Mysuru Dasara; ಅರಮನೆಯಲ್ಲಿ ಡಬಲ್ ಸಂಭ್ರಮ: ಯದುವೀರ್ ಅವರಿಗೆ 2ನೇ ಮಗು ಜನನ
ಆಯುಧ ಪೂಜೆ ದಿನವೇ ಸಿಹಿ ಸುದ್ದಿ.. ವಿಜಯ ದಶಮಿ ದಿನ ರಾಜ ಪೀಠದ ವಿಧಿ ವಿಧಾನ ನಡೆಸುವುದು ಹೇಗೆ?
Team Udayavani, Oct 11, 2024, 6:52 PM IST
ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮೈಸೂರು ರಾಜವಂಶದಲ್ಲಿ ಸಂಭ್ರವನ್ನು ಡಬಲ್ ಮಾಡಿದೆ. ರಾಜವಂಶಸ್ಥ, ಮೈಸೂರು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರಿಗೆ ಎರಡನೇ ಪುತ್ರೋತ್ಸವದ ಸಂಭ್ರಮ ಮನೆ ಮಾಡಿದೆ. ಆಯುಧ ಪೂಜೆ ದಿನವಾದ ಶುಕ್ರವಾರ(ಅ11) ತ್ರಿಷಿಕಾ ಕುಮಾರಿ ಅವರು ಎರಡನೇ ಪುತ್ರನಿಗೆ ಜನ್ಮ ನೀಡಿದ್ದಾರೆ.
ದಸರಾ ವೇಳೆಯೇ ರಾಜಮನೆತನ ಸಂಭ್ರಮ ಆಚರಿಸುತ್ತಿದ್ದು, ತ್ರಿಷಿಕಾ ಕುಮಾರಿ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಮಗುವಿಗೆ ಜನ್ಮ ನೀಡಿದ್ದು, ತಾಯಿ ಮತ್ತು ಮಗು ಆರೋಗ್ಯವಾಗಿದ್ದಾರೆ ಎಂದು ತಿಳಿದು ಬಂದಿದೆ.
ವಿಧಿವಿಧಾನಗಳು ಹೇಗೆ?
ಪುತ್ರನ ಜನನವಾದ ಕಾರಣ ಯದುವೀರ್ ಅವರಿಗೆ ಜಾತ ಶೌಚ (ವೃದ್ಧಿ) ಆಚರಿಸಬೇಕಾಗಿದ್ದು, ಅರಮನೆಯಲ್ಲಿ ನಡೆಯಬೇಕಾಗಿರುವ ಧಾರ್ಮಿಕ ವಿಧಿಗಳಿಗೆ ಯಾವುದೇ ಅಡಚಣೆ ಇಲ್ಲ ಎಂದು ಹೇಳಲಾಗಿದೆ. ಆಗಮಿಕರು ಪೂಜೆ ಮಾಡಲಿದ್ದು, ಯದುವೀರ್ ಅವರು ಈಗಾಗಲೇ ಕಂಕಣ ಧಾರಣೆ ಮಾಡಿದ್ದಾರೆ. ವಿಜಯದಶಮಿ ಜಂಬೂ ಸವಾರಿ ಯಾತ್ರೆ ಮುಗಿಯುವವರೆಗೆ ಯಾವುದೇ ಜಾತ ಶೌಚ ಅನ್ವಯವಾಗುವುದಿಲ್ಲ ಎಂದು ಪಂಡಿತರು ತಿಳಿಸಿದ್ದಾರೆ.
ನಾಳೆಯೂ(ವಿಜಯ ದಶಮಿ) ಯದುವೀರ್ ಅವರು ಕಂಕಣ ಸಹಿತ ಅಪರಾಚಿತ ಪೂಜೆ, ಶಮಿ ವೃಕ್ಷಕ್ಕೆ ಪೂಜೆ ಮಾಡಬೇಕಾಗಿದೆ ಎಂದು ಪುರೋಹಿತರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.ಸಾಮಾನ್ಯವಾಗಿ ಆಯುಧ ಪೂಜೆಯ ರಾತ್ರಿ ಕಂಕಣವನ್ನು ತೆಗೆಯುವ ಕ್ರಮವಿದೆ.
