ಮನೆ ಗೋಡೆ ಮೇಲೆ ಪಾಕ್ ಜಿಂದಾಬಾದ್ ಬರಹ
Team Udayavani, Mar 2, 2020, 3:05 AM IST
ಸಾಂದರ್ಭಿಕ ಚಿತ್ರ
ಕಲಬುರಗಿ: ಮನೆಯೊಂದರ ಗೋಡೆ ಮೇಲೆ “ಪಾಕಿಸ್ತಾನ ಜಿಂದಾಬಾದ್’ ಎಂದು ಬರೆದು ವಿಕೃತಿ ಮೆರೆದ ಘಟನೆ ನಗರದ ಸಾತ್ ಗುಂಬಜ್ ಬಳಿ ಶನಿವಾರ ರಾತ್ರಿ ನಡೆದಿದ್ದು, ಪೊಲೀಸರು ಕಿಡಿಗೇಡಿಗಳ ವಿರುದ್ಧ ರಾಜದ್ರೋಹ ಪ್ರಕರಣ ದಾಖಲಿಸಿದ್ದಾರೆ.
ಸಾತ್ ಗುಂಬಜ್ ಸಮೀಪವಿರುವ ಕಿಶನ್ರಾವ್ ಹಾಗರಗುಂಡಗಿ ಎನ್ನುವರ ಮನೆ ಗೋಡೆ ಮೇಲೆ ಕಿಡಿಗೇಡಿಗಳು, ಪ್ರಧಾನಿ ಮೋದಿ ವಿರುದ್ಧ ಅವಾಚ್ಯ ಶಬ್ದ ಬಳಕೆ ಮಾಡಿದ್ದಾರೆ. ಭಾನುವಾರ ಬೆಳಗ್ಗೆ ವಿಷಯ ತಿಳಿದು ತಕ್ಷಣವೇ ಸ್ಥಳಕ್ಕೆ ಆಗಮಿಸಿದ ಪೊಲೀಸರು ಬರಹ ಅಳಿಸಿ ಹಾಕಿದ್ದಾರೆ.
ಪಾಕ್ ಪರ ಪ್ರೇಮ ಮೆರೆದು ವಿಕೃತ ವೆಸಗಿದ ಆರೋಪಿಗಳು ನಾಪತ್ತೆಯಾಗಿ ದ್ದಾರೆ. ಇದೇ ವೇಳೆ ಕಾರಿಗೂ ಬೆಂಕಿ ಹಚ್ಚಲು ದುಷ್ಕರ್ಮಿಗಳು ಯತ್ನಿಸಿದ್ದರು ಎನ್ನುವ ಅಂಶ ಬೆಳಕಿಗೆ ಬಂದಿದೆ. ಕಿಶನ್ರಾವ್ ಮನೆ ಎದುರು ಅಬ್ದುಲ್ಲಾ ಎನ್ನುವವರ ಕಾರು ನಿಲ್ಲಿಸಲಾಗಿತ್ತು.
ಈ ಕಾರಿಗೆ ಬೆಂಕಿ ಹಚ್ಚಲು ದುಷ್ಕರ್ಮಿಗಳು ಸಂಚು ರೂಪಿಸಿದ್ದರು ಎಂದು ಗೊತ್ತಾಗಿದೆ. ವಿಕೃತಿ ಮೆರೆದವರ ಪತ್ತೆಗೆ ಪೊಲೀಸರು ಶೋಧ ಆರಂಭಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Border-Gavaskar Test series ಇಂದಿನಿಂದ: ಹೋರಾಟಕ್ಕೆ ಭಾರತ-ಆಸ್ಟ್ರೇಲಿಯ ಸಿದ್ಧ
New Delhi: ರಾಷ್ಟ್ರ ರಾಜಧಾನಿಗೆ ನಂದಿನಿ ಲಗ್ಗೆ: ಹೈನುಗಾರರಿಗೂ ಸಿಗಲಿ ಮನ್ನಣೆ
Yasin Malik ವಿಚಾರಣೆಗೆ ತಿಹಾರ್ ಜೈಲಿನಲ್ಲೇ ಕೋರ್ಟ್ ರೂಂ: ಸುಪ್ರೀಂ
General Motors;1,000 ಉದ್ಯೋಗಿಗಳು ಕೆಲಸದಿಂದ ವಜಾ
Tallest and shortest; ವಿಶ್ವದ ಅತೀ ಕುಬ್ಜ, ಅತೀ ಎತ್ತರದ ಮಹಿಳೆಯರ ಸಮಾಗಮ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.