26/11 ಮುಂಬೈ ದಾಳಿಯ ಪ್ರಾಜೆಕ್ಟ್ ಮ್ಯಾನೇಜರ್ ಗೆ 15 ವರ್ಷ ಜೈಲು ಶಿಕ್ಷೆ ವಿಧಿಸಿದ ಪಾಕಿಸ್ಥಾನ
Team Udayavani, Jun 25, 2022, 9:21 AM IST
ಲಾಹೋರ್ : 2008 ರ ಮುಂಬೈ ದಾಳಿಯ ಪ್ರಮುಖ ನಿರ್ವಾಹಕನಿಗೆ ಭಯೋತ್ಪಾದಕ ಹಣಕಾಸು ಪ್ರಕರಣದಲ್ಲಿ ಪಾಕಿಸ್ತಾನದ ಭಯೋತ್ಪಾದನಾ ವಿರೋಧಿ ನ್ಯಾಯಾಲಯವು 15 ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿದೆ.
“ಈ ತಿಂಗಳ ಆರಂಭದಲ್ಲಿ ಲಾಹೋರ್‌ನ ಭಯೋತ್ಪಾದನಾ ನಿಗ್ರಹ ನ್ಯಾಯಾಲಯವು ನಿಷೇಧಿತ ಲಷ್ಕರ್-ಎ-ತೊಯ್ಬಾ (ಎಲ್‌ಇಟಿ) ಕಾರ್ಯಕರ್ತ ಸಾಜಿದ್ ಮಜೀದ್ ಮಿರ್‌ಗೆ ಭಯೋತ್ಪಾದನೆಗೆ ಹಣಕಾಸು ಒದಗಿಸಿದ ಪ್ರಕರಣದಲ್ಲಿ 15 ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿತ್ತು” ಎಂದು ಹಿರಿಯ ವಕೀಲರು ಶುಕ್ರವಾರ ಪಿಟಿಐಗೆ ತಿಳಿಸಿದರು.
ಏಪ್ರಿಲ್ ನಲ್ಲಿ ಬಂಧಿತನಾದ 40 ವರ್ಷದ ಆರೋಪಿ ಮಿರ್ ಕೋಟ್ ಲಪ್‌ಖಾಪ್ಟ್ ಜೈಲಿನಲ್ಲಿದ್ದಾನೆ. ನ್ಯಾಯಾಲಯವು ಆತನಿಗೆ 4,00,000 ರೂ.ಗಿಂತ ಹೆಚ್ಚಿನ ದಂಡವನ್ನು ವಿಧಿಸಿದೆ ಎಂದು ಅವರು ಹೇಳಿದರು.
ಫೈನಾನ್ಶಿಯಲ್ ಆಕ್ಷನ್ ಟಾಸ್ಕ್ ಫೋರ್ಸ್ (ಎಫ್‌ಎಟಿಎಫ್) ನ ಕೊನೆಯ ಸಭೆಯ ಮೊದಲು, ಪಾಕಿಸ್ತಾನವು ಎಫ್‌ಎಟಿಎಫ್ ‘ಗ್ರೇ ಲಿಸ್ಟ್’ ನಿಂದ ತೆಗೆದುಹಾಕಲು ಸಾಜಿದ್ ಮಿರ್‌ನನ್ನು ಬಂಧಿಸಿ ಕಾನೂನು ಕ್ರಮ ಜರುಗಿಸಿದೆ ಎಂದು ಏಜೆನ್ಸಿಗೆ ತಿಳಿಸಿದೆ ಎಂದು ವರದಿಯಾಗಿದೆ.
