Yediyurappa 82 ವರ್ಷ ವಯಸ್ಸಿನಲ್ಲಿ ಬೇಕಿತ್ತಾ?:ಕೆಂಡಾಮಂಡಲವಾದ ಸಿಎಂ ಸಿದ್ದರಾಮಯ್ಯ
ಮುಡಾ.. ಬಿಜೆಪಿ ಸರ್ಕಾರವೇ ಕಾನೂನಾತ್ಮಕವಾಗಿ ಭೂಮಿ ನೀಡಿದೆ.. ಮೈಸೂರು ಸಮಾವೇಶದಲ್ಲಿ ಎಲ್ಲ ಬಿಚ್ಚಿಡುತ್ತೇನೆ !!
Team Udayavani, Aug 7, 2024, 12:03 PM IST
ಮೈಸೂರು: ‘ನ್ಯಾಯಾಲಯದ ದಯೆಯಿಂದ ಯಡಿಯೂರಪ್ಪ ಬದುಕಿದ್ದಾರೆ.ಇಲ್ಲವಾದರೇ ಯಡಿಯೂರಪ್ಪ ಜೈಲಲ್ಲಿ ಇರಬೇಕಿತ್ತು’ ಎಂದು ಸಿಎಂ ಸಿದ್ದರಾಮಯ್ಯ ಬುಧವಾರ (ಆಗಸ್ಟ್ 7) ಕಿಡಿ ಕಾರಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ‘ಪಾದ ಯಾತ್ರೆ ಮುಗಿಯುವಷ್ಟರಲ್ಲಿ ಸಿದ್ದರಾಮಯ್ಯ ರಾಜೀನಾಮೆ ನೀಡುತ್ತಾರೆ’ ಎನ್ನುವ ಹೇಳಿಕೆ ಕುರಿತು ಕಿಡಿ ಕಾರಿ ”ಯಡಿಯೂರಪ್ಪ ಮೇಲೆ ಪೋಕ್ಸೊ ಕೇಸ್ ಇದೆ. ನ್ಯಾಯಾಲಯದ ದಯೆಯಿಂದ ಯಡಿಯೂರಪ್ಪ ಬದುಕಿದ್ದಾರೆ.ಇಲ್ಲವಾದರೇ ಯಡಿಯೂರಪ್ಪ ಜೈಲಲ್ಲಿ ಇರಬೇಕಿತ್ತು.82 ವರ್ಷ ವಯಸ್ಸಿನಲ್ಲಿ ಇದು ಬೇಕಿತ್ತಾ? ಚಿಕ್ಕ ಮಗುವಿನ ಮೇಲೆ ಈ ರೀತಿ ಮಾಡಬೇಕಿತ್ತಾ? ನನ್ನ ಬಗ್ಗೆ ಮಾತನಾಡುವುದ್ದಕ್ಕೆ ಯಡಿಯೂರಪ್ಪ ಅವರಿಗೆ ಯಾವ ನೈತಿಕತೆ ಇದೆ? ಯಡಿಯೂರಪ್ಪ ರಾಜಕೀಯ ಜೀವನದಿಂದ ನಿವೃತ್ತಿಯಾಗಬೇಕಿತ್ತು’ ಎಂದು ಕಿಡಿ ಕಾರಿದರು.
ಮುಡಾದಲ್ಲಿ ಬದಲಿ ಭೂಮಿ ಪಡೆದಿರುವ ವಿಚಾರಕ್ಕೆ ಸಂಬಂಧಿಸಿ ಪ್ರತಿಕ್ರಿಯಿಸಿ ‘ಬದಲಿ ಭೂಮಿ ಕೊಡುವುದು ಬೇಡ ಎಂದು ನಾನು ಹೇಳಿದ್ದೆ.ನನ್ನ ಪತ್ನಿ ಬದಲಿ ನಿವೇಶನಕ್ಕೆ ಅರ್ಜಿ ಕೊಟ್ಟಾಗ ನಾನು ಸಿಎಂ ಆಗಿದ್ದೆ.ನಾನು ಸಿಎಂ ಆಗಿರುವ ತನಕ ಕೊಡಬೇಡಿ ಎಂದಿದ್ದೆ.ಪ್ರಭಾವ ಬಳಸುವುದಿದ್ದರೇ ಅಂದೇ ಬಳಸಿ ಭೂಮಿ ಕೊಡಲು ಹೇಳುತ್ತಿದ್ದೆ. ಸಿಎಂ ಆಗಿ ಕೊಡಲು ಆಗಿತ್ತಿರಲಿಲ್ಲವೇ?.ನನ್ನ ಪತ್ನಿ 2021ರಲ್ಲ ಅರ್ಜಿ ಹಾಕಿದ್ದು, ಬಿಜೆಪಿ ಸರ್ಕಾರ ಕಾನೂನಾತ್ಮಕವಾಗಿ ಭೂಮಿ ನೀಡಿದೆ.ಮುಡಾ ವಿಚಾರದಲ್ಲಿ ನಾನು ಯಾವುದೇ ತಪ್ಪು ಮಾಡಿಲ್ಲ, ಪ್ರಭಾವ ಬಳಸಿಲ್ಲ’ ಎಂದರು.
