ್ತು ಭಾರತ್‌ ಲ್ಯಾಬ್‌ ಎಂಬ ಮೂರು ಸಂಸ್ಥೆಗಳಿಗೆ ಆರ್ಥಿಕ ನೆರವು ನೀಡುತ್ತಿದೆ. ಕೋವಿಡ್‌- 19 ವೈರಸ್‌ ನ ಮೂರು ಸರಣಿಗಳಿರುವುದನ್ನು ಪತ್ತೆ ಹಚ್ಚಲಾಗಿದೆ. ಆಯುಷ್‌ ವಿಭಾಗದ ಮೂಲಕ ಮಾನವನ ಧಾರಣಾ ಶಕ್ತಿ ವೃದಿಟಛಿಗೆ ಔಷಧೋಪಚಾರ ತಯಾರಿಕೆಯೂ ನಡೆದಿದೆ. ಜತೆಗೆ ರೊಬೊಟ್‌ ತಂತ್ರಜ್ಞಾನದ ಅಭಿವೃದ್ಧಿಗೆ ಒತ್ತು ನೀಡಲಾಗಿದೆ. ಎನ್‌- 95 ಮಾಸ್ಕ್ಮ ತ್ತು ಗುಣಮಟ್ಟದ ಪಿಪಿ ಕಿಟ್‌ಗಳ ತಯಾರಿಕೆಯಲ್ಲಿ ದೇಶ ಸ್ವಾವಲಂಬಿಯಾಗಿದ್ದು, ಚೀನಾದ ಗುಣ  ಮಟ್ಟವಿಲ್ಲದ ಕಿಟ್‌ಗಳ ಮೇಲೆ ಭಾರತ ಇಂದು ಅವಲಂಬಿತವಾಗಿಲ್ಲ ಎಂದು ತಿಳಿಸಿದರು.

ಜಿಡಿಪಿ ಕುಸಿಯುವ ಸಾಧ್ಯತೆ: ಮಾರ್ಚ್‌, ಏಪ್ರಿಲ್‌ ದೇಶಕ್ಕೆ ಶೇ.30ರಷ್ಟು ಜಿಡಿಪಿ ಒದಗಿಸುವ ಮಾಸಗಳು. ಈ ತಿಂಗಳಲ್ಲಿ ದೇಶದ ಬಹುತೇಕ ಕಡೆ ಧಾರ್ಮಿಕ ಹಬ್ಬ, ಜಾತ್ರೆ, ಮಹೋತ್ಸವ, ಮದುವೆ ಇತರೆ ಆಚರಣೆ, ಸಮಾರಂಭ ನಡೆಯುತ್ತದೆ. ಕೈಗಾರಿಕಾ ವಲಯದಲ್ಲೂ ಇದೇ ಅವಧಿಯಲ್ಲಿ ಹೆಚ್ಚಿನ ಉತ್ಪಾದನೆಯಾಗುತ್ತದೆ. ಆದರೆ ಲಾಕ್‌ಡೌನ್ ನಿಂದ ದೇಶದ ಜಿಡಿಪಿ ಕುಸಿಯುವ ಸಾಧ್ಯತೆಯಿದೆ. ಮೂರು ಹಂತದಲ್ಲಿ ಕೇಂದ್ರ ಸರ್ಕಾರ ಜನರಿಗೆ ನೆರವಾಗುತ್ತಿದೆ ಎಂದು ಹೇಳಿದರು.

20 ಕೋಟಿ ಜನಧನ್‌ ಖಾತೆಗಳಿಗೆ 500 ರೂ.ನಂತೆ ಮೂರು ತಿಂಗಳು ಪಾವತಿ. ಕಿಸಾನ್‌ ಸಮ್ಮಾನ್‌ ನಿಧಿಯ ಮೊದಲ ಕಂತು 2000 ರೂ. ಗಳನ್ನು 8 ಕೋಟಿ ರೈತರ ಖಾತೆಗೆ ಸಂದಾಯವಾಗಿದೆ. 8 ಕೋಟಿ ಕುಟುಂಬ ಗಳಿಗೆ ಉಜ್ವಲಾ ಯೋಜನೆಯಡಿ ಸಿಲಿಂಡರ್‌ಅನ್ನು ಮೂರು ತಿಂಗಳು ಉಚಿತವಾಗಿ ನೀಡಲಾಗುತ್ತದೆ. 2.8 ಕೋಟಿ ವಿಕಲಚೇತನರು, ವಿಧವೆಯರು, ಹಿರಿಯ ನಾಗರಿಕರಿಗೆ ಮಾಸಿಕ ಪಿಂಚಣಿ ಹೆಚ್ಚುವರಿ 1000 ರೂ.ಗಳನ್ನು ಮೂರು ತಿಂಗಳು ನೀಡಲಾಗುತ್ತದೆ. 31,000 ಕೋಟಿ ರೂ. ಅನುದಾನದ ಹಣ ನೇರವಾಗಿ ಫಲಾನುಭವಿಗಳ
ಖಾತೆಗೆ ಜಮೆಯಾಗುತ್ತದೆ. 15,000 ಕೋಟಿ ಅನುದಾನವನ್ನು ಎಲ್ಲ ರಾಜ್ಯಗಳಿಗೆ ನೀಡಲಾಗಿದ್ದು, ಆರೋಗ್ಯ ಸೌಲಭ್ಯ, ಬಳಕೆ ಮತ್ತು ಸುಧಾರಣೆಗೆ ಮಹತ್ವ ನೀಡಲು ಕೇಂದ್ರ ಸೂಚಿಸಿದೆ ಎಂದು ತಿಳಿಸಿದರು.

