10.10.2020 ಮದುವೆಗೆ ಭಾರೀ ಡಿಮಾಂಡ್!
Team Udayavani, Oct 10, 2020, 6:25 AM IST
ಸಾಂದರ್ಭಿಕ ಚಿತ್ರ
ಸಿಂಗಾಪುರ: ಭಾರತದಲ್ಲಿ ಅಮೃತ ಸಿದ್ಧಿಯೋಗದಂಥ ವಿಶೇಷ ದಿನಗಳಲ್ಲಿ ಹೆಚ್ಚು ಮದುವೆಗಳು, ಗೃಹಪ್ರವೇಶಗಳು ನಡೆಯುವುದು ವಾಡಿಕೆ. ಇಂಥ ಯಾವುದೇ ಧಾರ್ಮಿಕ ಕಾರಣವಿಲ್ಲದಿದ್ದರೂ ಸಿಂಗಾಪುರದಲ್ಲಿ ಅ. 10ರಂದು 876 ಮದುವೆಗಳು ಜರಗಲಿದ್ದು, ಈ ವಿಷಯ ಖುದ್ದು ಅಲ್ಲಿನ ಜನರೇ ಹುಬ್ಬೇರಿಸುವಂತೆ ಮಾಡಿದೆ.
ಸಿಂಗಾಪುರದ ರಿಜಿಸ್ಟ್ರಿ ಆಫ್ ಮ್ಯಾರೇಜಸ್ (ಆರ್‌ಒಎಂ) ಹಾಗೂ ರಿಜಿಸ್ಟ್ರಿ ಆಫ್ ಮುಸ್ಲಿಂ ಮ್ಯಾರೇಜಸ್ (ಆರ್‌ಒಎಂಎಂ) ಕಚೇರಿಗಳಿಗೆ 876 ವಿವಾಹ ನೋಂದಣಿ ಅರ್ಜಿಗಳು ಬಂದಿದ್ದು, ಅ. 10ರಂದು ಅತೀ ಹೆಚ್ಚು ಮದುವೆಗಳು ಜರಗಲಿರುವುದಕ್ಕೆ ಸಾಕ್ಷಿಯಾಗಿದೆ.
ಇದರ ಹಿಂದಿನ ಕಾರಣವನ್ನು ಸಿಂಗಾಪುರದ ವೆಡ್ಡಿಂಗ್ ಪ್ಲಾನರ್ಸ್ ಹಾಗೂ ಅಲ್ಲಿನ ಸಂಪ್ರದಾಯದ ಪುರೋಹಿತರು ಬಹಿರಂಗಪಡಿಸಿದ್ದಾರೆ.
ಈ ವರ್ಷದ ಅಕ್ಟೋಬರ್ 10ನೇ ದಿನಾಂಕ ವಿಶೇಷವಾಗಿದೆ. ಆ ದಿನವನ್ನು “ಟೆನ್-ಟೆನ್-ಟ್ವೆಂಟಿ ಟ್ವೆಂಟಿ’ (10-10-2020) ಎಂದು ಸುಲಭವಾಗಿ ನೆನಪಿಟ್ಟುಕೊಳ್ಳಬಹುದು. ಹಾಗಾಗಿ, ಹೆಚ್ಚಿನ ಜೋಡಿಗಳು ಈ ದಿನಾಂಕವನ್ನೇ ಮದುವೆಗೆ ಆಯ್ಕೆ ಮಾಡಿವೆ ಎಂದು ಅವರು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Harapanahalli: ಪ್ರತಿಷ್ಠೆಯ ಕಣವಾದ ಬಿ90 ಸೊಸೈಟಿ ಚುನಾವಣೆ
Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ
Hysteroscopy: ಸಂತಾನಹೀನತೆಯ ಪತ್ತೆ ಮತ್ತು ಚಿಕಿತ್ಸೆಗೆ ಒಂದು ಅತ್ಯವಶ್ಯಕ ಕಾರ್ಯವಿಧಾನ
ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಬಗ್ಗೆ ಅವಹೇಳನಕಾರಿ ಪದಬಳಕೆ: ಪ್ರಸಾದ್ ರಾಜ್ ಕಾಂಚನ್ ಖಂಡನೆ
Puttur: ತೆಂಕಿಲದಲ್ಲಿ ರಿಕ್ಷಾ ಅಪಘಾತ: ಚಾಲಕ ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.