Los Angeles: ಹತೋಟಿಗೆ ಬಾರದ ಕಾಡ್ಗಿಚ್ಚು, ಸಾವಿರಾರು ಮನೆಗಳು ಆಹುತಿ, ಮೃತರ ಸಂಖ್ಯೆ 16ಕ್ಕೆ


Team Udayavani, Jan 12, 2025, 9:19 AM IST

Los Angeles: ಹತೋಟಿಗೆ ಬಾರದ ಕಾಡ್ಗಿಚ್ಚು, ಸಾವಿರಾರು ಮನೆಗಳು ಆಹುತಿ, ಮೃತರ ಸಂಖ್ಯೆ 16ಕ್ಕೆ

ಲಾಸ್‌ ಏಂಜಲೀಸ್‌: ಒಂದು ವಾರದ ಹಿಂದೆ ಕ್ಯಾಲಿಫೋರ್ನಿ­ಯಾದಲ್ಲಿ ಉಂಟಾಗಿರುವ ಕಾಡ್ಗಿಚ್ಚಿಗೆ 12,000 ಕ್ಕೂ ಅಧಿಕ ಮನೆಗಳು ಸುಟ್ಟು ಕರಕಲಾಗಿದ್ದು ಇದುವರೆಗೆ ಘಟನೆಯಲ್ಲಿ ಮೃತಪಟ್ಟವರ ಸಂಖ್ಯೆ 16ಕ್ಕೆ ಏರಿಕೆಯಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಘಟನೆಗೆ ಸಂಬಂಧಿಸಿ ಈಗಾಗಲೇ ಲಕ್ಷಾಂತರ ಮಂದಿಯನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದ್ದು ಜೊತೆಗೆ ಕಾಡ್ಗಿಚ್ಚಿನಿಂದ ಹಾಲಿವುಡ್‌ ನಟರು ಕೂಡ ತೊಂದರೆಗೆ ಸಿಲುಕೊಂಡಿದ್ದಾರೆ ಎಂದು ಹೇಳಲಾಗಿದ್ದು. ಹಲವು ನಟ ನಟಿಯರ ಮನೆಗಳು ಕಾಡ್ಗಿಚ್ಚಿಗೆ ಸಿಲುಕಿ ಸುಟ್ಟು ಕರಕಲಾಗಿದೆ ಎಂದು ಹೇಳಲಾಗಿದೆ. ಹಾಲಿವುಡ್ ನಟ ನಟಿಯರು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಗೊಂಡಿದ್ದಾರೆ ಎಂದು ಹೇಳಲಾಗಿದೆ.

ಅಗ್ನಿಶಾಮಕ ತಂಡ ಬೆಂಕಿ ನಂದಿಸುವ ಕಾರ್ಯ ನಡೆಸುತ್ತಿದ್ದರು ಜೋರಾಗಿ ಬೀಸುವ ಗಾಳಿ ಹೆಚ್ಚಿನ ಅನಾಹುತಕ್ಕೆ ಕಾರಣವಾಗಿದೆ ಜೊತೆಗೆ ಕಾರ್ಯಾಚರಣೆಗೂ ಅಡ್ಡಿಯಾಗಿದೆ ಎಂದು ಹೇಳಲಾಗಿದೆ.

ಅಧಿಕಾರಿಗಳು ನೀಡಿರುವ ಮಾಹಿತಿ ಪ್ರಕಾರ ಈಟನ್ ಮತ್ತು ಪಾಲಿಸೇಡ್ಸ್ ಪ್ರದೇಶದಲ್ಲಿ ಹೆಚ್ಚಿನ ಅನಾಹುತ ಸಂಭವಿಸಿದ್ದು ಪಾಲಿಸೇಡ್ಸ್ ನಲ್ಲಿ ಸುಮಾರು 22,600 ಎಕರೆ ಪ್ರದೇಶ ಬೆಂಕಿಗಾಹುತಿಯಾಗಿದ್ದು ಜೊತೆಗೆ ಈಟನ್ ನಲ್ಲಿ 14,000 ಎಕರೆ ಪ್ರದೇಶ ಬೆಂಕಿಗಾಹುತಿಯಾಗಿದೆ ಎಂದು ಹೇಳಲಾಗಿದೆ. ಅಲ್ಲದೆ ಮುಂದಿನ ದಿನಗಳಲ್ಲಿ ಗಂಟೆಗೆ 120 ಕಿಮೀ ವೇಗದಲ್ಲಿ ಗಾಳಿ ಬಿಸಲಿದ್ದು ಇದು ಕಾರ್ಯಾಚರಣೆಗೆ ಅಡ್ಡಿಯಾಗಲಿದೆ ಅಲ್ಲದೆ ಬೆಂಕಿಯಾ ತೀವ್ರತ್ತೆ ಹೆಚ್ಚಾಗಲು ಕಾರಣವಾಗಲಿದೆ ಎಂದು ಹೇಳಲಾಗಿದೆ.

