ಅಮೆರಿಕ ಅಧ್ಯಕ್ಷರ ಭದ್ರತೆಯಲ್ಲೇ ಬೇಹುಗಾರಿಕೆ ನಡೆಸಿ ಸಿಕ್ಕಿಬಿದ್ದ ಪಾಕ್ ಗೂಢಾಚಾರರು
Team Udayavani, Apr 8, 2022, 9:05 AM IST
ವಾಷಿಂಗ್ಟನ್: ಅಧ್ಯಕ್ಷರ ಭದ್ರತೆಯ ಉಸ್ತುವಾರಿ ವಹಿಸಿರುವ ಉನ್ನತ ರಹಸ್ಯ ಸೇವೆ ಸೇರಿದಂತೆ ಅಮೆರಿಕದ ಗುಪ್ತಚರ ಮತ್ತು ಭದ್ರತಾ ವ್ಯವಸ್ಥೆಗೆ ಒಳನುಗ್ಗಲು ಪ್ರಯತ್ನಿದ ಪಾಕಿಸ್ತಾನದ ಬೇಹುಗಾರಿಕಾ ಸಂಸ್ಥೆ ಐಎಸ್‌ಐನ ಸೆಲ್ ಅನ್ನು ಯುನೈಟೆಡ್ ಸ್ಟೇಟ್ಸ್ ಗುರುವಾರ ಭೇದಿಸಿದೆ.
ಆರಿಯನ್ ತಾಹೆರ್ಜಾಡೆಹ್ (40) ಮತ್ತು ಹೈದರ್ ಅಲಿ (35) ಬಂಧಿತ ಪಾಕ್ ಗೂಢಾಚರರು. ಇವರು ಅಮೆರಿಕ ಅಧಿಕಾರಿಗಳ ಸೋಗಿನಲ್ಲಿರುವಾಗ ಆಗ್ನೇಯ ವಾಷಿಂಗ್ಟನ್‌ನಲ್ಲಿ ಎಫ್‌ಬಿಐ ಕ್ರಿಮಿನಲ್ ದೂರಿನ ಮೇಲೆ ಬಂಧಿಸಿದೆ. ರಹಸ್ಯ ಸೇವೆಯ ನಾಲ್ವರು ಸದಸ್ಯರನ್ನು ಆಡಳಿತಾತ್ಮಕ ರಜೆ ಮೇಲೆ ಕಳುಹಿಸಲಾಗಿದೆ.
ಇವರನ್ನು ಗುರುವಾರ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ. ಬಂಧಿತ ಹೈದರ್ ಅಲಿ ಪಾಕಿಸ್ತಾನದ ಇಂಟರ್-ಸರ್ವೀಸಸ್ ಇಂಟೆಲಿಜೆನ್ಸ್ ಏಜೆನ್ಸಿಯೊಂದಿಗೆ ಸಂಬಂಧ ಹೊಂದಿದ್ದಾರೆ ಎಂದು ಏಫ್ ಬಿಐ ಅಧಿಕಾರಿಗಳು ಕೋರ್ಟ್ ಗೆ ತಿಳಿಸಿದ್ದಾರೆ.
ಅಲ್ಲದೆ ಹೈದರ್ ಅಲಿ ಅಲಿ ಪಾಕಿಸ್ತಾನ ಮತ್ತು ಇರಾನ್ ನ ಬಹು ವೀಸಾಗಳನ್ನು ಹೊಂದಿದ್ದರು ಎಂದು ಫೆಡರಲ್ ಕಾನೂನು ಜಾರಿ ಅಧಿಕಾರಿಗಳು ತಿಳಿಸಿದ್ದಾರೆ.
“ನಾವು ನಿಖರತೆಯನ್ನು ಪರಿಶೀಲಿಸಿಲ್ಲ. ಆದರೆ ಅಲಿ ಪಾಕಿಸ್ತಾನಿ ಗುಪ್ತಚರ ಸೇವೆಯಾದ ಐಎಸ್ಐ ಯೊಂದಿಗೆ ಸಂಬಂಧವನ್ನು ಹೊಂದಿದ್ದಾರೆ ಎಂದು ಸಾಕ್ಷಿಗಳಿಗೆ ಹೇಳಿಕೆ ನೀಡಿದ್ದಾರೆ” ಎಂದು ನ್ಯಾಯಾಧೀಶರಿಗೆ ತಿಳಿಸಿದರು.
ಇದನ್ನೂ ಓದಿ:ರಷ್ಯಾಕ್ಕೆ ಗೇಟ್‌ಪಾಸ್ ಶಿಕ್ಷೆ
ತಾಹೆರ್ಜಾದೆಹ್ ಮತ್ತು ಅಲಿ ಅವರು ಫೆಡರಲ್ ಕಾನೂನು ಜಾರಿ ಮತ್ತು ರಕ್ಷಣಾ ಸಮುದಾಯದ ಸದಸ್ಯರೊಂದಿಗೆ ಬೆರೆಯಲು ಹೋಮ್ಲ್ಯಾಂಡ್ ಸೆಕ್ಯುರಿಟಿ ಇಲಾಖೆಯೊಂದಿಗೆ ತಮ್ಮ ನಕಲಿ ಸಂಬಂಧವನ್ನು ಬಳಸಲು ಪ್ರಯತ್ನಿಸಿದ್ದಾರೆ.
