ತಾಪಕ್ಕೆ ಹೈರಾಣಾದ ಹಜ್ ಯಾತ್ರಿಕರು… ನೂರಾರು ಮಂದಿ ಸಾವಿನ ಶಂಕೆ
ಅರಾಫತ್ ಪರ್ವತದಲ್ಲಿ 48 ಡಿ.ಸೆ. ತಾಪಮಾನ
Team Udayavani, Jul 1, 2023, 7:45 AM IST
ದುಬೈ: ಹಜ್ ಯಾತ್ರೆಗೆಂದು ಮೆಕ್ಕಾಗೆ ತೆರಳಿರುವ ಸಾವಿರಾರು ಯಾತ್ರಿಕರು ಬಿಸಿಲ ಬೇಗೆಯಿಂದ ಹೈರಾಣಾಗಿದ್ದಾರೆ. ಅರಾಫತ್ ಪರ್ವತದಲ್ಲಿ ತಾಪಮಾನವು 48 ಡಿ.ಸೆ.ಗೆ ತಲುಪಿದ್ದು, 2 ಸಾವಿರಕ್ಕೂ ಅಧಿಕ ಮಂದಿ “ಅಧಿಕ ತಾಪದ ಒತ್ತಡ’ ಸಮಸ್ಯೆ ಎದುರಿಸಿದ್ದಾರೆ. ಮತ್ತೂಂದು ಮೂಲದ ಪ್ರಕಾರ, ನೂರಾರು ಮಂದಿ ಮೃತಪಟ್ಟಿದ್ದಾರೆ ಎಂದೂ ಹೇಳಲಾಗಿದೆ. ಆದರೆ ಈ ಕುರಿತು ಸೌದಿ ಆಡಳಿತ ಯಾವುದೇ ಮಾಹಿತಿ ನೀಡಿಲ್ಲ.
ಈ ಬಾರಿ ಸುಮಾರು 18 ಲಕ್ಷ ಮುಸ್ಲಿಂ ಯಾತ್ರಿಕರು ಹಜ್ ಯಾತ್ರೆ ಪೂರ್ಣಗೊಳಿಸಿದ್ದಾರೆ. ಕೊರೊನಾ ನಂತರ ಗರಿಷ್ಠ ವಯೋಮಿತಿಯನ್ನು ತೆಗೆದುಹಾಕಿದ ಕಾರಣ ಈ ಬಾರಿ ಹಿರಿಯ ನಾಗರಿಕ ಯಾತ್ರಿಕರ ಸಂಖ್ಯೆ ಅಧಿಕವಾಗಿತ್ತು. ಗುರುವಾರ ಒಂದೇ ದಿನ 1700ಕ್ಕೂ ಹೆಚ್ಚು ಮಂದಿ ಬಿಸಿಲಿನ ಝಳ ತಾಳಲಾರದೆ ಅನಾರೋಗ್ಯಕ್ಕೀಡಾಗಿ ಚಿಕಿತ್ಸೆ ಪಡೆದಿದ್ದಾರೆ ಎಂದು ಸೌದಿ ಆರೋಗ್ಯ ಇಲಾಖೆ ತಿಳಿಸಿದೆ. ಜತೆಗೆ, ಸಾಧ್ಯವಾದಷ್ಟು ಬಿಸಿಲಿಗೆ ಬಾರದೇ, ಹೆಚ್ಚು ನೀರು ಕುಡಿಯುವಂತೆಯೂ ಸಲಹೆ ನೀಡಿದೆ.
ಇದೇ ವೇಳೆ, ಇಂಡೋನೇಷ್ಯಾ ಸರ್ಕಾರವು ಹಜ್ ಯಾತ್ರೆ ವೇಳೆ ತನ್ನ 230 ನಾಗರಿಕರು ಮೃತಪಟ್ಟಿರುವುದಾಗಿ ತಿಳಿಸಿದೆ. ಇನ್ನು, ಇರಾನ್ನ 10 ಮಂದಿ, ಅಲ್ಜೀರಿಯಾದ 8, ಮೊರೊಕ್ಕೋದ ನಾಲ್ವರು, ಈಜಿಪ್ಟ್ನ 8 ಯಾತ್ರಿಕರು ಅಸುನೀಗಿದ್ದಾರೆ ಎಂದು ತಿಳಿದುಬಂದಿದೆ. ಆದರೆ, ಇವರೆಲ್ಲರ ಸಾವಿಗೂ ತಾಪಮಾನವೇ ಕಾರಣ ಎಂಬುದು ದೃಢಪಟ್ಟಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
German: ಮಾರುಕಟ್ಟೆಗೆ ನುಗ್ಗಿದ ಕಾರು, ಇಬ್ಬರು ಸಾವು, 60ಕ್ಕೂ ಹೆಚ್ಚು ಗಾಯ, ವೈದ್ಯನ ಬಂಧನ
GDP ಕುಸಿತ: ಆರ್ಥಿಕ ಹಿಂಜರಿತದತ್ತ ನ್ಯೂಜಿಲ್ಯಾಂಡ್
Afghanistan: 2 ಅಪಘಾತ: 50 ಸಾವು, 76 ಮಂದಿಗೆ ಗಾಯ
Missile Development: ಕ್ಷಿಪಣಿ ನಿರ್ಮಾಣ ಆರೋಪ: ಪಾಕ್ಗೆ ಅಮೆರಿಕ ನಿರ್ಬಂಧ
Viral Video: ಖ್ಯಾತ ನ್ಯೂಸ್ ಆ್ಯಂಕರ್ ನ ಖಾಸಗಿ ವಿಡಿಯೋ ಲೀಕ್..? ಸಿಕ್ಕಾಪಟ್ಟೆ ವೈರಲ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
WPL 2025: ವನಿತಾ ಪ್ರೀಮಿಯರ್ ಲೀಗ್ ದಿನಾಂಕ ಅಂತಿಮ; ಬೆಂಗಳೂರಿನಲ್ಲಿಲ್ಲ ಪಂದ್ಯಗಳು
RBI:ಸಾಲ ಮನ್ನಾ ಸೇರಿ ಉಚಿತ ಕೊಡುಗೆ ಆತಂಕಕಾರಿ- ಆರ್ಬಿಐ
PM Modi: ಇಂದಿನಿಂದ ಮೋದಿ ಕುವೈತ್ ಭೇಟಿ…: 43 ವರ್ಷಗಳ ಬಳಿಕ ಭಾರತದ ಪ್ರಧಾನಿ ಭೇಟಿ
UI Movie Review: ಫೋಕಸ್ ಸಿಗೋವರೆಗೆ ಸಿನ್ಮಾ ನೋಡ್ತಾನೇ ಇರಿ!
Bantwal; ನಿಷೇಧವಿದ್ದರೂ ಹಳೇಯ ಸೇತುವೆಯಲ್ಲಿ ಸಂಚಾರ; ಸಿಲುಕಿಕೊಂಡ ಗೂಡ್ಸ್ ವಾಹನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.