ವಾಯುನೆಲೆಯಲ್ಲಿಂದು ಡ್ರೋಣ್‌ ಒಲಿಂಪಿಕ್‌


Team Udayavani, Feb 21, 2019, 1:59 AM IST

33.jpg

ಯಲಹಂಕ ವಾಯುನೆಲೆಯಲ್ಲಿ ಬೆಳಗ್ಗೆ 10ಕ್ಕೆ ಡ್ರೋಣ್‌ ಒಲಿಂಪಿಕ್‌ ನಡೆಯಲಿದೆ. ಸುಮಾರು ದೇಶದ ವಿವಿಧ ಪ್ರತಿಷ್ಠಿತ ಡ್ರೋಣ್‌ ತಯಾರಿಕೆ ಕಂಪನಿಗಳು ಇದರಲ್ಲಿ ಭಾಗವಹಿಸಲಿದ್ದು, ಡ್ರೋಣ್‌ ಒಲಿಂಪಿಕ್‌ ಸ್ಪರ್ಧೆ ಏರ್ಪಡಿಸಲಾಗಿದೆ. ಆರು ಪ್ರಕಾರಗಳ ಸ್ಪರ್ಧೆಯಲ್ಲಿ ವಿಜೇತರಿಗೆ ಗರಿಷ್ಠ 5 ಲಕ್ಷದಿಂದ ಕನಿಷ್ಠ 50 ಸಾವಿರ ರೂ.ವರೆಗೂ ಬಹುಮಾನ ವಿತರಿಸಲಾಗುತ್ತಿದೆ.

ತೇಜಸ್‌ ತಯಾರಿಕೆಗೆ ಅಂತಿಮ ಅನುಮತಿ
ಲಘುಯುದ್ಧ ವಿಮಾನ ತೇಜಸ್‌-ಎಂ.ಕೆ.1 ತಯಾರಿಕೆ ಸಂಬಂಧ ಎಲ್‌ಎಎಲ್‌ ಸಂಸ್ಥೆಗೆ ಬುಧವಾರ ಅಂತಿಮ ಅನುಮತಿ ಪ್ರಮಾಣ ಪತ್ರ ವಿತರಿಸಲಾಯಿತು.ಇವರೆಗೂ ಎಚ್‌ಎಎಲ್‌ ಉತ್ಪಾದಿಸುತ್ತಿದ್ದ ತೇಜಸ್‌ ಲಘು ವಿಮಾನವನ್ನು ಯುದ್ಧಕ್ಕೆ ಬಳಸುತ್ತಿರಲಿಲ್ಲ. ಈ ಯುದಟಛಿ ವಿಮಾನಗಳ ತಯಾರಿಕೆಯ ಆರಂಭಿಕ ಅನುಮತಿ ಮಾತ್ರ ನೀಡಲಾಗಿತ್ತು. ಈಗ ಅಂತಿಮ ಅನುಮತಿ ಪ್ರಮಾಣ ಪತ್ರ ದೊರೆತಿದ್ದರಿಂದ ಇನ್ಮುಂದೆ ಉತ್ಪಾದನೆ ಜತೆಗೆ ಯುದಟಛಿದ ಸಂದರ್ಭದಲ್ಲಿಯೂ ಕೂಡ ಭಾಗವಹಿಸಲಿದೆ. ಏರೋ ಇಂಡಿಯಾ ಪ್ರದರ್ಶನದಲ್ಲಿ ರಕ್ಷಾಣ ಸಚಿವಾಲಯದ ಸಂಶೋಧನೆ ಮತ್ತು ಅಭಿವೃದ್ಧಿ  ವಿಭಾಗದ ಕಾರ್ಯದರ್ಶಿ ಹಾಗೂ ಡಿಆರ್‌ಡಿಒ ಮುಖ್ಯಸ್ಥ ಡಾ.ಜಿ.ಸತೀಶ್‌ ರೆಡ್ಡಿಯವರು ತೇಜಸ್‌ ತಯಾರಿಕೆಯ ಅಂತಿಮ ಅನುಮತಿ ಪ್ರಮಾಣ ಪತ್ರವನ್ನು
ಎಚ್‌ಎಎಲ್‌ಗೆ ವಿತರಿಸಿದರು

