2024ಕ್ಕೆ ಭಾರತೀಯ ಮೂಲದವರ ಹಣಾಹಣಿ?;
ನಿಕ್ಕಿ ಹ್ಯಾಲೆ- ಕಮಲಾ ನಡುವೆ ಸ್ಪರ್ಧೆ ಸಾಧ್ಯತೆ; ಹೊಸ ಚರ್ಚೆಗೆ ನಾಂದಿ ಹಾಡಿದ ನಿಕ್ಕಿ ಹ್ಯಾಲೆ ಭಾಷಣ
Team Udayavani, Aug 27, 2020, 5:55 AM IST
ವಾಷಿಂಗ್ಟನ್: ಅಮೆರಿಕದಲ್ಲಿ 2024ರಲ್ಲಿ ನಡೆಯಲಿರುವ ಅಧ್ಯಕ್ಷೀಯ ಚುನಾವಣೆಯಲ್ಲಿ ಭಾರತದ ಮೂಲದ ಇಬ್ಬರು ನಾಯಕಿಯರ ನಡುವೆ ಸ್ಪರ್ಧೆ ನಡೆಯಲಿದೆಯೇ? ಅಕ್ಟೋಬರ್-ನವೆಂಬರ್‌ನಲ್ಲಿ ನಡೆಯಲಿರುವ ಚುನಾವಣೆ ಪ್ರಚಾರದ ಬಿರುಸಿನಲ್ಲಿಯೇ ಇಂಥ ಅಂಶ ಚರ್ಚೆಗೆ ಶ್ರೀಕಾರ ಹಾಕಿದೆ. ವಿಶ್ವಸಂಸ್ಥೆಯಲ್ಲಿ ಅಮೆರಿಕದ ಮಾಜಿ ರಾಯಭಾರಿ ನಿಕ್ಕಿ ಹ್ಯಾಲೆ ಮತ್ತು ಡೆಮಾಕ್ರಾಟಿಕ್ ಪಕ್ಷದ ಉಪಾಧ್ಯಕ್ಷ ಅಭ್ಯರ್ಥಿ ಕಮಲಾ ಹ್ಯಾರಿಸ್ ನಡುವೆ ಅಧ್ಯಕ್ಷೀಯ ಸಮರ ನಡೆಯಲಿದೆ ಎಂದು ಹೇಳಲಾಗುತ್ತಿದೆ. ಅದಕ್ಕೆ ವೇದಿಕೆಯಾಗಿರುವುದು ವಾಷಿಂಗ್ಟನ್‌ನಲ್ಲಿ ನಡೆಯುತ್ತಿರುವ ರಿಪಬ್ಲಿಕನ್ ಪಕ್ಷದ ಸಮಾವೇಶದಲ್ಲಿನ ಚರ್ಚೆ.
ಅಮೆರಿಕದ ಹಾಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರನ್ನು ಸಮರ್ಥಿಸಿ ಅವರು ಮಾಡಿದ ಭಾಷಣ ದಿಂದಾಗಿ ಇನ್ನು ನಾಲ್ಕು ವರ್ಷ ಕಳೆದು ನಡೆಯಲಿರುವ ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿಯಾಗಿ ಸೌತ್ ಕ್ಯಾರೋಲಿನಾದ ಮಾಜಿ ಗವರ್ನರ್ ಕೂಡ ಆಗಿರುವ ನಿಕ್ಕಿ ಹ್ಯಾಲಿ ಹೊರಹೊಮ್ಮುವ ಸಾಧ್ಯತೆ ಇದೆ ಎಂದು ಅಮೆರಿಕದ ಚುನಾವಣಾ ವಿಶ್ಲೇಷಕರು ವಾದ ಮಂಡಿಸಲಾರಂಭಿಸಿದ್ದಾರೆ. “ಕಮಲಾ ಹ್ಯಾರಿಸ್ ಅವರಂತೆಯೇ ನಿಕ್ಕಿ ಹ್ಯಾಲೆ ಭಾರತೀಯ ಮೂಲದವರು. ಪ್ರತಿಸ್ಪರ್ಧಿ ಪಕ್ಷದ ಅಭ್ಯರ್ಥಿಯಂತೆಯೇ ಸಮರ್ಥ ಮತ್ತು ನಿಖರವಾಗಿ ತಮ್ಮ ಮಾತುಗಳನ್ನು ಮುಂದಿಡುತ್ತಿದ್ದಾರೆ. ಹೀಗಾಗಿ ಅವರು 2024 ಅಥವಾ 20208ರಲ್ಲಿ ನಡೆಯಲಿರುವ ಅಧ್ಯಕ್ಷೀಯ ಚುನಾವಣೆಯಲ್ಲಿ ಸಂಭಾವ್ಯ ಅಭ್ಯರ್ಥಿಯಾಗುವ ಸಾಧ್ಯತೆ ಇದೆ’ ಎಂದು ಯು.ಸಿ. ರಿವರ್‌ಸೈಡ್ ಕಾಲೇಜಿನಲ್ಲಿ ರಾಜಕೀಯಶಾಸ್ತ್ರದ ಪ್ರಾಧ್ಯಾಪಕರಾಗಿ ರುವ ಕಾರ್ತಿಕ್ ರಾಮಕೃಷ್ಣನ್ ಹೇಳಿದ್ದಾರೆ.
