ಅವಸರದ ಬದುಕಿನ ನಡುವೆ “ಉತ್ಸಾಹದ ಓಟ’
Team Udayavani, May 16, 2022, 1:37 AM IST
ಬೆಂಗಳೂರು: ದೇಶಕ್ಕಾಗಿ ಮತ್ತು ಜೀವನೋತ್ಸಾಹಕ್ಕಾಗಿ ಪ್ರತಿಷ್ಠಿತ ಟಿಸಿಎಸ್ ಸಂಸ್ಥೆ ಹಮ್ಮಿಕೊಂಡಿದ್ದ ವರ್ಲ್ಡ್ ಪ್ರೀಮಿಯರ್ 10ಕೆ ರನ್’ಗೆ ರವಿವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಾಲನೆ ನೀಡಿದರು.
ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಎಲ್ಲರ ಜೀವನದಲ್ಲಿ ಈ ಓಟ ಹೊಸ ಚೈತನ್ಯ ತರಲಿದೆ. ಅನೇಕ ಸರಕಾರೇತರ ಸಂಸ್ಥೆಗಳು ಈ ವೇದಿಕೆಯ ಮೂಲಕ ತಮ್ಮ ಸಾಮಾಜಿಕ ಕೆಲಸಕ್ಕೆ ದೇಣಿಗೆ ಸಂಗ್ರಹಕ್ಕೆ ಟಿಸಿಎಸ್ ಅವಕಾಶ ಕಲ್ಪಿಸಿಕೊಟ್ಟಿದೆ. ಈ ಮೂಲಕ ಸಾಮಾಜಿಕ ಹೊಣೆಗಾರಿಕೆಯನ್ನು ಮೆರೆದಿದೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕಂಠೀರವ ಕ್ರೀಡಾಂಗಣದಿಂದ ಹೊರಟ ಮ್ಯಾರಥಾನ್ ಓಟ, ವಿಧಾನಸೌಧ, ಕಬ್ಬನ್ ಉದ್ಯಾನ ಸೇರಿದಂತೆ ನಗರದ ವಿವಿಧೆಡೆ ಸಂಚರಿಸಿ ಸಾರ್ವಜನಿಕರಲ್ಲಿ ಅರಿವು ಮೂಡಿಸಲಾಯಿತು. ಕ್ರೀಡಾಪಟುಗಳು, ಅಂಗವಿಕಲರು, ಸೆಲಿಬ್ರಿಟಿಗಳು, ಜನಪ್ರತಿನಿಧಿಗಳು ಸೇರಿದಂತೆ 17 ಸಾವಿರಕ್ಕೂ ಅಧಿಕ ಜನ ಭಾಗವಹಿಸಿದ್ದರು. ಮೈಸೂರು ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್, ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಪತ್ನಿ ಅಶ್ವಿನಿ, ಉದ್ದ ಜಿಗಿತ ಪಟು ಅಂಜು ಬಾಬಿ ಜಾರ್ಜ್ ಭಾಗವಹಿಸುವ ಮೂಲಕ ಗಮನಸೆಳೆದರು.
ಮನರಂಜನೆಗೆ ವಯಸ್ಸಿನ ಮಿತಿ ಇಲ್ಲ; ಇಲ್ಲಿ ವಯಸ್ಸು ಒಂದು ಸಂಖ್ಯೆ ಅಷ್ಟೇ’, ಬದುಕು ಬೇಕು; ಆತ್ಮಹತ್ಯೆ ಬೇಡ’, ನಾನು ಬದುಕನ್ನು ಪ್ರೀತಿಸುತ್ತೇನೆ; ಆತ್ಮಹತ್ಯೆ ನಿಲ್ಲಲಿ’, ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ’ ಎಂದು ಫಲಕಗಳನ್ನು ಹಿಡಿದ ಹಿರಿಯರು, ಯುವಕರು ವಿವಿಧ ಭಂಗಿಗಳಲ್ಲಿ ಗಮನಸೆಳೆದರು. ಮಾರ್ಗದುದ್ದಕ್ಕೂ ನೀರು ಮತ್ತು ಪಾನೀಯ ವ್ಯವಸ್ಥೆ ಮಾಡಲಾಗಿತ್ತು. ಕಳೆದ ಮೂರ್‍ನಾಲ್ಕು ದಿನ ನಿರಂತರ ಮಳೆ ಇದ್ದುದರಿಂದ ಬೇಸಿಗೆಯಲ್ಲೂ ಚುಮುಚುಮು ಚಳಿ ಇತ್ತು. ರಕ್ಷಣೆಗಾಗಿ ಜಾಕೆಟ್‌ಗಳನ್ನು ಹಾಕಿಕೊಂಡು ಜನ ಅತಿ ಉತ್ಸಾಹದಿಂದ ಭಾಗವಹಿಸಿದ್ದರು.ಇದರಿಂದ ಜೀವನೋತ್ಸಾಹಕ್ಕಾಗಿ ಮಾಡಿದ 10ಕೆ’ ಓಟವು ಉದ್ದೇಶಕ್ಕೆ ಅನ್ವರ್ಥಕವಾಗಿತ್ತು.
ಸಚಿವರಾದ ಡಾ| ಸಿ.ಎನ್. ಅಶ್ವತ್ಥ ನಾರಾಯಣ, ಡಾ| ನಾರಾಯಣಗೌಡ, ವಿಧಾನ ಪರಿಷತ್ ಸದಸ್ಯ ಕೆ. ಗೋವಿಂದರಾಜು, ಸರಕಾರದ ಅಪರ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಮತ್ತಿತರರು ಭಾಗವಹಿಸಿದ್ದರು. ಕೊನೆಯಲ್ಲಿ ಹಲವು ವಿಭಾಗಗಳಲ್ಲಿ ಕ್ರೀಡಾಪಟುಗಳಿಗೆ ಬಹುಮಾನ ವಿತರಿಸಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Congress: ಸಿದ್ದರಾಮಯ್ಯ ಮಾಸ್ ಲೀಡರ್, ಮುಗಿಸಲು ಬಿಜೆಪಿ ಯತ್ನ: ಡಿ.ಕೆ.ಶಿವಕುಮಾರ್
Waqf: ಪಾಕಿಸ್ತಾನದಲ್ಲಿ ವಕ್ಫ್ ಆಸ್ತಿ 8 ಲಕ್ಷ, ಭಾರತದಲ್ಲಿಯೇ 9.5 ಲಕ್ಷ ಎಕರೆ: ಯತ್ನಾಳ್
By Election: ಸಿದ್ದರಾಮಯ್ಯ ಜೈಲಿಗೆ ಹೋಗುವುದು ನಿಶ್ಚಿತ: ಬಿ.ಎಸ್.ಯಡಿಯೂರಪ್ಪ ಭವಿಷ್ಯ
Sirsi: ಗವಿನಗುಡ್ಡ ಸುತ್ತ ಕಬ್ಬು, ಭತ್ತದ ಗದ್ದೆಗಳಿಗೆ ಕಾಡಾನೆ ದಾಳಿ… ಬೆಳೆ ನಾಶ
Muddebihal: ವಕ್ಫ್ ಆಸ್ತಿ ವಿವಾದ: ಸಿಎಂಗೆ ಬುದ್ದಿಭ್ರಮಣೆ ಆಗಿದೆ… ನಡಹಳ್ಳಿ ವಾಗ್ದಾಳಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.