ಬೆಂಕಿ ನಂದಿಸಲು ಡ್ರೋಣ್‌!
ಪೊಯಿರ್‌ ಜೆಟ್ಸ್‌ (poeir jets)) ಎಂಬ ಕಂಪನಿಯು ನಗರ ಪ್ರದೇಶಗಳಲ್ಲಿನ ಬಹುಮಹಡಿ ಕಟ್ಟಡಗಳಲ್ಲಿ ಸಂಭವಿಸಬಹುದಾದ ಅಗ್ನಿ ದುರಂತಗಳ ನಿರ್ವಹಣೆಗೂ ಡ್ರೋಣ್‌ ಪರಿಚಯಿಸುತ್ತಿದೆ. ಡ್ರೋಣ್‌ಗಳ ಮೂಲಕವೇ ಬೆಂಕಿ ನಂದಿಸುವ ಈ ಪ್ರಯೋಗ ದೇಶದಲ್ಲೇ ಮೊದಲು. ಡ್ರೋಣ್‌ಗಳಲ್ಲಿ ಸಾಮಾನ್ಯವಾಗಿ ಬ್ಯಾಟರಿ ಆಧಾರಿತ ಎಂಜಿನ್‌ಗಳಿರುತ್ತವೆ. ಆದರೆ, ಈ ಡ್ರೋಣ್‌ ಜೆಟ್‌ ಎಂಜಿನ್‌ ಆಧಾರಿತವಾಗಿದ್ದು, ಅತ್ಯಂತ ಕಡಿಮೆ ತೂಕ ಅಂದರೆ 430 ಕೆಜಿ ತೂಗುತ್ತದೆ (ಬೆಂಕಿ ನಂದಿಸುವ ದ್ರವ ಪದಾರ್ಥವೂ ಸೇರಿ). ಜೆಟ್‌ ಎಂಜಿನ್‌ನ್ನು ಅಭಿವೃದಿಟಛಿಪಡಿಸಿರುವುದುನಗರದ ಯಶವಂತಪುರದಲ್ಲಿರುವ ಪೊಯಿರ್‌ ಜೆಟ್ಸ್‌ ಪ್ರೈ.ಲಿ., ಹಾಗೂ ಇದರ ಒಳಗೆ ಅಗ್ನಿಶಮನ ನೊರೆ ಇರಲಿದೆ ಎಂದು ಕಂಪನಿ ನಿರ್ದೇಶಕ ದೇವಥಾತನ್‌ ಮೂಕಿಹ ಮಾಹಿತಿ ನೀಡಿದರು. ಈಗಷ್ಟೇ ಇದು ಪ್ರಾಥಮಿಕ ಹಂತವನ್ನು ಪೂರೈಸಿದೆ. ಈ ಮಧ್ಯೆ, ಮುಂಬೈ ಮಹಾನಗರ ಪಾಲಿಕೆಯೊಂದಿಗೆ ಪ್ರಾಥಮಿಕ ಹಂತದ ಚರ್ಚೆಯಲ್ಲಿ ಮೌಖೀಕ ಒಪ್ಪಿಗೆಯೂ ದೊರಕಿದೆ.