3 ವರ್ಷದಲ್ಲಿ ಭಾರತ ವಿಶ್ವ ಶಕ್ತಿಯಾಗುವ ವಿಶ್ವಾಸ
ನೋಂದಾಯಿತ ಕಟ್ಟಡ ಕಾರ್ಮಿಕರಿಗೆ ತಿಂಗಳಿಗೆ 1,500 ರೂ. ಸಹಾಯ ಧನ ನೀಡಲಾಗುತ್ತಿದೆ. ಆದಾಯ ತೆರಿಗೆ, ಜಿಎಸ್‌ಟಿ ರಿಟರ್ನ್, ಇಎಂಐ ಪಾವತಿಗೆ ಮೂರು ತಿಂಗಳ ಕಾಲಾವಕಾಶ ನೀಡಲಾಗಿದೆ. ಈ ಎಲ್ಲ ಅನುದಾನ, ನೆರವು ಕಡುಬಡವರ ಜೀವನೋಪಾಯಕ್ಕೆ ಮತ್ತು ಮುಂದಿನ ದಿನಗಳ ಆರ್ಥಿಕ ಚೈತನ್ಯಕ್ಕೆ ಸ್ವಲ್ಪ ನೆರವಾಗಲಿದೆ ಎನ್ನಬಹುದು. ಲಾಕ್‌ಡೌನ್‌ ಸಂದರ್ಭದಲ್ಲಿ ಬದುಕುಳಿಯುವುದಕ್ಕೆ ಹೆಚ್ಚು ಮಹತ್ವ ನೀಡಲಾಗಿದೆ. ನಂತರದ ದಿನಗಳಲ್ಲಿ ಬದುಕು ಸಾಗಿಸಲು ಅಗತ್ಯವಿರುವ ಸೌಲಭ್ಯ ಕಲ್ಪಿಸಲು ಕೇಂದ್ರ ಕ್ರಮ ಕೈಗೊಳ್ಳಲಿದೆ. ಸತತ ಹೋರಾಟದ ಫಲದಿಂದ ಮೂರು ವರ್ಷಗಳ ಬಳಿಕ ಭಾರತ ವಿಶ್ವಶಕ್ತಿಯಾಗಿ ಬೆಳೆಯುವುದಲ್ಲಿ ಸಂದೇಹವಿಲ್ಲ ಎಂದು ಬಿ.ಎಲ್‌.ಸಂತೋಷ್‌ ವಿಶ್ವಾಸ ವ್ಯಕ್ತಪಡಿಸಿದರು. ಭಾರತೀಯ ಜೀವನ ಪದಟಛಿತಿ, ಕೈಜೋಡಿಸಿ ಹೇಳುವ ನಮಸ್ಕಾರ ಆಚರಣೆ, ಯೋಗ, ಆಯುರ್ವೇದ ಮಹತ್ವ… ಹೀಗೆ ಅನೇಕ ಸಂಗತಿಗಳು ವಿಶ್ವವ್ಯಾಪಿ ಮಹತ್ವ ಪಡೆಯುತ್ತಿವೆ. ಅಷ್ಟೇ ಅಲ್ಲದೆ ಕೋವಿಡ್ ಸಂಕಟವು ಅನೇಕ ಪ್ರಶಿಕ್ಷಣವನ್ನು ಕೇಂದ್ರ ಸರ್ಕಾರಕ್ಕೆ ಹಾಗೂ ಭಾರತೀಯರಿಗೆ ನೀಡಿದೆ. ಸ್ವಾವಲಂಬನೆಯ ಮಹತ್ವದ ಪಾಠ ತಿಳಿಸಿಕೊಟ್ಟಿದೆ. ಇದೇ ಸಂದರ್ಭದಲ್ಲಿ ಚೀನಾ ತನ್ನ ವಿಶ್ವಾಸಾರ್ಹತೆ ಕಳೆದುಕೊಂಡಿದೆ. ಇದರಿಂದಾಗಿ ಅನೇಕ ರಾಷ್ಟ್ರಗಳು ತಮ್ಮ ಆರ್ಥಿಕ ವಹಿವಾಟು ಮತ್ತು ಉದ್ಯಮಗಳನ್ನು ಚೀನಾದಿಂದ ಸ್ಥಳಾಂತರಿಸಲು ಮುಂದಾಗಿವೆ. ಈ ಅವಕಾಶಗಳನ್ನು ಪ್ರಧಾನಿ ನೇತೃತ್ವದ ಕೇಂದ್ರ ಸರ್ಕಾರ ಸದುಪಯೋಗಪಸಿಕೊಳ್ಳುವತ್ತ ಗಮನ ಹರಿಸಿದೆ. ಆ ಮೂಲಕ ಅನೇಕ ಭಾರತೀಯ ಉದ್ಯಮಿಗಳು ಹೂಡಿಕೆ ಮಾಡಿ ಕೈಗಾರಿಕೋದ್ಯಮ ಕ್ಷೇತ್ರದಲ್ಲಿ ನವ ಸಂಚಲನ ಮೂಡುವ ಸಾಧ್ಯತೆಗಳಿವೆ ಎಂದು ತಿಳಿಸಿದರು.

