ಚಂಡಮಾರುತದಿಂದ ಭೂಕುಸಿತ: 20 ತಾಸುಗಳ ಕಾಲ ಫ್ರಿಡ್ಜ್ ನಲ್ಲಿ ಕುಳಿತು ಬದುಕಿದ ಬಾಲಕ
Team Udayavani, Apr 21, 2022, 10:30 PM IST
ಮನಿಲ: ಚಂಡಮಾರುತದಿಂದಾಗಿ ಭೂಕುಸಿತ ಉಂಟಾಗಿ, ಪೂರ್ತಿ ಮನೆಯೇ ನೆಲಸಮವಾದರೂ ಮನೆಯಲ್ಲಿದ್ದ ಆ ಒಬ್ಬ ಬಾಲಕ ಮಾತ್ರ ಬದುಕುಳಿದಿದ್ದಾನೆ.
ಹೌದು! ಫಿಲಿಪ್ಪೀನ್ಸ್‌ನ ಬೇಬೇ ನಗರದಲ್ಲಿ ಇತ್ತೀಚೆಗೆ ಚಂಡಮಾರುತದಿಂದ ಭೂಕುಸಿತ ಉಂಟಾಗಿ, 200ಕ್ಕೂ ಅಧಿಕ ಮಂದಿಗೆ ಗಾಯಗಳಾಗಿವೆ. ಈ ಪೈಕಿ ಸಿ.ಜೆ.ಜಸ್ಮೆ ಹೆಸರಿನ 11 ವರ್ಷದ ಬಾಲಕ ಭೂ ಕುಸಿತದ ಸುಳಿವು ಸಿಗುತ್ತಿದ್ದಂತೆಯೇ ಮನೆಯಲ್ಲಿದ್ದ ಫ್ರಿಡ್ಜ್ ನಲ್ಲಿ ಅಡಗಿ ಕುಳಿತಿದ್ದಾನೆ. ಮನೆ ಪೂರ್ತಿ ನೆಲಸಮವಾಗಿದ್ದು, ಅಲ್ಲಿದ್ದ ಫ್ರಿಡ್ಜ್ ಕೂಡ ದೂರದಲ್ಲಿ ಹೋಗಿ ಬಿದ್ದಿದೆ. ರಕ್ಷಣಾ ತಂಡ ಬಂದು, ಎಲ್ಲೆಡೆ ಹುಡುಕಿದಾಗ ಫ್ರಿಡ್ಜ್ ಸಿಕ್ಕಿದ್ದು, ಅದರಲ್ಲಿ ಜಸ್ಮೆ ಜೀವಂತವಾಗಿ ಸಿಕ್ಕಿದ್ದಾನೆ.
ಸುಮಾರು 20 ತಾಸುಗಳ ಕಾಲ ಆತ ಫ್ರಿಡ್ಜ್ ನಲ್ಲೇ ಇದ್ದಿದ್ದು, ಅಲ್ಪ ಪ್ರಮಾಣದಲ್ಲಿ ಗಾಯಗೊಂಡಿದ್ದ ಎಂದು ರಕ್ಷಣಾ ತಂಡ ತಿಳಿಸಿದೆ. ಅದೇ ಮನೆಯಲ್ಲಿದ್ದ ಆತನ ಸಹೋದರಿ ಮತ್ತು ತಾಯಿ ಕಾಣೆಯಾಗಿರುವುದಾಗಿ ವರದಿಯಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್ನ ಅತ್ಯುನ್ನತ ಗೌರವ ಪ್ರದಾನ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
Sheikh Hasina ಅವಧಿಯಲ್ಲಾದ ಅಪಹರಣಗಳಿಗೆ ಭಾರತ ಕುಮ್ಮಕ್ಕು: ಬಾಂಗ್ಲಾ ವರದಿ
Meditation; ಜಾಗತಿಕ ಶಾಂತಿ, ಏಕತೆಗೆ ಧ್ಯಾನ ಮುಖ್ಯ ಸಾಧನ: ಶ್ರೀ ಶ್ರೀ ರವಿಶಂಕರ್
Israel ಮೇಲೆ ದಾಳಿಗೆ ಇರಾನ್ನಿಂದ ಮಕ್ಕಳ ಬಳಕೆ?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.