ಬಿಬಿಎಂಪಿಯೊಂದಿಗೂ ಮಾತುಕತೆ ನಡೆಸುವ ಚಿಂತನೆ ಇದೆ. 2020ಕ್ಕೆ ಇದು ಅಸ್ತಿತ್ವಕ್ಕೆ ಬರಲಿದೆ. ಬಹುಮಹಡಿ ಕಟ್ಟಡಗಳಷ್ಟು ಎತ್ತರದಲ್ಲಿ ಅಗ್ನಿಶಾಮಕ ಯಂತ್ರ ತಲುಪುವುದು ಕಷ್ಟ. ಒಂದು ವೇಳೆ ತಲುಪಿದರೂ ಇದಕ್ಕೆ ಸಮಯ ಹಿಡಿಯುತ್ತದೆ. ಇನ್ನು ಮಹಾನಗರಗಳಲ್ಲಿ ಸಂಚಾರದಟ್ಟಣೆ ದಾಟಿಕೊಂಡು ಹೋಗಬೇಕಾಗುತ್ತದೆ. ಕೆಲ ಸಂದರ್ಭಗಳಲ್ಲಿ ಕಿರಿದಾದ ರಸ್ತೆಗಳಲ್ಲಿ ಇನ್ನೂ ಕಷ್ಟವಾಗುತ್ತದೆ. ಅಂತಹ ಕಡೆಗಳಲ್ಲಿ ಈ ಡ್ರೋಣ್‌ ನೆರವಿಗೆ ಬರುತ್ತದೆ. ಸುಮಾರು 60 ನಿಮಿಷ ಇದು ನಿರಂತರವಾಗಿ ಹಾರಾಟ ನಡೆಸಬಲ್ಲದು. 500 ಮೀ.ಎತ್ತರದಲ್ಲಿ ಇದು ಹಾರಾಟ ನಡೆಸಲಿದ್ದು, ಅನಾಹುತದ ಪರಿಣಾಮವನ್ನು ತಗ್ಗಿಸಬಹುದು ಎಂದು ವಿವರಿಸಿದರು.

“ಸೂರ್ಯ ಕಿರಣ’ ಸಂಗಾತಿ ನೆನೆದ ಸಾರಂಗ್‌ ಕಮಾಂಡರ್‌ಗಳು

ಮಂಗಳವಾರ ತಾಲೀಮಿನ ವೇಳೆ ನಡೆದ ಅಪಘಾತದಿಂದಾಗಿ ಈ ಬಾರಿ ಸೂರ್ಯಕಿರಣ ವೈಮಾನಿಕ ವಿಮಾನ ತಂಡವೇ “ಏರೋ ಇಂಡಿಯಾ’ ಶೋನಿಂದ ಹೊರಗುಳಿಯಬೇಕಾಯಿತು.

ಪ್ರತಿ ಬಾರಿಯು “ಏರೋ ಇಂಡಿಯಾ’ ಶೋಗಳಲ್ಲಿ ಸೂರ್ಯಕಿರಣ್‌ ತಂಡದ ಜೊತೆಗೂಡಿ ಪ್ರದರ್ಶನ ನೀಡುತ್ತಿದ್ದ ಸಾರಂಗ್‌ ತಂಡದ ವಿಂಗ್‌ ಕಮಾಂಡರ್‌ಗಳು ಸೂರ್ಯಕಿರಣ್‌ ತಂಡದ ತಮ್ಮ ಸಹಪಾಠಿಗಳನ್ನು ಬುಧವಾರದ ಪ್ರದರ್ಶನದಲ್ಲಿ ಮಿಸ್‌ ಮಾಡಿಕೊಂಡರು. ಅವಘಡದಲ್ಲಿ ಮೃತಪಟ್ಟ ಸೂರ್ಯಕಿರಣ್‌ ತಂಡದ ವಿಂಗ್‌ ಕಮಾಂಡರ್‌ ಸಾಹಿಲ್‌ ಗಾಂಧಿ ಅವರ ಆತ್ಮಕ್ಕೆ ಶಾಂತಿ ಕೋರಿದರು. ಪ್ರದರ್ಶನದ ಬಳಿಕ ಮಾತನಾಡಿದ ಸಾರಂಗ್‌ ತಂಡದ ವಿಂಗ್‌ ಕಮಾಂಡರ್‌ಗಳು, ಅವಘಡ ಕುರಿತು ಬೇಸರ ವ್ಯಕ್ತಪಡಿಸಿದರು.