2016 ರಲ್ಲಿ ಯದುವೀರ್ ಒಡೆಯರ್ ಅವರು ರಾಜಸ್ಥಾನದ ಡುಂಗರ್‌ಪುರ ರಾಜಮನೆತನದ ಹರ್ಷವರ್ಧನ್ ಸಿಂಗ್ ಮತ್ತು ಮಹೇಶ್ರಿ ಕುಮಾರಿ ಅವರ ಪುತ್ರಿ ತ್ರಿಷಿಖಾ ಕುಮಾರಿ ದೇವಿ ಅವರನ್ನು ವಿವಾಹವಾಗಿದ್ದರು. 2017 ಡಿಸೆಂಬರ್ 6 ರಂದು ಮೊದಲ ಪುತ್ರನಿಗೆ ಜನ್ಮ ನೀಡಿದ್ದರು. ಆದ್ಯವೀರ್ ನರಸಿಂಹರಾಜ ಒಡೆಯರ್ ಎಂಬ ಹೆಸರು ಮೊದಲ ಮಗನಿಗೆ ಇಡಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Guarantee schemes; ಸಿದ್ದರಾಮಯ್ಯ ವಿರುದ್ಧದ ಅರ್ಜಿ: ವಿಚಾರಣೆ ಡಿ. 6ಕ್ಕೆ ಮುಂದೂಡಿಕೆ
Congress: ಸರ್ಕಾರದಲ್ಲಿ ಒಬ್ಬರು ಏತಿ ಅಂದರೆ ಮತ್ತೊಬ್ಬರು ಪ್ರೇತಿ ಅಂತಾರೆ: ಆರ್.ಅಶೋಕ್
50 cr for 50 Cong MLAs ; ಎಸ್ ಐಟಿ ತನಿಖೆಗೆ ಎಚ್.ಡಿ.ಕುಮಾರಸ್ವಾಮಿ ಒತ್ತಾಯ
Save Life: ಆಯತಪ್ಪಿ ಬಿದ್ದು ರೈಲಿನಡಿ ಸಿಲುಕುತ್ತಿದ್ದ ಪ್ರಯಾಣಿಕನ ಕಾಪಾಡಿದ ಹೋಂಗಾರ್ಡ್!
Belagavi: ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡುವ ಸ್ಥಿತಿ ಬರಲಿದೆ: ಈರಣ್ಣ ಕಡಾಡಿ
MUST WATCH
ಹೊಸ ಸೇರ್ಪಡೆ
Congress: ರಾಹುಲ್‌ಗೆ ಸಂವಿಧಾನದ ಎಬಿಸಿ ಕೂಡ ಗೊತ್ತಿಲ್ಲ: ಸಚಿವ ಜೆ.ಪಿ.ನಡ್ಡಾ ಟೀಕೆ
Maharashtra Election: ಮಲ್ಲಿಕಾರ್ಜುನ ಖರ್ಗೆ ಬಳಿಕ ಯೋಗಿ ವಿರುದ್ಧ ಶರದ್ ಪವಾರ್ ಟೀಕೆ
Rahul Gandhi; ಕಾಪ್ಟರ್ ಟೇಕಾಫ್ ವಿಳಂಬ: ಕಾಂಗ್ರೆಸ್‌ನಿಂದ ಆಕ್ಷೇಪ
Pro Kabaddi League: ಪಾಟ್ನಾ ಪೈರೆಟ್ಸ್ ಪರಾಕ್ರಮ
Ranji match: ಉತ್ತರಪ್ರದೇಶ ಬೃಹತ್ ಮೊತ್ತ ಗೆಲುವಿಗೆ ಕರ್ನಾಟಕ ಹೋರಾಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.