20 ಸೆಕೆಂಡ್ ಉರಿಯಿತು ಕೃತಕ ಸೂರ್ಯ
ವಿಶ್ವದಾಖಲೆ ನಿರ್ಮಿಸಿ ದಕ್ಷಿಣ ಕೊರಿಯಾದ ವಿಜ್ಞಾನಿಗಳ ಮಹತ್ವದ ಸಾಧನೆ
Team Udayavani, Dec 31, 2020, 2:42 AM IST
ಸಿಯೋಲ್: ಸೂರ್ಯನ ಬೆಳಕು ಎಂದು ಅಷ್ಟು ಪ್ರಖರತೆ. ಅದಕ್ಕೇ ಪ್ರತಿಸ್ಪರ್ಧಿ ಸಾಧ್ಯವೇ? ದಕ್ಷಿ ಣ ಕೊರಿಯಾದಲ್ಲಿ ಕೃತಕ ಸೂರ್ಯನನ್ನು ನಿರ್ಮಿಸಿ, ಇಪ್ಪತ್ತು ಸೆಕೆಂಡ್ಗಳ 100 ಮಿಲಿಯನ್ ಡಿಗ್ರಿ ಸೆಲ್ಸಿಯಸ್ ತಾಪಮಾನ ಇರುವ ಬೆಳಕು ಸೃಷ್ಟಿಸಲಾಗಿದೆ. ಈ ಸಾಧನೆಯ ಹೊಸ ವಿಶ್ವದಾಖಲೆ ನಿರ್ಮಿಸಲಾಗಿದೆ. ದಕ್ಷಿಣ ಕೊರಿಯಾದ ಭೌತಶಾಸ್ತ್ರ ವಿಜ್ಞಾನಿಗಳು “ಕೊರಿಯಾ ಸೂಪರ್ಕಂಡಕ್ಟಿಂಗ್ ತೊಕ ಮಕ್ ಅಡ್ವಾನ್ಸ್$x ರಿಸರ್ಚ್- ಕೆಸ್ಟಾರ್ ಎಂಬ ವ್ಯವಸ್ಥೆಯ ಮೂಲಕ ಕೃತಕ ಸೂರ್ಯ ನನ್ನು ಸೃಷ್ಟಿಸಿದ್ದಾರೆ. 100 ಮಿಲಿ ಯನ್ ಡಿಗ್ರಿ ಸೆಲ್ಸಿಯಸ್ ತಾಪಮಾನ ದಿಂದ ಬಿಸಿಯಾಗಿರುವ ಅಣುಗಳಿಂದ ಕೂಡಿದ ಪ್ಲಾಸ್ಮಾವನ್ನು ಫ್ಯೂಷನ್ಗಾಗಿ ಬಳಕೆ ಮಾಡಿದ್ದಾರೆ. ಅಣುವನ್ನು ಬಿಸಿ ಸ್ಥಿತಿಯಲ್ಲಿಯೇ ಇರುವಂತೆ ಮಾಡಲು, ಗರಿಷ್ಠ ತಾಪಮಾನದಲ್ಲಿ 20 ಸೆಕೆಂಡ್ಗಳ ಬೆಳಕು ಉರಿಯುವಂತೆ ಮಾಡಿದ್ದಾರೆ. ಕೊರಿಯನ್ ಇನ್ಸ್ಟಿಟ್ಯೂಟ್ ಆಫ್ ಫ್ಯೂಶನ್ ಎನರ್ಜಿ (ಕೆಇಎಫ್), ಸಿಯೋಲ್ ನ್ಯಾಶನಲ್ ಯುನಿವರ್ಸಿಟಿ ಮತ್ತು ಅಮೆರಿಕದ ಕೊಲಂಬಿಯಾ ವಿವಿ ಜತೆಗೆ ಗೂಡಿ ನ.24ರಂದೇ ಈ ಸಾಧನೆ ಮಾಡಲಾಗಿದೆ.