ಪ್ರತಿ ಬಾರಿ ನಮ್ಮ ಜತೆಗೆ ಶೋನ ಕೇಂದ್ರ ಬಿಂದುವಾಗಿ ಸೂರ್ಯಕಿರಣ್‌ ಹಾರಾಟ ಪ್ರದರ್ಶನ ನೀಡುತ್ತಿತ್ತು. ಆದರೆ, ಈ ಬಾರಿ ಸೂರ್ಯಕಿರಣ್‌ ತಂಡವಿಲ್ಲದೆ ಶೋನ ಮನೋರಂಜನೆ ಜವಾಬ್ದಾರಿ ನಮ್ಮ ಸಾರಂಗ್‌ ತಂಡದ ಮೇಲೆ ಹೆಚ್ಚಾಗಿದೆ. ಜತೆಗಾರ,ಸಾಹೀಲ್‌ ಗಾಂಧಿ ನಮ್ಮನ್ನು ಬಿಟ್ಟು ಅಗಲಿದ್ದು, ಅವರ ಸೇವೆ ನಿಜಕ್ಕೂ ದೇಶಕ್ಕೆ ಮಾದರಿ ಎಂದರು.

ಸತತ ಐದನೇ ಬಾರಿ ಸಾರಂಗ್‌ ಚಾಲನೆ ಮಾಡಿದ ಕನ್ನಡಿಗ
ಸಾರಂಗ್‌ ವಿಂಗ್‌ ಕಮಾಂಡರ್‌, ಕನ್ನಡಿಗ, ಬಾಗಲಕೋಟೆ ಮೂಲದ ಗಿರೀಶ್‌ ಕುಮಾರ್‌ ಸತತ ಐದನೇ ಬಾರಿ ಏರೋ ಇಂಡಿಯಾ ಶೋನಲ್ಲಿ ವಿಮಾನ ಚಾಲನೆ ಮಾಡಿ ಹಿರಿಯ ಅನುಭವಿ ಕಮಾಂಡರ್‌ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ. ಈ ಕುರಿತು ಮಾತನಾಡಿದ ಅವರು, ನಮ್ಮ ರಾಜ್ಯದಲ್ಲಿ ನಡೆಯುತ್ತಿರುವ ಏರೋ ಇಂಡಿಯಾದಲ್ಲಿ ಸತತ ಐದನೇ ಬಾರಿಗೆ ಭಾಗವಹಿಸುತ್ತಿರುವುದು ನಿಜಕ್ಕೂ ಹೆಮ್ಮೆ ಎನಿಸುತ್ತಿದೆ. ಕನ್ನಡಿಗರಿಗೆ ಏರ್‌ಪೋರ್ಸ್‌ನಲ್ಲಿ ಅವಕಾಶವಿದೆ ಎಂಬುದಕ್ಕೆ ನಾನೇ ಉದಾಹರಣೆಯಾಗಿದ್ದು, ಯುವಕರು ಹೆಚ್ಚೆಚ್ಚು ಸೇನೆ ಸೇರಲು ಆಸಕ್ತಿ ವಹಿಸಬೇಕು. ದೇಶಕ್ಕಾಗಿ ನೀವು ಏನಾದರೂ ಮಾಡಬೇಕು ಎಂಬ ಆಸೆ ಹೊಂದಿದ್ದರೆ ಸೇನೆಯು ಅತ್ಯುತ್ತಮ ವೇದಿಕೆಯಾಗಿದ್ದು, ಸೇವೆಯ ಜತೆಗೆ ರೋಮಾಚನ ಹಾಗೂ ಹೆಮ್ಮೆಯ ಅನುಭವ ಇಲ್ಲಿ ಸಿಗುತ್ತದೆ ಎಂದರು.

