ಉಗ್ರ ಹಫೀಜ್ ಸಯೀದ್ ಗೃಹಬಂಧನ ಅವಧಿ ವಿಸ್ತರಣೆ
Team Udayavani, May 1, 2017, 10:17 AM IST
ಲಾಹೋರ್: ಮೂರು ತಿಂಗಳ ಗೃಹಬಂಧನದ ಅವಧಿ ಪೂರ್ಣಗೊಳಿಸಿದ ಮುಂಬಯಿಯ ದಾಳಿಯ ರೂವಾರಿ, ಜೆಯುಡಿ ಮುಖ್ಯಸ್ಥ ಹಫೀಜ್ ಸಯೀದ್ ಇನ್ನೂ 90 ದಿನಗಳ ಕಾಲ ಅಲ್ಲೇ ಇರಬೇಕಾಗಿದೆ. ಪಾಕ್ನ ಪಂಜಾಬ್ ಸರಕಾರ ಸಯೀದ್ ಮತ್ತು ನಾಲ್ವರು ಸಹಚರರ ಗೃಹಬಂಧನದ ಅವಧಿಯನ್ನು ಇನ್ನೂ ಮೂರು ತಿಂಗಳ ಕಾಲ ವಿಸ್ತರಿಸಲು ನಿರ್ಧರಿಸಿದೆ.
ಜ.20ರಂದು ಸಯೀದ್ ಮತ್ತು ಸಹಚರರನ್ನು ಗೃಹಬಂಧನಕ್ಕೆ ಒಳಪಡಿಸಲಾಗಿತ್ತು. ಉಗ್ರ ಸಯೀದ್ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ, ಕಠಿನ ಕ್ರಮ ಎದುರಿಸಬೇಕಾಗುತ್ತದೆ ಎಂದು ಟ್ರಂಡ್ ಆಡಳಿತ ಸೂಚಿಸಿದ ಹಿನ್ನೆಲೆಯಲ್ಲಿ ಗೃಹಬಂಧನದ ಅವಧಿ ವಿಸ್ತರಿಸಲಾಗಿದೆ ಎಂದು ಹೇಳಲಾಗುತ್ತಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.