ಘಟನೆಯಲ್ಲಿ ಹದಿಮೂರು ಮಂದಿ ನಾಪತ್ತೆಯಾಗಿದ್ದು ಅವರ ಕಾರ್ಯಾಚರಣೆ ಸವಾಲಿನ ಕೆಲಸವಾಗಿದೆ ಎಂದು ರಕ್ಷಣಾ ಅಧಿಕಾರಿಗಳು ಹೇಳಿದ್ದಾರೆ.

ಈ ನಡುವೆ ಅಮೆರಿಕದ ಅಧ್ಯಕ್ಷ ಜೋ ಬಿಡೆನ್ ಅವರು ರಾಜ್ಯ ಮತ್ತು ಸ್ಥಳೀಯ ಅಧಿಕಾರಿಗಳೊಂದಿಗೆ ಪರಿಹಾರ ಕಾರ್ಯಾಚರಣೆಗಳ ಸ್ಥಿತಿಯ ಕುರಿತು ಮಾತುಕತೆ ನಡೆಸಿದ್ದಾರೆ.

ಇದನ್ನೂ ಓದಿ: Champions Trophy: ನ್ಯೂಜಿಲ್ಯಾಂಡ್‌ ತಂಡ ಪ್ರಕಟ; ತಂಡಕ್ಕೆ ಮರಳಿದ ಮೂವರು ಘಟಾನುಘಟಿಗಳು