ಪ್ರದರ್ಶನದಲ್ಲಿ 400ಕ್ಕೂ ಅಧಿಕ ಮಾರಾಟ ಮಳಿಗೆ 
ರಕ್ಷಣಾ ವಲಯದ ಸುಧಾರಿತ ಉತ್ಪನ್ನದ ಮಾರಾಟ ಮತ್ತು ಪ್ರದರ್ಶನಕ್ಕೆ ಖ್ಯಾತಿ ಪಡೆದಿರುವ ಏರೋ ಇಂಡಿಯಾ ವೈಮಾನಿಕ ಪ್ರದರ್ಶನದಲ್ಲಿ ಎಚ್‌ಎಎಲ್‌, ಡಿಆರ್‌ಡಿಒ, ಬಿಇಎಲ್‌, ಇಸ್ರೋ ಮೊದಲಾದ ದೇಶಿ ಸಂಸ್ಥೆಗಳ ಜತೆಗೆ ವಿದೇಶ ಅನೇಕ ಸಂಸ್ಥೆಗಳ ತಮ್ಮ ಉತ್ಪನ್ನಗಳನ್ನು ಮಾರಾಟ ಮತ್ತು ಪ್ರದರ್ಶನಕ್ಕೆ ಇರಿಸಿವೆ.

ರಕ್ಷಣಾ ಸಾಮಗ್ರಿ ಉತ್ಪಾದನೆ, ತಂತ್ರಜ್ಞಾನದ ಅಭಿವೃದ್ಧಿ, ವಿಮಾನ ಹಾಗೂ ಹೆಲಿಕಾಪ್ಟರ್‌ ಬಿಡಿಭಾಗಗಳ ತಯಾರಿಕೆ, ಯೋಧರಿಗೆ ರಕ್ಷಾ ಕವಚಗಳು, ಹೊಸ ಆವಿಷ್ಕಾರಗಳ ಉತ್ಪನ್ನಕ್ಕೆ ಸಂಬಂಧಿಸಿದ ದೇಶದ 238 ಸಂಸ್ಥೆಗಳು, ಆಸ್ಟ್ರೇಲಿಯಾ, ಬೆಲ್ಜಿಯಂ, ಕೆನಡಾ, ಜೆಕ್‌ ರಿಪಬ್ಲಿಕ್‌, ಫ್ರಾನ್ಸ್‌, ಇಸ್ರೇಲ್‌, ಇಟಲಿ, ಜಪಾನ್‌, ರಷ್ಯಾ, ಸೌದಿ ಅರೆಬಿಯಾ, ದಕ್ಷಿಣ ಆಫ್ರಿಕಾ, ಸಿಂಗಾಪುರ್‌, ಸ್ವಿಟ್ಜರ್‌ಲೆಂಡ್‌, ಉಕ್ರೇನ್‌, ಯುಎಇ, ಯು.ಕೆ, ಯು.ಎಸ್‌. ಮೊದಲಾದ ದೇಶಗಳ 165 ವಿದೇಶಿ ಸಂಸ್ಥೆಗಳು ತಮ್ಮ ಉತ್ಪನ್ನಗಳ ಪ್ರದರ್ಶನಕ್ಕೆ ಇಟ್ಟಿವೆ. ಇದರ ಜತೆಗೆ ರಫೆಲ್‌, ತೇಜಸ್‌ ಸಹಿತವಾಗಿ ಹಲವು ಯುದಟಛಿ ವಿಮಾನದ ಮಾದರಿಗಳ ಪ್ರದರ್ಶನಕ್ಕೆ ಇಡಲಾಗಿದೆ.