ಇನ್ನು ಡೆಮಾಕ್ರಾಟಿಕ್ ಪಕ್ಷದ ಉಪಾಧ್ಯಕ್ಷ ಹುದ್ದೆಯ ಅಭ್ಯರ್ಥಿಯಾಗಿರುವ ಕಮಲಾ ಹ್ಯಾರಿಸ್ ಕೂಡ ಸರಕಾರದ ಮಟ್ಟದಲ್ಲಿ ಹಲವು ಉನ್ನತ ಹುದ್ದೆಗಳನ್ನು ನಿರ್ವಹಿಸಿದ ಅನುಭವ ಇದೆ.
ಟ್ರಂಪ್ ಬೆಂಬಲಕ್ಕೆ ಕುಟುಂಬ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬೆಂಬಲಕ್ಕೆ ಅವರ ಕುಟುಂಬ ವರ್ಗವೇ ನಿಂತಿದೆ. ವಾಷಿಂಗ್ಟನ್‌ನಲ್ಲಿ ಆಯೋಜಿ ಸಲಾಗಿದ್ದ ರಿಪಬ್ಲಿಕನ್ ಪಕ್ಷದ ಕಾರ್ಯಕ್ರಮದಲ್ಲಿ ಭಾಗವಹಿಸಿದ ಟ್ರಂಪ್ ಪುತ್ರ, ಎರಿಕ್ ಟ್ರಂಪ್, ಪುತ್ರಿ ಟಿಫಾನಿ ಟ್ರಂಪ್, ಪತ್ನಿ ಮೆಲಾನಿಯಾ ಟ್ರಂಪ್ ಅಮೆರಿಕದ ಭವಿಷ್ಯಕ್ಕಾಗಿ ಎರಡನೇ ಅವಧಿಗೆ ಟ್ರಂಪ್ ಅವರನ್ನೇ ಮತ್ತೂಮ್ಮೆ ಗೆಲ್ಲಿಸಬೇಕೆಂದು ಮನವಿ ಮಾಡಿದರು. “ಪತಿಯಾಗಿ ಡೊನಾಲ್ಡ್ ಟ್ರಂಪ್ ಎಲ್ಲಾ ರೀತಿಯಲ್ಲಿ ಬೆಂಬಲ ನೀಡುತ್ತಿದ್ದಾರೆ. ಮಹಿಳಾ ನಾಯಕಿರನ್ನು ಆಡಳಿತದ ಪ್ರಮುಖ ಹುದ್ದೆಗಳಿಗೆ ನೇಮಕ ಮಾಡುವ ಮೂಲಕ ಸದೃಢ ಆಡಳಿತ ನೀಡಿದ್ದಾರೆ. ವಿಶೇಷ ವಾಗಿ ಚಿಂತನೆ ಇರುವವರಿಗೆ ಆದ್ಯತೆ ನೀಡಿದ್ದಾರೆ’ ಎಂದು ಟ್ರಂಪ್ ಪತ್ನಿ ಮೆಲಾನಿಯಾ ಟ್ರಂಪ್ ಹೇಳಿದರು. ಕೋವಿಡ್ ವಿರುದ್ಧ ಹೋರಾಡುವ ವರಿಗೆ ಟ್ರಂಪ್ ಬೆಂಬಲವಿದೆ ಎಂದರು ಮೆಲಾನಿಯಾ.