ಇದನ್ನೂ ಓದಿ:ಹೋಗುವವರು ಹೋಗಿ.. ನಾನು ಹೊಸ ಶಿವಸೇನೆ ರಚಿಸುತ್ತೇನೆ: ಉದ್ಧವ್ ಠಾಕ್ರೆ
166 ಜನರ ಸಾವಿಗೆ ಕಾರಣವಾದ 26/11 ಮುಂಬೈ ದಾಳಿಯಲ್ಲಿನ ತನ್ನ ಕೃತ್ಯಕ್ಕಾಗಿ ಸಾಜಿದ್ ಮಿರ್ ಭಾರತದ ಮೋಸ್ಟ್ ವಾಂಟೆಡ್ ಪಟ್ಟಿಯಲ್ಲಿದ್ದಾನೆ. ಆತನ ತಲೆಗೆ 5 ಮಿಲಿಯನ್ ಅಮೇರಿಕನ್ ಡಾಲರ್ ಬಹುಮಾನ ಕಟ್ಟಲಾಗಿದೆ. ಮೀರ್ ನನ್ನು ಮುಂಬೈ ದಾಳಿಯ “ಪ್ರಾಜೆಕ್ಟ್ ಮ್ಯಾನೇಜರ್” ಎನ್ನಲಾಗಿದೆ. ಮಿರ್ 2005 ರಲ್ಲಿ ನಕಲಿ ಹೆಸರಿನಲ್ಲಿ ನಕಲಿ ಪಾಸ್‌ಪೋರ್ಟ್ ಬಳಸಿ ಭಾರತಕ್ಕೆ ಭೇಟಿ ನೀಡಿದ್ದ ಎಂದು ವರದಿಯಾಗಿದೆ.
ಮುಂಬೈ ಭಯೋತ್ಪಾದನಾ ದಾಳಿಯ ಮಾಸ್ಟರ್ ಮೈಂಡ್ ಮತ್ತು ಜೆಯುಡಿ ಮುಖ್ಯಸ್ಥ ಹಫೀಜ್ ಸಯೀದ್‌ಗೆ ಲಾಹೋರ್ ಎಟಿಸಿ ಭಯೋತ್ಪಾದನೆ ಹಣಕಾಸು ಪ್ರಕರಣಗಳಲ್ಲಿ ಈಗಾಗಲೇ 68 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಮುಂಬೈ ದಾಳಿ ಕಾರ್ಯಾಚರಣೆಯ ಕಮಾಂಡರ್ ಝಕಿಯುರ್ ರೆಹಮಾನ್ ಲಖ್ವಿ ಕೂಡ ಹಲವು ವರ್ಷಗಳ ಕಾಲ ಜೈಲು ಶಿಕ್ಷೆಗೆ ಗುರಿಯಾಗಿದ್ದಾನೆ. ಸಯೀದ್ ಮತ್ತು ಮಕಿ ಇಬ್ಬರೂ ಲಾಹೋರ್ ನ ಕೋಟ್ ಲಪ್‌ಖಾಪ್ಟ್ ಜೈಲಿನಲ್ಲಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Marriage: ಕ್ರಿಸ್ಮಸ್‌ಗೆ ಅಮೆಜಾನ್ ಸಿಇಒ ಅದ್ಧೂರಿ ವಿವಾಹ?
Washington: ಅಮೆರಿಕ ಗುಪ್ತಚರ ಸಂಸ್ಥೆಗೆ ತುಳಸಿ ಗಬಾರ್ಡ್ ಮುಖ್ಯಸ್ಥೆ
Daily Horoscope: ಉದ್ಯೋಗಾಸಕ್ತರಿಗೆ ಹೊಸ ಅವಕಾಶಗಳು ಗೋಚರ, ಸ್ವರ್ಣೋದ್ಯಮಕ್ಕೆ ಲಾಭ
Kinnigoli: ಪಕ್ಷಿಕೆರೆ; ಕೊಲೆ ಪ್ರಕರಣ ಮತ್ತಷ್ಟು ಸಂಗತಿಗಳು ಬೆಳಕಿಗೆ?
Media powerhouse: ರಿಲಯನ್ಸ್- ಡಿಸ್ನಿ ಕಂಪನಿ ವಿಲೀನ ಈಗ ಅಧಿಕೃತ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.