ಹೆಚ್ಚಿನ ಒಪ್ಪಂದ ಸಾಧ್ಯತೆ
ಎಚ್‌ಎಎಲ್‌, ಡಿಆರ್‌ಡಿಒ, ಬಿಇಎಲ್‌ ಸಹಿತವಾಗಿ ಕೇಂದ್ರೋದ್ಯಮದ ಹಲವು ಸಂಸ್ಥೆಗಳು ರಕ್ಷಣಾ ಸಾಮಗ್ರಿ ಹಾಗೂ ತಂತ್ರಜ್ಞಾನದ ಬದಲಾವಣೆಗಾಗಿ ರಷ್ಯಾ, ಅಮೆರಿಕ, ಸ್ವೀಡನ್‌, ಜಪಾನ್‌, ಫ್ರಾನ್ಸ್‌ ಮೊದಲಾದ ದೇಶಗಳೊಂದಿಗೆ ಹಲವು ರೀತಿಯ ಒಪ್ಪಂದಗಳನ್ನು ಮಾಡಿಕೊಳ್ಳುವ ಸಾಧ್ಯತೆ ಇದೆ.

ಸ್ಟಾರ್ಟ್‌ಅಪ್‌ ಹಬ್‌
ಏರೋ ಇಂಡಿಯಾ ವೈಮಾನಿಕ ಪ್ರದರ್ಶನದಲ್ಲಿ ನವೋದ್ಯಮಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಜಾಗತಿಕ ಮಟ್ಟದಲ್ಲಿ ಹೊಸ ಅನ್ವೇಷಣೆಗೆ ಪೂರಕವಾಗುವಂತೆ ನವೋದ್ಯಮಕ್ಕೆ ಉತ್ತೇಜನ ನೀಡಲಾಗುತ್ತಿದೆ. ರಕ್ಷಣಾ ಉತ್ಪನ್ನಗಳ ಉತ್ಪಾದನೆ ಹಾಗೂ ತಂತ್ರಜ್ಞಾನಗಳ ಸಂಶೋಧನೆ ಮಾಡುತ್ತಿರುವ ಏರೋ ಸೆನ್ಸಸ್‌, ಕಾಂಬೆಟ್‌ ರೋಬೊಟೆಕ್‌ ಇಂಡಿಯಾ, ನೊಪೊ, ಜನರಲ್‌ 
ಏರೋನಾಟಿಕ್ಸ್‌, ಟೆರೆರೊ ಮೊಬಿಲಿಟಿ, ಸ್ಕೈಲಾರ್ಕ್‌ ಡ್ರೋಣ್‌ಮೊದಲಾದ ನವೋದ್ಯಮಗಳು ಭಾಗವಹಿಸಿವೆ.