ಕೆಸ್ಟಾರ್ನ ನಿರ್ದೇಶ ಸಿ-ವೂ ಯೂನ್ ಈ ಬಗ್ಗೆ ಮಾತನಾಡಿ ಫ್ಯೂಶನ್ ಎನರ್ಜಿಯನ್ನು ಹೊಂದುವ ನಿಟ್ಟಿನಲ್ಲಿ ಅತ್ಯಂತ ಉನ್ನತ ಮಟ್ಟದ ತಂತ್ರಜ್ಞಾನ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ 20 ಸೆಕೆಂಡ್ಗಳಷ್ಟು ಕಾಲ ಬೆಳಕು ಉರಿಸಿ ಯಶಸ್ಸು ಸಾಧಿಸಿರುವುದು ಮುಂದಿನ ದಿನಗಳಿಗೆ ಅನುಕೂಲವಾಗಲಿದೆ ಎಂದಿದ್ದಾರೆ. ಕಳೆದ ವರ್ಷ 8 ಸೆಕೆಂಡ್ಗಳಷ್ಟು ಕಾಲ ಕೃತಕ ಸೂರ್ಯನಲ್ಲಿ ಬೆಳಕು ಉರಿಯುವಂತೆ ಮಾಡಲಾಗಿತ್ತು. 2008ರಲ್ಲಿ ಕೆಸ್ಟಾರ್ ಮೊದಲ ಬಾರಿಗೆ ಇಂಥ ಸಾಧನೆ ಮಾಡಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Social Media: ಈ ದೇಶದಲ್ಲಿ 16 ವರ್ಷದೊಳಗಿನವರು ಇನ್ಸ್ಟಾಗ್ರಾಮ್, ಫೇಸ್ಬುಕ್ ಬಳಸುವಂತಿಲ್ಲ!
Sydney; ಮಿಲಿಸೆಕೆಂಡಲ್ಲೇ ವಾಸನೆ ಪತ್ತೆ ಹಚ್ಚುವ ರೋಬೋಟ್ ಸೃಷ್ಟಿ!
Canada-India: ಕಾನ್ಸುಲರ್ ಕ್ಯಾಂಪ್ ರದ್ದು; ಕೆನಡಾಗೆ ಭಾರತ ತಿರುಗೇಟು
Australia: ಜಾಲತಾಣ ಬಳಕೆಗೆ ಕನಿಷ್ಠ 16 ವರ್ಷ ಮಿತಿ ನಿಗದಿ?
US: ಮೊದಲ ದಿನವೇ ಜಗತ್ತಿಗೆ ಟ್ರಂಪ್ “ಎನರ್ಜಿ’ ಶಾಕ್!
MUST WATCH
ಹೊಸ ಸೇರ್ಪಡೆ
Waqf Bill: ಜೆಪಿಸಿ ಅಧ್ಯಕ್ಷರ ಭೇಟಿ ಚುನಾವಣ ನಿಯಮ ಉಲ್ಲಂಘನೆ: ಸಚಿವ ಪ್ರಿಯಾಂಕ್
MUDA: ಆರೋಪಿ ಸ್ಥಾನದಲ್ಲಿರುವ ಸಿಎಂ ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುತ್ತಿದ್ದಾರೆ: ಬಿವೈವಿ
By Election: ಒಬ್ಬ ಯುವಕನ ಕಟ್ಟಿ ಹಾಕಲು ಬೀಡುಬಿಟ್ಟ ಕೈ ನಾಯಕರ ದಂಡು: ಎಚ್.ಡಿ.ಕುಮಾರಸ್ವಾಮಿ
Rahul Gandhi ಗುರಿ ತಪ್ಪಿದ ಕ್ಷಿಪಣಿ, ಸೋನಿಯಾರಿಂದ ತರಬೇತಿ ಅಗತ್ಯ: ಹಿಮಾಂತ
Delhi; ಕಾನೂನು ಅಧಿಕಾರಿ ನಿವಾಸದಲ್ಲಿ 3.79 ಕೋಟಿ ನಗದು ಸಿಬಿಐನಿಂದ ವಶಕ್ಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.