ಟಾಪ್ ನ್ಯೂಸ್

Police Exam: ಕಿವಿಯಲ್ಲಿ ಬ್ಲೂ ಟೂತ್ ಸಾಧನ ಇಟ್ಟು ಪರೀಕ್ಷೆ ಬರೆದು ಸಿಕ್ಕಿ ಬಿದ್ದ ಅಭ್ಯರ್ಥಿ

Police Exam: ಕಿವಿಯಲ್ಲಿ ಬ್ಲೂ ಟೂತ್ ಸಾಧನ ಇಟ್ಟು ಪರೀಕ್ಷೆ ಬರೆದು ಸಿಕ್ಕಿ ಬಿದ್ದ ಅಭ್ಯರ್ಥಿ

11-knee-1

Osteoarthritis, Knee Osteoarthritis: ಮೂಳೆ ಸವೆತ ಹಾಗೂ ಮಂಡಿ ಸವೆತ

Former Assam cricketer Devjit Saikia appointed as BCCI secretary

Saikia: ಬಿಸಿಸಿಐ ಕಾರ್ಯದರ್ಶಿಯಾಗಿ ಮಾಜಿ ಅಸ್ಸಾಂ ಕ್ರಿಕೆಟರ್‌ ದೇವಜಿತ್‌ ಸೈಕಿಯಾ ನೇಮಕ

10-liver-cancer

Liver Cancer: ಯಕೃತ್‌ ಕ್ಯಾನ್ಸರ್‌ನೊಂದಿಗೆ ಬದುಕಲು ಕಾರ್ಯತಂತ್ರಗಳು

Video: ಸಿಎಂ ಯೋಗಿಗೆ ಜೀವ ಬೆದರಿಕೆ… ಪೊಲೀಸರ ಕೈರುಚಿ ನೋಡುತ್ತಿದ್ದಂತೆ ಕ್ಷಮೆಯಾಚನೆ

Video: ಸಿಎಂ ಯೋಗಿಗೆ ಜೀವ ಬೆದರಿಕೆ… ಪೊಲೀಸರ ಲಾಠಿ ರುಚಿ ನೋಡುತ್ತಿದ್ದಂತೆ ಕ್ಷಮೆಯಾಚನೆ

2 Noida men suffocate after leaving stove burning overnight

Noida: ಜೀವ ತೆಗೆದ ಚೋಲೆ; ಸ್ಟವ್‌ ಆರಿಸದೆ ಮಲಗಿದ್ದ ಇಬ್ಬರು ಉಸಿರುಕಟ್ಟಿ ಸಾ*ವು

9-hmpv

HMPV: ಹ್ಯೂಮನ್‌ ಮೆಟಾನ್ಯುಮೊ ವೈರಸ್‌ (ಎಚ್‌ಎಂಪಿವಿ); ಹೊಸ ಆತಂಕವೇನೂ ಅಲ್ಲ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-elon

Neuralink; ಮತ್ತೊಬ್ಬನ ಮೆದುಳಿಗೆ ಚಿಪ್‌ : ಏನಿದು ತಂತ್ರಜ್ಞಾನ?

1-bangle

Wildfires; ಲಾಸ್‌ ಏಂಜಲೀಸ್‌ ಬೆಂಕಿಗೆ 10000 ಕೋಟಿ ಬಂಗಲೆ ಭಸ್ಮ

joe-bidden

Donald Trump ಸೋಲಿಸುತ್ತಿದ್ದೆ, ಪಕ್ಷಕ್ಕಾಗಿ ಹಿಂದೆ ಸರಿದೆ: ಅಧ್ಯಕ್ಷ ಜೋ ಬೈಡೆನ್‌

1-bang

ಹವಾಮಾನ ಇಲಾಖೆಗೆ 150: ಕಾರ್ಯಕ್ರಮಕ್ಕೆ ಬರಲ್ಲ ಬಾಂಗ್ಲಾ

AI (3)

AI ನಿಂದ 2 ಲಕ್ಷಕ್ಕೂ ಅಧಿಕ ಉದ್ಯೋಗಗಳಿಗೆ ಕತ್ತರಿ: ಅಮೆರಿಕ ವರದಿ

MUST WATCH

udayavani youtube

ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ

udayavani youtube

ಅಮೇರಿಕಾದಲ್ಲಿ ವೈಕುಂಠ ಏಕಾದಶಿ ಸಂಭ್ರಮ

udayavani youtube

ನಕ್ಸಲರ ಶರಣಾಗತಿಯಲ್ಲಿ ಸರಕಾರದ ನಡೆ ಸಂಶಯ ಮೂಡಿಸುವಂತಿದೆ: ಅಣ್ಣಾಮಲೈ |

udayavani youtube

ಹೇಗಿತ್ತು ಎಂ.ಜಿ.ಎಂ ಅಮೃತ ಮಹೋತ್ಸವ ಸಂಭ್ರಮ

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

ಹೊಸ ಸೇರ್ಪಡೆ

Police Exam: ಕಿವಿಯಲ್ಲಿ ಬ್ಲೂ ಟೂತ್ ಸಾಧನ ಇಟ್ಟು ಪರೀಕ್ಷೆ ಬರೆದು ಸಿಕ್ಕಿ ಬಿದ್ದ ಅಭ್ಯರ್ಥಿ

Police Exam: ಕಿವಿಯಲ್ಲಿ ಬ್ಲೂ ಟೂತ್ ಸಾಧನ ಇಟ್ಟು ಪರೀಕ್ಷೆ ಬರೆದು ಸಿಕ್ಕಿ ಬಿದ್ದ ಅಭ್ಯರ್ಥಿ

11-knee-1

Osteoarthritis, Knee Osteoarthritis: ಮೂಳೆ ಸವೆತ ಹಾಗೂ ಮಂಡಿ ಸವೆತ

3

Mangaluru: ಬಂದರಿನಲ್ಲಿ ಐಪಿಎಲ್‌ ಮಾದರಿ ಗಲ್ಲಿ ಕ್ರಿಕೆಟ್‌!

prajwal devaraj starrer raksasa movie releasing in telugu

Prajwal Devaraj: ತೆಲುಗಿನಲ್ಲೂ ರಿಲೀಸ್‌ ಆಗುತ್ತಿದೆ ʼರಾಕ್ಷಸʼ

2(1

Mangaluru: ಕದ್ರಿ ಪಾರ್ಕ್‌ನಲ್ಲಿ ಕಲಾಲೋಕ ವೈಭವ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.