ಟಾಪ್ ನ್ಯೂಸ್

champions trophy

Cricket: ಚಾಂಪಿಯನ್ಸ್‌ ಟ್ರೋಫಿ ವೇಳಾಪಟ್ಟಿ ಅಂತಿಮ; ಭಾರತದ ಪಂದ್ಯಗಳಿಗೆ ಯುಎಇ ಆತಿಥ್ಯ

Arrested: ನಟ ಸುನಿಲ್‌ ಪಾಲ್‌, ಮುಸ್ತಾಕ್‌ ಅಪಹರಣ: ಎನ್‌ಕೌಂಟರ್‌ ಮೂಲಕ ಪ್ರಮುಖ ಆರೋಪಿ ಬಂಧನ

Arrested: ನಟ ಸುನಿಲ್‌ ಪಾಲ್‌, ಮುಸ್ತಾಕ್‌ ಅಪಹರಣ; ಎನ್‌ಕೌಂಟರ್‌ ಮೂಲಕ ಪ್ರಮುಖ ಆರೋಪಿ ಬಂಧನ

Belagavi: ಕಾಂಗ್ರೆಸ್ ಅಧಿವೇಶನ ಶತಮಾನೋತ್ಸವ ದೇಶದ ಇತಿಹಾಸ ಸಂಭ್ರಮಿಸುವ ಕಾರ್ಯಕ್ರಮ: ಡಿಕೆಶಿ

Belagavi: ಕಾಂಗ್ರೆಸ್ ಅಧಿವೇಶನ ಶತಮಾನೋತ್ಸವ ದೇಶದ ಇತಿಹಾಸ ಸಂಭ್ರಮಿಸುವ ಕಾರ್ಯಕ್ರಮ: ಡಿಕೆಶಿ

ವಿಚಾರಣೆ ದಿನ ಗೈರಾದ ವಕೀಲ… ಸಿಟ್ಟಿಗೆದ್ದು ನ್ಯಾಯಾಧೀಶರ ಮೇಲೆ ಚಪ್ಪಲಿ ಎಸೆದ ಆರೋಪಿ

ವಿಚಾರಣೆ ದಿನ ಗೈರಾದ ವಕೀಲ… ಸಿಟ್ಟಿಗೆದ್ದು ನ್ಯಾಯಾಧೀಶರ ಮೇಲೆ ಚಪ್ಪಲಿ ಎಸೆದ ಆರೋಪಿ

Jaipur: ಶ್ರೀಮಂತ ಪುರುಷರನ್ನು ಮೋಡಿ ಮಾಡುವ ʼಕಿಲಾಡಿ ವಧುʼ; ಇವಳು ಪೀಕಿದ್ದು ಕೋಟಿ ಕೋಟಿ ಹಣ

Jaipur: ಶ್ರೀಮಂತ ಪುರುಷರನ್ನು ಮೋಡಿ ಮಾಡುವ ʼಕಿಲಾಡಿ ವಧುʼ; ಇವಳು ಪೀಕಿದ್ದು ಕೋಟಿ ಕೋಟಿ ಹಣ

Birds: ಸಿಲಿಕಾನ್‌ ಸಿಟಿಯಲ್ಲಿ ವಿದೇಶಿ ಪಕ್ಷಿಗಳ ಕಲರವ

Birds: ಸಿಲಿಕಾನ್‌ ಸಿಟಿಯಲ್ಲಿ ವಿದೇಶಿ ಪಕ್ಷಿಗಳ ಕಲರವ

Darshan; ಶೂಟಿಂಗ್‌ ಗೆ ಡೆವಿಲ್ ರೆಡಿ; ಸತತ ಚಿತ್ರೀಕರಣಕ್ಕೆ ತಂಡ ನಿರ್ಧಾರ?

Darshan; ಶೂಟಿಂಗ್‌ ಗೆ ಡೆವಿಲ್ ರೆಡಿ; ಸತತ ಚಿತ್ರೀಕರಣಕ್ಕೆ ತಂಡ ನಿರ್ಧಾರ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Belagavi: ಕಾಂಗ್ರೆಸ್ ಅಧಿವೇಶನ ಶತಮಾನೋತ್ಸವ ದೇಶದ ಇತಿಹಾಸ ಸಂಭ್ರಮಿಸುವ ಕಾರ್ಯಕ್ರಮ: ಡಿಕೆಶಿ

