ಮಡಗಾಸ್ಕರ್‌ನಲ್ಲಿ ವಲಸಿಗರ ಬೋಟ್ ಮುಳುಗಿ 22 ಮಂದಿ ಮೃತ್ಯು, ಹಲವರ ರಕ್ಷಣೆ, ಇಬ್ಬರು ನಾಪತ್ತೆ
Team Udayavani, Mar 13, 2023, 4:05 PM IST
ಪೂರ್ವ ಆಫ್ರಿಕಾ: ಪೂರ್ವ ಆಫ್ರಿಕಾದ ಮಡಗಾಸ್ಕರ್‌ನಲ್ಲಿ 47 ಜನರನ್ನು ಹೊತ್ತೊಯ್ಯುತ್ತಿದ್ದ ಬೋಟೊಂದು ಕರಾವಳಿ ಭಾಗದಲ್ಲಿ ಮುಳುಗಿ ಕನಿಷ್ಠ 22 ವಲಸಿಗರು ಸಾವನ್ನಪ್ಪಿದ್ದಾರೆ.
ಮಡಗಾಸ್ಕರ್‌ನ ಬಂದರು ಪ್ರಾಧಿಕಾರವು ಫ್ರೆಂಚ್ ದ್ವೀಪವಾದ ಮಯೊಟ್ಟೆಗೆ ನೌಕಾಯಾನ ಮಾಡಲು ಯತ್ನಿಸಿದ ವೇಳೆ ದೋಣಿ ಮಗುಚಿ ಬಿದ್ದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಮ್ಯಾರಿಟೈಮ್ ಮತ್ತು ರಿವರ್ ಪೋರ್ಟ್ ಏಜೆನ್ಸಿಯ ಹೇಳಿಕೆಯ ಪ್ರಕಾರ, ಆಫ್ರಿಕನ್ ರಾಷ್ಟ್ರದ ಉತ್ತರದಲ್ಲಿರುವ ಅಂಕಝೊಂಬೊರೊನಾ ಸಮುದ್ರದಲ್ಲಿ ದೋಣಿ ಮುಳುಗಿದ್ದು. ದೋಣಿ ಅವಘಡ ಸಂಭವಿಸಿದ ಮಾಹಿತಿ ತಿಳಿದ ರಕ್ಷಣಾ ತಂಡ ಘಟನಾ ಸ್ಥಳಕ್ಕೆ ದೌಡಾಯಿಸಿ ನೀರಿನಲ್ಲಿ ಮುಳುಗಿದ್ದ 23 ಮಂದಿಯನ್ನು ರಕ್ಷಣೆ ಮಾಡಿದ್ದು, 22 ಮಂದಿಯ ದೇಹಗಳನ್ನು ನೀರಿನಿಂದ ಮೇಲಕ್ಕೆತ್ತಲಾಗಿದೆ ಇಬ್ಬರು ನಾಪತ್ತೆಯಾಗಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ರಕ್ಷಣಾ ತಂಡದಿಂದ ನಾಪತ್ತೆಯಾದವರ ಶೋಧ ಕಾರ್ಯ ನಡೆಯುತ್ತಿದ್ದು, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಹತ್ತಿರದ ಆಸ್ಪತ್ರೆಗೆ ಸಾಗಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.
ಇದನ್ನೂ ಓದಿ: ಸಫಾರಿಯಲ್ಲಿ ಕಂಡ ಮೂರು ಹುಲಿಗಳು: ಮನಸೂರೆಗೊಂಡ ಪ್ರವಾಸಿಗರು
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.