‘ಯಡಿಯೂರಪ್ಪ ಜೈಲಿಗೆ ಹೋಗಿದ್ದ ಪ್ರಕರಣವೇ ಬೇರೆ, ಇದೇ ಬೇರೆ. ಯಡಿಯೂರಪ್ಪ ಡಿನೋಟಿಫೈ ಮಾಡಿದ್ದರು., ಚೆಕ್ ಮೂಲಕ ಹಣ ಪಡೆದಿದ್ದರು.ಇಲ್ಲಿ ನಾನು ಯಾವುದೇ ಹಣ ಪಡೆದಿಲ್ಲ, ಪ್ರಭಾವ ಬೀರಿಲ್ಲ’ ಎಂದರು.
”ಇಂದು ಬೇಡ ಮೈಸೂರು ಸಮಾವೇಶದಲ್ಲಿ ಎಲ್ಲವನ್ನೂ ಬಿಚ್ಚಿಡುತ್ತೇನೆ. ಬಿಜೆಪಿ-ಜೆಡಿಎಸ್ ಸರ್ಕಾರದ ಅವಧಿಯ ಎಲ್ಲ ಹಗರಣಗಳನ್ನ ಬಿಚ್ಚಿಡುತ್ತೇನೆ.ಜೆಡಿಎಸ್- ಬಿಜೆಪಿ ಏನೆಲ್ಲ ಹಗರಣಗಳನ್ನ ಮಾಡಿದ್ದಾರೆ. ಎಲ್ಲವನ್ನೂ ಸಂಪೂರ್ಣವಾಗಿ ಸಮಾವೇಶದಲ್ಲಿ ತೆರೆದಿಡುತ್ತೇನೆ’ ಎಂದು ಕಿಡಿ ಕಾರಿದರು.
‘ಸುಳ್ಳುಗಳನ್ನ ಹೆದುರಿಸುವ ತಾಖತ್ತು ನನಗೆ ಇದೆ.ಇವರ ಸುಳ್ಳುಗಳಿಗೆ ನಾನು ಹೆದರುವುದಿಲ್ಲ.ಬಿಜೆಪಿಯವರದ್ದೇ ಭ್ರಷ್ಟ ಸರ್ಕಾರ.ಅವರದ್ದೇ ಹಗರಣಗಳ ಬಗ್ಗೆ ತನಿಖೆ ನಡೆಯುತ್ತಿದೆ.ಅಪರೇಷನ್ ಕಮಲದ ಮೂಲಕ ಸರ್ಕಾರ ದುರ್ಬಲಗೊಳಿಸಲು ಯತ್ನ ಮಾಡಿದ್ದರು. ಅಪರೇಷನ್ ಕಮಲ ವಿಫಲವಾದ ಹಿನ್ನಲೆಯಲ್ಲಿ ಬಿಜೆಪಿ- ಜೆಡಿಎಸ್ ನವರು ನನ್ನನ್ನ ಟಾರ್ಗೆಟ್ ಮಾಡಿ ಸರ್ಕಾರವನ್ನ ದುರ್ಬಲಗೊಳಿಸಲು ಯತ್ನಿಸುತ್ತಿದ್ದಾರ.ಇದರಲ್ಲಿ ಅವರು ಯಶಸ್ವಿಯಾಗುವುದಿಲ್ಲ.ಜನ ಇವರ ಸುಳ್ಳನ್ನ ನಂಬುವುದಿಲ್ಲ.ಹಿಂದೆಯೂ ಈ ಪ್ರಯತ್ನ ಮಾಡಿದ್ದರು’ ಎಂದರು.
