ಉಗ್ರರಿಂದ ವರ್ಚುವಲ್ ಸಿಮ್ ಬಳಕೆ
ಪುಲ್ವಾಮಾ ದಾಳಿ ತನಿಖೆ ನಡೆಸುತ್ತಿರುವ ಅಧಿಕಾರಿಗಳಿಗೆ ತಿಳಿದ ಮಹತ್ವದ ಸಂಗತಿ
Team Udayavani, Mar 25, 2019, 6:10 AM IST
ಶ್ರೀನಗರ: ಇತ್ತೀಚೆಗೆ ನಡೆದಿದ್ದ ಪುಲ್ವಾಮಾ ಉಗ್ರರ ದಾಳಿ ವೇಳೆ ಉಗ್ರರು ಮೂಲ ಸಿಮ್ ಕಾರ್ಡ್‌ಗಳ ಜತೆಗೆ ಏಕಕಾಲದಲ್ಲಿ ಕಾರ್ಯ ನಿರ್ವಹಿಸುವ ಬದಲಿ ಸಿಮ್‌ಗಳನ್ನು (ವರ್ಚುವಲ್ ಸಿಮ್ ಕಾರ್ಡ್) ಬಳಸಿದ್ದಾರೆಂಬ ವಿಚಾರ ತನಿಖೆ ವೇಳೆ ಬೆಳಕಿಗೆ ಬಂದಿದೆ. ಈ ಸಿಮ್ ಕಾರ್ಡ್ ಗಳನ್ನು ಅಮೆರಿಕದ ಕಂಪನಿಯೊಂದು ತಯಾರಿಸಿರುವ ಬಗ್ಗೆ ಮಾಹಿತಿ ದೊರಕಿದ್ದು, ಈ ಹಿನ್ನೆಲೆಯಲ್ಲಿ ಹೆಚ್ಚುವರಿ ತನಿಖೆಗಾಗಿ ಅಮೆರಿಕ ಸರಕಾರದ ಸಹಾಯ ಪಡೆಯಲು ತನಿಖಾ ಸಂಸ್ಥೆಗಳು ನಿರ್ಧರಿಸಿವೆ.
ದಾಳಿ ನಡೆದ ಸ್ಥಳ ಹಾಗೂ ಸುತ್ತಲಿನ ಪ್ರದೇಶಗಳಲ್ಲಿ ನಡೆಸಿದ ತನಿಖೆಯಲ್ಲಿ ವರ್ಚುವಲ್ ಸಿಮ್ ಕಾರ್ಡ್ ಬಳಕೆಯ ವಿಚಾರ ತಿಳಿದುಬಂದಿದ್ದು, ಘಟನೆಯ ದಿನ ಸ್ಫೋಟಕ ತುಂಬಿದ್ದ ವಾಹನವನ್ನು ಸಿಆರ್‌ಪಿಎಫ್ ಯೋಧರಿದ್ದ ಬಸ್ಸಿಗೆ ಡಿಕ್ಕಿ ಹೊಡೆಸಿದ್ದ ಆದಿಲ್ ದರ್, ಕೊನೇ ಕ್ಷಣದವರೆಗೂ ಈ ಘಟನೆಯ ಷಡ್ಯಂತ್ರ ರೂಪಿಸಿದ್ದ ಜೈಶ್ ನಾಯಕ ಮುದಸ್ಸಿರ್ ಖಾನ್ ಜತೆ ಮಾತುಕತೆ ನಡೆಸಿದ್ದ ಎಂದು ತನಿಖಾಧಿಕಾರಿಗಳು ಹೇಳಿದ್ದಾರೆ.
ಇಂಥ ಸಿಮ್ ಕಾರ್ಡ್‌ಗಳನ್ನು 2008ರ ಮುಂಬಯಿ ದಾಳಿ ವೇಳೆಯಲ್ಲೂ ಬಳಸಲಾಗಿದ್ದು, ಈ ತಂತ್ರಜ್ಞಾನಕ್ಕಾಗಿ ಪಾಕ್ ಆಕ್ರಮಿತ ಕಾಶ್ಮೀರದ ನಿವಾಸಿ ಜಾವೇದ್ ಎಂಬಾತ ಅಮೆರಿಕದ ಕಾಲ್‌ಫೋನಿಕ್ಸ್ ಕಂಪನಿಗೆ 15,000 ರೂ. ಪಾವತಿಸಿದ್ದ ಎನ್ನಲಾಗಿದ್ದು, ಭಾರತೀಯ ತನಿಖಾಧಿಕಾರಿಗಳು ಹೆಚ್ಚಿನ ತನಿಖೆಗೆ ಅಮೆರಿಕದ ಮೊರೆ ಹೋಗಲು ತೀರ್ಮಾನಿಸಿದ್ದಾರೆ.
ಪಾಕ್ ದಾಳಿ; ಯೋಧ ಹುತಾತ್ಮ: ಜಮ್ಮು-ಕಾಶ್ಮೀರದ ಪೂಂಛ… ಮತ್ತು ರಜೌರಿ ಜಿಲ್ಲೆಗಳಲ್ಲಿ ಪಾಕ್ ಸೇನೆ ಕದನ ವಿರಾಮ ಉಲ್ಲಂ ಸಿದೆ. ರವಿವಾರ ಪಾಕ್ ಪಡೆಗಳು ನಡೆಸಿದ ಗುಂಡಿನ ದಾಳಿಯಿಂದಾಗಿ ಯೋಧರೊಬ್ಬರು ಹುತಾತ್ಮರಾಗಿದ್ದಾರೆ. ಇವರನ್ನು ರಾಜಸ್ಥಾನದವರಾದ ಗ್ರೆನೇಡಿಯರ್ ಹರಿ ಭಾಕರ್ ಎಂದು ಗುರುತಿಸಲಾಗಿದೆ. ಇನ್ನೊಂದೆಡೆ, ಕಥುವಾದ ಸೇನಾ ಶಿಬಿರದೊಳಗೆ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡ ಪರಿಣಾಮ ಒಬ್ಬ ಯೋಧ ಮೃತಪಟ್ಟು, ಮತ್ತೂಬ್ಬರು ಗಾಯಗೊಂಡ ಘಟನೆ ರವಿವಾರ ನಡೆದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
BJP: ವಿಜಯೇಂದ್ರ ದಿಲ್ಲಿಗೆ: ವರಿಷ್ಠರ ಜತೆ “ಬಣ’ ರಾಜಕೀಯ ಚರ್ಚೆ?
Congress; ಅಧಿವೇಶನಕ್ಕೆ ಮುನ್ನ ಸಂಪುಟಕ್ಕೆ ಸರ್ಜರಿ? ಸಾಧ್ಯತೆಗಳೇನು?
Mahayuti ಗೆಲುವು: ಆ್ಯಕ್ಸಿಸ್ ಮೈ ಇಂಡಿಯಾ, ಚಾಣಕ್ಯ ಸಮೀಕ್ಷೆ ಭವಿಷ್ಯ
High Court: ನಕ್ಸಲ್ ಚಟುವಟಿಕೆ: ಸಾವಿತ್ರಿ ಬಾಡಿ ವಾರಂಟ್ ಮನವಿ ಮರು ಪರಿಶೀಲನೆಗೆ ನಿರ್ದೇಶ
Khalistan; ಕೆನಡಾ ಹಿಂದೂಗಳ ಮೇಲೆ ದಾಳಿ: ಉಗ್ರರ ಹೊಸ ಬೆದರಿಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.