ಜಾರ್ಜಿಯಾದಲ್ಲಿ ಕಾರು ಪಲ್ಟಿಯಾಗಿ ಮೂವರು ಇಂಡೋ-ಅಮೆರಿಕನ್ ವಿದ್ಯಾರ್ಥಿಗಳು ದುರ್ಮರಣ
Team Udayavani, May 21, 2024, 12:32 PM IST
ನವದೆಹಲಿ: ಕಾರು ಪಲ್ಟಿಯಾಗಿ ಮೂವರು ಇಂಡೋ – ಅಮೇರಿಕನ್ ಮೂಲದ ವಿದ್ಯಾರ್ಥಿಗಳು ಸಾವನ್ನಪ್ಪಿರುವ ಘಟನೆ ಜಾರ್ಜಿಯಾ ದೇಶದ ಅಲ್ಫರೆಟ್ಟಾದಲ್ಲಿ ನಡೆದಿರುವುದು ವರದಿಯಾಗಿದೆ.
ಘಟನೆಯಲ್ಲಿ ಮೂವರು ಭಾರತೀಯ-ಅಮೆರಿಕನ್ ವಿದ್ಯಾರ್ಥಿಗಳು ಸಾವನ್ನಪ್ಪಿದ್ದು, ಇಬ್ಬರು ಗಾಯಗೊಂಡಿದ್ದಾರೆ. ಅವರೆಲ್ಲರೂ 18 ವರ್ಷ ವಯಸ್ಸಿನವರಾಗಿದ್ದು, ಇಬ್ಬರು ಯುವತಿಯರು ಹಾಗೂ ಒಬ್ಬ ಯುವಕ ಮೃತಪಟ್ಟಿದ್ದಾನೆ.
ಮೃತ ವಿದ್ಯಾರ್ಥಿಗಳನ್ನು ಆರ್ಯನ್ ಜೋಷಿ, ಶ್ರೀಯಾ ಅವಸರಲಾ ,ಅನ್ವಿ ಶರ್ಮಾ ಎಂದು ಗುರುತಿಸಲಾಗಿದೆ.
ರಿತ್ವಾಕ್ ಸೋಮೆಪಲ್ಲಿ ,ಮೊಹಮ್ಮದ್ ಲಿಯಾಕತ್ ಗಾಯಗೊಂಡ ವಿದ್ಯಾರ್ಥಿಗಳು.
ಐದು ಭಾರತೀಯ-ಅಮೇರಿಕನ್ ವಿದ್ಯಾರ್ಥಿಗಳು ಆಲ್ಫರೆಟ್ಟಾ ಹೈಸ್ಕೂಲ್ ಮತ್ತು ಜಾರ್ಜಿಯಾ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಮಾಡುತ್ತಿದ್ದರು.
ವೇಗದ ಚಾಲನೆಯೇ ಕಾರು ಅಪಘಾತಕ್ಕೆ ಕಾರಣವೆಂದು ಪ್ರಾಥಮಿಕ ತನಿಖೆಯಲ್ಲಿ ಆಲ್ಫರೆಟ್ಟಾ ಪೊಲೀಸರು ಹೇಳಿದ್ದಾರೆ. ಆದರೆ ಅಪಘಾತದ ಹಿಂದಿನ ನೈಜ ಕಾರಣವನ್ನು ಪತ್ತೆ ಹಚ್ಚಲು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಚಾಲಕನ ನಿಯಂತ್ರಣ ತಪ್ಪಿದ ಪರಿಣಾಮ ಕಾರು ಪಲ್ಟಿಯಾಗಿದೆ. ಇದರಿಂದ ಆರ್ಯನ್ ಜೋಶಿ ಮತ್ತು ಶ್ರೀಯಾ ಅವಸರಲಾ ಸ್ಥಳದಲ್ಲೇ ಸಾವನ್ನಪ್ಪಿದರೆ, ಅನ್ವಿ ಶರ್ಮಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.
ಜಾರ್ಜಿಯಾದ ಆಲ್ಫರೆಟ್ಟಾದಲ್ಲಿನ ಮ್ಯಾಕ್ಸ್‌ವೆಲ್ ರಸ್ತೆಯ ವೆಸ್ಟ್‌ಸೈಡ್ ಪಾರ್ಕ್‌ವೇಯಲ್ಲಿ ಮೇ 14 ರಂದು ಅಪಘಾತ ಸಂಭವಿಸಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pakistan; ಶಿಯಾ ಮುಸ್ಲಿಮರನ್ನು ಗುರಿಯಾಗಿರಿಸಿ ಗುಂಡಿನ ದಾಳಿ: ಕನಿಷ್ಠ 38 ಬ*ಲಿ
Netanyahu ವಿರುದ್ಧ ಅಂತಾರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯದಿಂದ ಬಂಧನ ವಾರಂಟ್
Russia ದಿಂದ ಉಕ್ರೇನ್ ಮೇಲೆ ICBM ದಾಳಿ; ನ್ಯೂಕ್ಲಿಯರ್ ದಾಳಿ ಉದ್ವಿಗ್ನತೆ ಹೆಚ್ಚಳ
Chrome Browser: ಗೂಗಲ್ ಸರ್ಚ್ ಎಂಜಿನ್ ಕ್ರೋಮ್ ಮಾರಾಟ?
ವಾಯುವ್ಯ ಅಮೆರಿಕಕ್ಕೆ ಅಪ್ಪಳಿಸಿದ ಬಾಂಬ್ ಸೈಕ್ಲೋನ್, 6 ಲಕ್ಷ ಮನೆಗಳಿಗೆ ವಿದ್ಯುತ್ ಕಡಿತ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.