Belagavi: ಕಾಂಗ್ರೆಸ್ ಅಧಿವೇಶನ ಶತಮಾನೋತ್ಸವ ದೇಶದ ಇತಿಹಾಸ ಸಂಭ್ರಮಿಸುವ ಕಾರ್ಯಕ್ರಮ: ಡಿಕೆಶಿ

hubli-fire-incident-at-ayyappa-camp-nine-devotees-seriously-injured

Hubli: ಅಯ್ಯಪ್ಪ ಶಿಬಿರದಲ್ಲಿ ಅಗ್ನಿ ಆಕಸ್ಮಿಕ: ಒಂಬತ್ತು ವೃತಧಾರಿಗಳಿಗೆ ಗಂಭೀರ ಗಾಯ

ಬೆಂಗಳೂರಿನಿಂದ ಹೊರನಾಡು ದೇವಸ್ಥಾನಕ್ಕೆ ಬರುತ್ತಿದ್ದ ವಾಹನ ಪಲ್ಟಿ… ನಾಲ್ವರಿಗೆ ಗಂಭೀರ ಗಾಯ

Mudigere: ಹೊರನಾಡು ದೇವರ ದರ್ಶನಕ್ಕೆ ಬರುತ್ತಿದ್ದವರ ವಾಹನ ಪಲ್ಟಿ… ನಾಲ್ವರಿಗೆ ಗಂಭೀರ ಗಾಯ

Shivamogga: ಭೀಕರ ರಸ್ತೆ ಅಪಘಾತ… ಬೈಕ್ ನಲ್ಲಿದ್ದ ಇಬ್ಬರು ಯುವಕರು ಮೃ*ತ್ಯು

Shivamogga: ತಡರಾತ್ರಿ ಭೀಕರ ರಸ್ತೆ ಅಪಘಾತ… ಬೈಕ್ ನಲ್ಲಿದ್ದ ಇಬ್ಬರು ಯುವಕರು ಮೃ*ತ್ಯು

rain-dk

Rain Alert: ರಾಜ್ಯದಲ್ಲಿ ಕನಿಷ್ಠ ತಾಪಮಾನ 4 ಡಿ.ಸೆ ಏರಿಕೆ; ಹಲವೆಡೆ 24ರಂದು ಮಳೆ ಸಾಧ್ಯತೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

champions trophy

Cricket: ಚಾಂಪಿಯನ್ಸ್‌ ಟ್ರೋಫಿ ವೇಳಾಪಟ್ಟಿ ಅಂತಿಮ; ಭಾರತದ ಪಂದ್ಯಗಳಿಗೆ ಯುಎಇ ಆತಿಥ್ಯ

Arrested: ನಟ ಸುನಿಲ್‌ ಪಾಲ್‌, ಮುಸ್ತಾಕ್‌ ಅಪಹರಣ: ಎನ್‌ಕೌಂಟರ್‌ ಮೂಲಕ ಪ್ರಮುಖ ಆರೋಪಿ ಬಂಧನ

Arrested: ನಟ ಸುನಿಲ್‌ ಪಾಲ್‌, ಮುಸ್ತಾಕ್‌ ಅಪಹರಣ; ಎನ್‌ಕೌಂಟರ್‌ ಮೂಲಕ ಪ್ರಮುಖ ಆರೋಪಿ ಬಂಧನ

Belagavi: ಕಾಂಗ್ರೆಸ್ ಅಧಿವೇಶನ ಶತಮಾನೋತ್ಸವ ದೇಶದ ಇತಿಹಾಸ ಸಂಭ್ರಮಿಸುವ ಕಾರ್ಯಕ್ರಮ: ಡಿಕೆಶಿ

Belagavi: ಕಾಂಗ್ರೆಸ್ ಅಧಿವೇಶನ ಶತಮಾನೋತ್ಸವ ದೇಶದ ಇತಿಹಾಸ ಸಂಭ್ರಮಿಸುವ ಕಾರ್ಯಕ್ರಮ: ಡಿಕೆಶಿ

Bengaluru: ಅನುಮತಿ ಇಲ್ಲದೇ ಅಲೋಪತಿ ಚಿಕಿತ್ಸೆ; 3 ಕ್ಲಿನಿಕ್‌ಗಳ ವಿರುದ್ಧ ಕೇಸ್‌

Bengaluru: ಅನುಮತಿ ಇಲ್ಲದೇ ಅಲೋಪತಿ ಚಿಕಿತ್ಸೆ; 3 ಕ್ಲಿನಿಕ್‌ಗಳ ವಿರುದ್ಧ ಕೇಸ್‌

ವಿಚಾರಣೆ ದಿನ ಗೈರಾದ ವಕೀಲ… ಸಿಟ್ಟಿಗೆದ್ದು ನ್ಯಾಯಾಧೀಶರ ಮೇಲೆ ಚಪ್ಪಲಿ ಎಸೆದ ಆರೋಪಿ

ವಿಚಾರಣೆ ದಿನ ಗೈರಾದ ವಕೀಲ… ಸಿಟ್ಟಿಗೆದ್ದು ನ್ಯಾಯಾಧೀಶರ ಮೇಲೆ ಚಪ್ಪಲಿ ಎಸೆದ ಆರೋಪಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.