‘ರಾಜ್ಯಪಾಲರಿಂದ ನನಗೆ ಬಂದಿರುವುದು ಒಂದೇ ನೋಟಿಸ್.ಅದಕ್ಕೆ ನಾನು ಉತ್ತರ ಕೊಟ್ಟಿದ್ದೇನೆ.ಮುಖ್ಯಕಾರ್ಯದರ್ಶಿಗಳು ರಾಜ್ಯಪಾಲರನ್ನ ಭೇಟಿ ಮಾಡಿದ್ದು ಬೇರೆ ವಿಚಾರಕ್ಕೆ. ನನ್ನ ನೋಟಿಸ್ಗೂ ಮುಖ್ಯಕಾರ್ಯದರ್ಶಿಗಳ ಭೇಟಿಗೂ ಯಾವುದೇ ಸಂಬಂಧವಿಲ್ಲ.ಹೊಸದಾಗಿ ನೇಮಕಗೊಂಡ ಹಿನ್ನಲೆ ರಾಜ್ಯಪಾಲರನ್ನ ಭೇಟಿಯಾಗಿದ್ದಾರೆ. ನೋಟಿಸ್ ವಿಚಾರವಾಗಿ ಈಗಾಗಲೇ ಉತ್ತರ ಕೊಟ್ಟಿದ್ದೇವೆ. ಸಚಿವ ಸಂಪುಟದಿಂದಲೂ ಉತ್ತರ ನೀಡಲಾಗಿದೆ.ಕಾನೂನಾತ್ಮಕ ರಾಜ್ಯಪಾಲರು ಒಪ್ಪಿಕೊಳ್ಳಬೇಕು’ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Railway: ಗಂಗಾವತಿ ರೈಲ್ವೆ ನಿಲ್ದಾಣಕ್ಕೆ ಅಂಜನಾದ್ರಿ ಹೆಸರು ಶಿಫಾರಸು: ಸಚಿವ ಎಂ.ಬಿ.ಪಾಟೀಲ್
Waqf ವಿರುದ್ದ ಮಠಾಧೀಶರು,ಯತ್ನಾಳ್ ತಂಡದಿಂದ ಮತ್ತೊಂದು ಹಂತದ ಹೋರಾಟ
Belagavi; ಕಿತ್ತೂರು ರಾಣಿ ಚನ್ನಮ್ಮ ಕಿರು ಮೃಗಾಲಯದಲ್ಲಿದ್ದ ಹುಲಿ ಶೌರ್ಯ ಇನ್ನಿಲ್ಲ
Channapatna bypoll; ಗೆಲುವಿಗೆ ಬಿಜೆಪಿ-ಜೆಡಿಎಸ್ ನವರೂ ಸಹಕರಿಸಿದ್ದಾರೆ: ಡಿ.ಕೆ.ಶಿವಕುಮಾರ್
Vijayapura: ಜಿಲ್ಲಾಸ್ಪತ್ರೆಯಲ್ಲಿ ಒಂದು ವರ್ಷದ ಮಗು ಅಪಹರಣ: ಸಿಸಿಟಿವಿಯಲ್ಲಿ ದೃಶ್ಯ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Railway: ಗಂಗಾವತಿ ರೈಲ್ವೆ ನಿಲ್ದಾಣಕ್ಕೆ ಅಂಜನಾದ್ರಿ ಹೆಸರು ಶಿಫಾರಸು: ಸಚಿವ ಎಂ.ಬಿ.ಪಾಟೀಲ್
All-party meet: ನಾಳೆಯಿಂದ ಚಳಿಗಾಲದ ಅಧಿವೇಶ: ಸುಗಮಗೊಳಿಸಲು ಬಯಸಿದ ಸರಕಾರ
Uttar Pradesh: ಝಾನ್ಸಿ ಆಸ್ಪತ್ರೆ ಬೆಂಕಿ ಅವಘಡ: ಮತ್ತೆ 2 ಹಸುಗೂಸು ಸಾ*ವು
IPL Auction 2025: ಸೇಲ್ ಆದ – ಆಗದ ಪ್ರಮುಖರು.. 3ನೇ ಸುತ್ತಿನ ಸಂಪೂರ್ಣ ಪಟ್ಟಿ ಇಲ್ಲಿದೆ..
Jharkhand: ಮತ್ತೆ ಮುಖ್ಯಮಂತ್ರಿಯಾಗಿ ಜೆಎಂಎಂ ನಾಯಕ ಹೇಮಂತ್ ಸೊರೇನ್ ನ.28ಕ್ಕೆ ಪದಗ್ರಹಣ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.