ಟಾಪ್ ನ್ಯೂಸ್

1-eena

ವಚನ ಸಾಹಿತ್ಯದಲ್ಲಿ ಶ್ರೀಕೃಷ್ಣನ ಮಾತು: ಬೃಹತ್‌ ಗೀತೋತ್ಸವ ಕಾರ್ಯಕ್ರಮದಲ್ಲಿ ವೀಣಾ ಬನ್ನಂಜೆ

1-cocco

230 ರೂ. ಗಡಿ ದಾಟಿದ ಹಸಿ ಕೊಕ್ಕೊ ಧಾರಣೆ

1-shadaa

ರಾಜ್ಯ ಸರಕಾರಿ ನೌಕರರ ಸಂಘ ಅಧ್ಯಕ್ಷ ಷಡಾಕ್ಷರಿ ಮರು ಆಯ್ಕೆ

suicide

Belgavi; ಹೆರಿಗೆ ಬಳಿಕ ಮತ್ತೋರ್ವ ಬಾಣಂತಿ ಸಾವು

1-havy

Havyaka Sammelana; ಅಡಿಕೆ ಬೆಳೆಗಾರರ ಹಿತ ರಕ್ಷಣೆಗೆ ಕೇಂದ್ರ ಬದ್ಧ: ಸಚಿವ ಜೋಶಿ

Kharge (2)

Manmohan Singh ಅಂತ್ಯಕ್ರಿಯೆ ಸ್ಮಾರಕ ನಿರ್ಮಿಸಬಹುದಾದ ಸ್ಥಳದಲ್ಲಿ ನಡೆಸಲು ಖರ್ಗೆ ಮನವಿ

1-weqeqw

Traffic; ಉಡುಪಿ ನಗರದಲ್ಲಿ 5 ದಿನ ರಸ್ತೆ ಮಾರ್ಗಗಳಲ್ಲಿ ಮಾರ್ಪಾಡು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-adaa

ಕೃಷಿ ಬೆಲೆ ಆಯೋಗದ ಅಧ್ಯಕ್ಷರಾಗಿ ಅಶೋಕ ದಳವಾಯಿ ನೇಮಕ

1-shadaa

ರಾಜ್ಯ ಸರಕಾರಿ ನೌಕರರ ಸಂಘ ಅಧ್ಯಕ್ಷ ಷಡಾಕ್ಷರಿ ಮರು ಆಯ್ಕೆ

suicide

Belgavi; ಹೆರಿಗೆ ಬಳಿಕ ಮತ್ತೋರ್ವ ಬಾಣಂತಿ ಸಾವು

1-havy

Havyaka Sammelana; ಅಡಿಕೆ ಬೆಳೆಗಾರರ ಹಿತ ರಕ್ಷಣೆಗೆ ಕೇಂದ್ರ ಬದ್ಧ: ಸಚಿವ ಜೋಶಿ

State BJP: ತೀವ್ರ ಕುತೂಹಲ ಮೂಡಿಸಿದ ವಿಜಯೇಂದ್ರ -ಸಿ.ಟಿ.ರವಿ ಭೇಟಿ 

State BJP: ತೀವ್ರ ಕುತೂಹಲ ಮೂಡಿಸಿದ ವಿಜಯೇಂದ್ರ -ಸಿ.ಟಿ.ರವಿ ಭೇಟಿ 

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-eena

ವಚನ ಸಾಹಿತ್ಯದಲ್ಲಿ ಶ್ರೀಕೃಷ್ಣನ ಮಾತು: ಬೃಹತ್‌ ಗೀತೋತ್ಸವ ಕಾರ್ಯಕ್ರಮದಲ್ಲಿ ವೀಣಾ ಬನ್ನಂಜೆ

1-cocco

230 ರೂ. ಗಡಿ ದಾಟಿದ ಹಸಿ ಕೊಕ್ಕೊ ಧಾರಣೆ

1-sid-male

Udupi; ಸಿದ್ದಾಪುರ ಪರಿಸರದಲ್ಲಿ ಮಳೆ

1-adaa

ಕೃಷಿ ಬೆಲೆ ಆಯೋಗದ ಅಧ್ಯಕ್ಷರಾಗಿ ಅಶೋಕ ದಳವಾಯಿ ನೇಮಕ

1-shadaa

ರಾಜ್ಯ ಸರಕಾರಿ ನೌಕರರ ಸಂಘ ಅಧ್ಯಕ್ಷ ಷಡಾಕ್ಷರಿ ಮರು ಆಯ್ಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.