ಪೂಜೆ ವಿವಾದ; ಎರಡು ಬಣಗಳ ನಡುವೆ ಮಾರಾಮಾರಿ
Team Udayavani, Jun 6, 2019, 3:00 AM IST
ನಾಗಮಂಗಲ: ತಾಲೂಕಿನ ಮುಳುಕಟ್ಟೆ ಗ್ರಾಮದಲ್ಲಿರುವ ಇತಿಹಾಸ ಪ್ರಸಿದ್ಧ ಮುಳುಕಟ್ಟಮ್ಮ ದೇವಾಲಯದ ಪೂಜೆ ವಿಚಾರವಾಗಿ ಎರಡು ಬಣಗಳ ನಡುವೆ ಬುಧವಾರ ಮಾರಾಮಾರಿ ನಡೆದಿದ್ದು ಘಟನೆ ಸಂಬಂಧ ಮುಳುಕಟ್ಟೆ ಗ್ರಾಮದ 13 ಮಂದಿಯನ್ನು ಬಂಧಿಸಲಾಗಿದೆ.
ದೇವಾಲಯದ ಪೂಜೆ ಸಂಬಂಧ ಟ್ರಸ್ಟ್ ಎರಡು ಬಣಗಳನ್ನು ನೇಮಿಸಿತ್ತು. ಕಾರಣಾಂತರಗಳಿಂದ ಒಂದು ಬಣದವರು ಅನೇಕ ವರ್ಷಗಳಿಂದ ಪೂಜೆಯಿಂದ ಹೊರಗುಳಿದಿದ್ದರು. ಅದೇ ಬಣದವರು ಬುಧವಾರ ಬೆಳಗ್ಗೆ ಏಕಾಏಕಿ ದೇವಾಲಯಕ್ಕೆ ಬಂದು ಪೂಜೆ ವಿಚಾರ ಮಾತನಾಡಿದ್ದಾರೆ.
ಆಗ ವಾದ ವಿವಾದ ನಡೆದು ಎರಡು ಬಣಗಳ ನಡುವೆ ಮಾತಿ ಚಕಮಕಿ ತಾರಕಕ್ಕೇರಿ, ಕೈ ಕೈ ಮಿಲಾಯಿಸಿ ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ. ಪೂಜೆಯಿಂದ ಹೊರಗುಳಿದಿದ್ದವರು ದೇವಾಲಯವನ್ನು ಒಳಗಿನಿಂದ ಬೀಗ ಹಾಕಿಕೊಂಡು ಮಾರಕಾಸ್ತ್ರಗಳಿಂದ ನಮ್ಮ ಹಲ್ಲೆ ಮಾಡಲು ಯತ್ನಿಸಿದರೆಂದು ದೇಗುಲದ ಅರ್ಚಕರು ಪೊಲೀಸ್ ಠಾಣೆಗೆ ದೂರವಾಣಿ ಮೂಲಕ ಕರೆ ಮಾಡಿ ತಿಳಿಸಿದ್ದಾರೆ.
ಸ್ಥಳಕ್ಕೆ ಆಗಮಿಸಿದ ಪೊಲೀಸರು ಹಾರೆಯಿಂದ ದೇವಾಲಯದ ಮುಖ್ಯದ್ವಾರ ಮುರಿದು ಒಳ ಹೋಗಿದ್ದಾರೆ. ಪೋಲೀಸರೊಂದಿಗೂ ಮಾತಿನ ಚಕಮಕಿ, ತಳ್ಳಾಟ ನೂಕಾಟ ನಡೆದು, ಲಘು ಲಾಠಿ ಪ್ರಹಾರ ನಡೆಸಿ ಪರಿಸ್ಥಿತಿ ಶಾಂತಗೊಳಿಸಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Udupi: ಶ್ರೀಕೃಷ್ಣ ಮಠ: ಗೀತೋತ್ಸವಕ್ಕೆ ಪರ್ತಗಾಳಿ ಶ್ರೀಗಳಿಗೆ ಆಹ್ವಾನ
Udupi: ಸಮಾಜ ರೂಪಿಸುವಲ್ಲಿ ಯಕ್ಷಗಾನ ಪಾತ್ರ ಹಿರಿದು: ಪೇಜಾವರ ಶ್ರೀ
Kaup: ಹೊಸ ಮಾರಿಗುಡಿ ದೇವಸ್ಥಾನ: ಬೆಂಗಳೂರಿನಲ್ಲಿ ವಾಗೀಶ್ವರಿ ಪೂಜೆ, ಲೇಖನ ಸಂಕಲ್ಪ
Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಚಿತ್ತೂರು ಪ್ರಭಾಕರ ಆಚಾರ್ಯರಿಗೆ ಗೌರವಾರ್ಪಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.