ಶತಮಾನದ ಅತೀ ದೊಡ್ಡ ವಲಸೆ!: ಒಂದೇ ವಾರದಲ್ಲಿ ಉಕ್ರೇನ್ ತೊರೆದ ಒಂದು ಮಿಲಿಯನ್ ಜನರು!
Team Udayavani, Mar 3, 2022, 9:32 AM IST
ವಾಷಿಂಗ್ಟನ್/ ಕೀವ್: ರಷ್ಯಾದ ಆಕ್ರಮಣದ ಕಾರಣದಿಂದ ಒಂದು ವಾರದಲ್ಲಿ ಒಂದು ಮಿಲಿಯನ್ ಜನರು ಉಕ್ರೇನ್‌ನಿಂದ ಪಲಾಯನ ಮಾಡಿದ್ದಾರೆ ಎಂದು ಯುಎನ್ ನಿರಾಶ್ರಿತರ ಏಜೆನ್ಸಿಯು ಹೇಳಿದೆ. ಈ ಶತಮಾನದಲ್ಲಿ ಇಷ್ಟು ವೇಗದಲ್ಲಿ ಜನರ ಪಲಾಯನದ ಯಾವುದೇ ಘಟನೆಗಳು ನಡೆದಿಲ್ಲ ಎಂದು ಅದು ತಿಳಿಸಿದೆ.
ಉಕ್ರೇನ್‌ನ ಜನಸಂಖ್ಯೆಯ ಶೇಕಡಾ 2 ಕ್ಕಿಂತ ಜನರು ಒಂದು ವಾರದಲ್ಲಿ ದೇಶ ತೊರೆದಿದ್ದಾರೆ ಎಂದು ವರದಿ ತಿಳಿಸಿದೆ. ವಿಶ್ವ ಬ್ಯಾಂಕ್ 2020 ರ ಕೊನೆಯಲ್ಲಿ ಜನಸಂಖ್ಯೆಯನ್ನು 44 ಮಿಲಿಯನ್ ಎಂದು ಎಣಿಕೆ ಮಾಡಿದೆ.
4 ಮಿಲಿಯನ್ ಜನರು ಅಂತಿಮವಾಗಿ ಉಕ್ರೇನ್ ತೊರೆಯಬಹುದು ಎಂದು ಯುಎನ್ ಏಜೆನ್ಸಿಯು ಭವಿಷ್ಯ ನುಡಿದಿದೆ. ಆದರೆ ಆ ಸಂಖ್ಯೆ ಇನ್ನಷ್ಟು ಹೆಚ್ಚಾಗಬಹುದು ಎಂದೂ ಅದು ಎಚ್ಚರಿಸಿದೆ.
ಇದನ್ನೂ ಓದಿ:ಖಾರ್ಕಿವ್‌ನಲ್ಲಿ ಭಾರತೀಯ ವಿದ್ಯಾರ್ಥಿಗಳನ್ನು ಉಕ್ರೇನ್ ಒತ್ತೆಯಾಳುಗಳಾಗಿರಿಸಿದೆ: ರಷ್ಯಾ ಆರೋಪ
ಅಂಕಿಅಂಶಗಳ ಪ್ರಕಾರ, 2011 ರಲ್ಲಿ ಅಂತರ್ಯುದ್ಧ ಭುಗಿಲೆದ್ದ ಸಿರಿಯಾ, ಪ್ರಸ್ತುತ ಅತಿ ಹೆಚ್ಚು ನಿರಾಶ್ರಿತರ ವಲಸೆ ಕಂಡ ದೇಶವಾಗಿ ಉಳಿದಿದೆ. 5.6 ದಶಲಕ್ಷಕ್ಕೂ ಹೆಚ್ಚು ಜನರು ಸಿರಿಯಾ ತೊರೆದಿದ್ದಾರೆ. ಆದರೆ 2013 ರ ಆರಂಭದಲ್ಲಿ ಸಿರಿಯಾದಿಂದ ಒಂದು ಮಿಲಿಯನ್ ನಿರಾಶ್ರಿತರು ಆ ದೇಶವನ್ನು ತೊರೆಯಲು ಕನಿಷ್ಠ ಮೂರು ತಿಂಗಳುಗಳನ್ನು ತೆಗೆದುಕೊಂಡಿದ್ದರು.
“ಈ ದರದಲ್ಲಿ” ಉಕ್ರೇನ್‌ನಿಂದ ವಲಸೆ “ಈ ಶತಮಾನದ ಅತಿದೊಡ್ಡ ನಿರಾಶ್ರಿತರ ಬಿಕ್ಕಟ್ಟಿನ” ಮೂಲವನ್ನಾಗಿ ಮಾಡಬಹುದು ಎಂದು ಯುಎನ್ಎಚ್ಸಿಆರ್ ವಕ್ತಾರ ಶಾಬಿಯಾ ಮಾಂಟೂ ಬುಧವಾರ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ
Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ
Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ
J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.