ಸಮಯ ಬಂದಾಗ ನಾನೇ ನಿವೃತ್ತಿ ಹೊಂದುತ್ತೇನೆ: ಯುವರಾಜ್ ಸಿಂಗ್
Team Udayavani, Mar 25, 2019, 2:56 PM IST
ಮುಂಬೈ: ನನ್ನ ಕ್ರಿಕೆಟ್ ಬದುಕಿನಲ್ಲಿ ಕಳೆದ ಎರಡು ವರ್ಷಗಳಲ್ಲಿ ಅನೇಕ ಏರಿಳಿತ ಎದುರಿಸಿದ್ದೇನೆ. ಆದರೆ ನಾನು ಕ್ರಿಕೆಟ್ ಆಡುವುದನ್ನು ಇನ್ನೂ ಆನಂದಿಸುತ್ತಿದ್ದೇನೆ. ಎಲ್ಲಿಯವರೆಗೆ ಕ್ರಿಕೆಟ್ ಆಡುವುದನ್ನು ಆನಂದಿಸುತ್ತೇನೋ ಅಲ್ಲಿಯವರೆಗೆ ಆಡುತ್ತೇನೆ ಎಂದು ಕ್ರಿಕೆಟರ್ ಯುವರಾಜ್ ಸಿಂಗ್ ಹೇಳಿದರು
ರವಿವಾರ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ದದ ಪಂದ್ಯದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ನಾನು ಕ್ರಿಕೆಟ್ ಅನ್ನು ಅಂಡರ್ 14 ಆಡುವಾಗಲಿಂದಲೇ ಆನಂದಿಸುತ್ತಿದ್ದೇನೆ. ಈಗಲೂ ಆನಂದಿಸುತ್ತೆನೆ. ಡೆಲ್ಲಿ ವಿರುದ್ದ ನಾನು ಹೊಡೆದ ಶಾಟ್ ಗಳ ಬಗ್ಗೆ ನನಗೆ ಸಂತೃಪ್ತಿಯಿದೆ. ತಂಡಕ್ಕೆ ರನ್ ಗಳಿಸುವುದು ಯಾವಾಗಲೂ ಖುಷಿ ಕೊಡುತ್ತದೆ. ಆದರೆ ತಂಡ ಗೆದ್ದರೆ ಆ ಖುಷಿ ಇಮ್ಮಡಿಯಾಗುತ್ತದೆ ಎಂದರು.
ನಿವೃತ್ತಿ ಬಗ್ಗೆ ನಾನು ಸಚಿನ್ ತೆಂಡುಲ್ಕರ್ ಅವರ ಬಳಿ ಚರ್ಚಿಸಿದ್ದೇನೆ. ಅವರು ಕೂಡಾ 38-39 ವರ್ಷದವರೆಗೆ ಆಡಿದ್ದರು. ಹಾಗಾಗಿ ಅವರ ಬಳಿ ಸಲಹೆ ಕೇಳಿದ್ದೇನೆ. ನಿವೃತ್ತಿಯ ಸಮಯ ಬಂದಾಗ ನಾನಾಗೆ ನಿವೃತ್ತಿ ಹೊಂದುತ್ತೇನೆ ಎಂದರು.
ಡೆಲ್ಲಿ ವಿರುದ್ದದ ಸೋಲಿನ ಬಗ್ಗೆ ಮಾತನಾಡಿದ ಯುವಿ, ರೋಹಿತ್, ಡಿಕಾಕ್, ಪೊಲಾರ್ಡ್ ಬೇಗನೆ ಔಟಾದರು. ಯಾವುದೇ ಜೊತೆಯಾಟ ಸಾಗಲಿಲ್ಲ. ಒಂದು ಉತ್ತಮ ಜೊತೆಯಾಟ ಬರಬೇಕಿತ್ತು. ಇದು 180-190 ರನ್ ವಿಕೆಟ್ ಆಗಿತ್ತು. ಆದರೆ ರಿಷಭ್ ಉತ್ತಮ ಆಡಿದರು ಎಂದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.