ತಾಹೆರ್ಜಾದೆ ಅವರು ಯುನೈಟೆಡ್ ಸ್ಟೇಟ್ಸ್ ಸೀಕ್ರೆಟ್ ಸರ್ವಿಸ್ ನ ಸದಸ್ಯರನ್ನು ಮತ್ತು ಡಿಎಚ್ಎಸ್ ನ ಉದ್ಯೋಗಿಯನ್ನು ಇತರ ವಿಷಯಗಳ ಜೊತೆಗೆ, ಬಾಡಿಗೆ-ಮುಕ್ತ ಅಪಾರ್ಟ್‌ಮೆಂಟ್‌ಗಳನ್ನು (40,000 ಯುಎಸ್ ಡಾಲರ್ ಕ್ಕಿಂತ ಹೆಚ್ಚು ವಾರ್ಷಿಕ ಬಾಡಿಗೆಯೊಂದಿಗೆ), ಐಫೋನ್ ಗಳು, ಡ್ರೋನ್, ಫ್ಲಾಟ್-ಸ್ಕ್ರೀನ್ ಟೆಲಿವಿಷನ್, ಆಕ್ರಮಣಕಾರಿ ರೈಫಲ್, ಜನರೇಟರ್ ಕಣ್ಗಾವಲು ವ್ಯವಸ್ಥೆಗಳನ್ನು ಒದಗಿಸಿದ್ದಾರೆ.
ತಾಹೆರ್ಜಾದೆ ಮತ್ತು ಅಲಿ ವಾಷಿಂಗ್ಟನ್ ಡಿಸಿಯಲ್ಲಿ ವಾಸಿಸುತ್ತಿದ್ದ ಅಪಾರ್ಟ್‌ಮೆಂಟ್ ಸಂಕೀರ್ಣದ ವಿವಿಧ ಭಾಗಗಳಲ್ಲಿ ವೀಡಿಯೊ ಕಣ್ಗಾವಲು ನಿರ್ಮಿಸಿದ್ದರು ಎಂದು ವರದಿ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
NASA ಹನುಮ ಸಾಹಸ: ಸೂರ್ಯನ ಬಳಿ ಸುಳಿದು ಸುಡದೆ ಪಾರು!
Suzuki; ಆಟೋಮೊಬೈಲ್ ಕ್ಷೇತ್ರದ ದಿಗ್ಗಜ ಒಸಾಮು ಸುಜುಕಿ ವಿಧಿವಶ
26/11 ದಾಳಿಯ ಸಂಚುಕೋರ ಅಬ್ದುಲ್ ರೆಹಮಾನ್ ಮಕ್ಕಿ ಪಾಕಿಸ್ತಾನದಲ್ಲಿ ಹೃದಯಾಘಾತದಿಂದ ಸಾ*ವು
ಟಿಪ್ಸ್ ಕೊಡದಿದ್ದಕ್ಕೆ ಗರ್ಭಿಣಿ ಮಹಿಳೆಯನ್ನೇ 14 ಬಾರಿ ಇರಿದ ಪಿಜ್ಜಾ ಡೆಲಿವರಿ ಮಹಿಳೆ
New York:ಆಸ್ತಿ ಹಂಚಿದ ಶ್ರೀಮಂತ ಹೂಡಿಕೆದಾರ ಬಫೆಟ್; ಕುಟುಂಬದ 4 ಫೌಂಡೇಶನ್ ಆಸ್ತಿ ಹಂಚಿಕೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Ullala; ನೇಮದ ಗದ್ದೆಯಲ್ಲಿ ತ್ಯಾಜ್ಯ ರಾಶಿ: ವೈದ್ಯನಾಥ ದೈವದ ಕೋಪಾವೇಶ
Security ನೀಡುವಂತೆ ಕೇಂದ್ರ ಸಚಿವರಿಗೆ ಸ್ನೇಹಮಯಿ ಪತ್ರ
Puttur: ನಿಯಂತ್ರಣ ತಪ್ಪಿ ಗುಂಡಿಗೆ ಬಿದ್ದ ಕಾರು; ಮೂವರ ದುರ್ಮರಣ
INDvsAUS: ವಿಚಿತ್ರ ರೀತಿಯಲ್ಲಿ ಔಟಾದ ರಿಷಭ್ ಪಂತ್ ವಿರುದ್ದ ಕಿಡಿಕಾರಿದ ಗಾವಸ್ಕರ್
Hathras: ಶಾಲೆಗೆ ರಜೆ ಸಿಗಬೇಕೆಂದು 2ನೇ ತರಗತಿ ಮಗುವನ್ನು ಕೊಂದ ವಿದ್ಯಾರ್ಥಿ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.