![Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!](https://www.udayavani.com/wp-content/uploads/2025/02/19-4-415x249.jpg)
![Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!](https://www.udayavani.com/wp-content/uploads/2025/02/19-4-415x249.jpg)
Team Udayavani, Feb 1, 2018, 6:55 AM IST
ಇಸ್ಲಾಮಾಬಾದ್: ನ್ಯಾಯಾಲಯಗಳಲ್ಲಿ ಕೇಸು ದಾಖಲಾಗಿ ಹತ್ತೋ ಇಪ್ಪತ್ತೋ ವರ್ಷಗಳ ಬಳಿಕ ತೀರ್ಪು ಪ್ರಕಟವಾಗುವುದು ಗೊತ್ತಿದೆ. ಸರಿಯಾಗಿ 100 ವರ್ಷಗಳ ಹಿಂದೆ ಭಾರತದಲ್ಲಿ ದಾಖಲಾಗಿರುವ ಪ್ರಕರಣಕ್ಕೆ ಪಾಕಿಸ್ಥಾನದ ಕೋರ್ಟ್ ತೀರ್ಪು ನೀಡಿದ ಕತೆ ಗೊತ್ತಿದೆಯೇ? ಅದೂ ಆಸ್ತಿ ವಿಚಾರದಲ್ಲಿ.
1918ರಲ್ಲಿ ಅಂದಿನ ರಾಜಸ್ಥಾನದ ಭಾವಲ್ಪುರದಲ್ಲಿ ರಜಪೂತರಿಗೆ ಸೇರಿದ ಕುಟುಂಬಕ್ಕೆ ಸೇರಿದ ಜಮೀನಿನ ವಿವಾದ ಇದಾಗಿದೆ. ಒಟ್ಟು 700 ಎಕರೆ ಜಮೀನಿನ ವಿವಾದ ಇದಾಗಿದೆ. ದೇಶ ವಿಭಜನೆ ಬಳಿಕ ಈ ವಿವಾದವೂ ಪಾಕಿಸ್ಥಾನದ ಪಂಜಾಬ್‌ಗ ವರ್ಗಾವಣೆಯಾಯಿತು. ಕೇಸು ದಾಖಲಾಗಿದ್ದ ಭಾವಲ್ಪುರವೂ ಆ ರಾಷ್ಟ್ರಕ್ಕೇ ಸೇರ್ಪಡೆಯಾಯಿತು. 2005ರಲ್ಲಿ ಜಮೀನು ವಿವಾದ ಪಾಕಿಸ್ಥಾನದ ಸುಪ್ರೀಂಕೋರ್ಟ್‌ಗೆ ವರ್ಗಾವಣೆಯಾಯಿತು.
ಕೋರ್ಟ್‌ನಲ್ಲಿ ವಾದಿಸಿದ್ದ ಜಮೀನಿನ ಮಾಲೀಕರು ಎಂದು ಹೇಳಿಕೊಂಡಿದ್ದ ಶಹಾಬುದ್ದೀನ್ ಎಂಬುವರು ತಮ್ಮ ತಂದೆ ಶೇರ್‌ಖಾನ್ 1918ರಲ್ಲಿ ಅಸುನೀಗಿದ ಬಳಿಕ ವಿವಾದ ಶುರುವಾಯಿತು ಎಂದಿದ್ದಾರೆ. ಪ್ರಕರಣವನ್ನು ಇತ್ಯರ್ಥಪಡಿಸಿದ ಪಾಕಿಸ್ಥಾನ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಮಿಯಾನ್ ಸಾಖೀಬ್ ನಿಸಾರ್‌ಹರ್ಡ್ ಕುಟುಂ ಬದ ಸದಸ್ಯರೊಳಗೆ ಜಮೀನನ್ನು ಇಸ್ಲಾಮಿಕ್ ಕಾನೂನಿನ ಅನ್ವಯ ಹಂಚಿಕೊಳ್ಳ ಬೇಕು ಎಂದು ತೀರ್ಪು ನೀಡಿದ್ದಾರೆ. ಕಾನೂನಿನ ಅನ್ವಯ ಕುಟುಂಬ ಸದಸ್ಯರಿಗೆ ಏನು ಸೇರಬೇಕೋ ಅದು ನೀಡಬೇಕೋ ಹಂಚಿಕೆಯಾಬೇಕು ಎಂದು ಹೇಳಿದ್ದಾರೆ.
ಪಾಕಿಸ್ಥಾನದ ಕೋರ್ಟಲ್ಲಿ ಇಂಥ ಪ್ರಕರಣಗಳು ಇತ್ಯರ್ಥಕ್ಕೆ ಬಾಕಿ ಉಳಿದಿವೆ. ಅದಕ್ಕೆ ಸಂಬಂಧಿಸಿದಂತೆ ಅಲ್ಲಿನ ಕಾನೂನಿನಲ್ಲಿ ಬದಲಾಗಬೇಕಾಗಿದೆ ಎಂದಿದ್ದಾರೆ ತಜ್ಞರು.
ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು
Obama Is Queer: ಮಾಜಿ ಅಧ್ಯಕ್ಷ ಒಬಾಮಾ ಪತ್ನಿ ಮಿಚೆಲ್ ಗಂಡಸು: ಮಸ್ಕ್ ತಂದೆ
Cut Down: ವೆಚ್ಚ ಕಡಿತ: ಅಮೆರಿಕ ಸರಕಾರಿ ಉದ್ಯೋಗಿಗಳೇ ವಜಾ!
Mexico:ಯುರೋಪ್ ನ Most ವಾಂಟೆಡ್ ಕ್ರಿ*ಮಿನಲ್, ಡ್ರ*ಗ್ ಕಿಂಗ್ ಪಿನ್ ಮಾರ್ಕೋ ಹ*ತ್ಯೆ
Bourbon Whiskey: ಅಮೆರಿಕದ ಬೌರ್ಬನ್ ವಿಸ್ಕಿ ಆಮದು ಸುಂಕ ಕಡಿತ ಮಾಡಿದ ಭಾರತ
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
Pro Hockey: ಇಂಗ್ಲೆಂಡ್ ವಿರುದ್ಧ ಭಾರತ ವನಿತೆಯರಿಗೆ ಸೋಲು
You seem to have an Ad Blocker on.
To continue reading, please turn it off or whitelist Udayavani.