ಕೆನೋಶಾ ಗಲಭೆಗೆ ಇಬ್ಬರು ಸಾವು
ಕೆನೋಶಾ: ಅಮೆರಿಕ ಕೆನೋಶಾದಲ್ಲಿ ಕಪ್ಪು ವರ್ಣೀಯ ವ್ಯಕ್ತಿ ವಿರುದ್ಧ ಗುಂಡು ಹಾರಿಸಿದ ಪ್ರಕರಣ ಖಂಡಿಸಿ ನಡೆದ ಪ್ರತಿಭಟನೆಯಲ್ಲಿ ಇಬ್ಬರು ಅಸುನೀಗಿದ್ದಾರೆ. ಒಬ್ಬ ವ್ಯಕ್ತಿ ಗಾಯಗೊಂಡಿದ್ದಾನೆ. ಕಳೆದ ಭಾನುವಾರ ಕಪ್ಪು ವರ್ಣೀಯ ವ್ಯಕ್ತಿಗೆ ಗುಂಡು ಹಾರಿಸಿದ್ದನ್ನು ಖಂಡಿಸಿ ಕೆನೋಶಾದಲ್ಲಿ ಪ್ರತಿಭಟನೆ ನಡೆಯುತ್ತಿತ್ತು. ಪೊಲೀಸರು ಶಾಂತರಾಗಿ ಇರುವಂತೆ ಸೂಚಿಸಿದರೂ ಪ್ರಯೋಜನವಾಗಲಿಲ್ಲ. ಕೆನೋಶಾ ಪೊಲೀಸ್ ಮುಖ್ಯಸ್ಥ ಲೆ.ಜೋಸೆಫ್ ನೊಸಾಲಿಕ್ ಮಾಹಿತಿ ನೀಡಿ ಗಾಯಗೊಂಡ ವ್ಯಕ್ತಿಯ ಸ್ಥಿತಿ ಗಂಭೀರ ವಾಗಿದೆ. ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ. ಗುಂಡು ಹಾರಾಟ ನಡೆಸಿದ ಬಗ್ಗೆ ತನಿಖೆ ನಡೆಸಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ. ಅಸುನೀಗಿದವರ ಗುರುತನ್ನೂ ಪೊಲೀಸರು ಬಹಿರಂಗಪಡಿಸಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bantwal: ತುಂಬೆ ಶ್ರೀಮಹಾಲಿಂಗೇಶ್ವರ ದೇವಸ್ಥಾನಕ್ಕೆ ಕನ್ನ; ಲಕ್ಷಾಂತರ ಮೌಲ್ಯದ ನಗನಗದು ಲೂಟಿ
Threat: ತಪ್ಪಾಯಿತೆಂದು ಕ್ಷಮೆ ಕೇಳಿ ಇಲ್ಲ 5ಕೋಟಿ ನೀಡಿ.. ಸಲ್ಮಾನ್ ಖಾನ್ ಗೆ ಮತ್ತೆ ಬೆದರಿಕೆ
ಅಂಗಡಿಯಲ್ಲಿ ಬಿಟ್ಟು ಹೋಗಿದ್ದ 1.20 ಲ.ರೂ ಹಿಂದಿರುಗಿಸಿ ಮಾನವೀಯತೆ ಮೆರೆದ ಶಾಸಕ ಬಸವಂತಪ್ಪ
Kavoor: ಎಡನೀರು ಮಠದ ಶ್ರೀಗಳ ಮೇಲೆ ಹಲ್ಲೆ… ಶಾಸಕ ಡಾ.ಭರತ್ ಶೆಟ್ಟಿ ವೈ. ಖಂಡನೆ
ಅಕ್ರಮ ಮರಳುಗಾರಿಕೆ ಕುರಿತು ಮಾಹಿತಿ ನೀಡಿದ ಆರೋಪ… ವ್ಯಕ್ತಿಗೆ ಹಲ್ಲೆ ನಡೆಸಿ ಇರಿಯಲು ಯತ್ನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.