US ;ಟೆಕ್ಸಾಸ್ ನಲ್ಲಿ ಭೀಕರ ಅಪಘಾತದಲ್ಲಿ ಭಾರತೀಯ ಮೂಲದ ಮೂವರ ದುರ್ಮರಣ
ಒಂದೇ ಕುಟುಂಬದ ಮೂವರು, ಬದುಕುಳಿದ ಪುತ್ರ
Team Udayavani, Aug 18, 2024, 6:30 PM IST
ಟೆಕ್ಸಾಸ್ (ಯುಎಸ್ ): ಟೆಕ್ಸಾಸ್ನಲ್ಲಿ ಸಂಭವಿಸಿದ ಭೀಕರ ಕಾರು ಅಪಘಾತದಲ್ಲಿ ಭಾರತೀಯ ಮೂಲದ ಕುಟುಂಬದ ಮೂವರು ಸೇರಿದಂತೆ ಐವರು ಸಾವನ್ನಪ್ಪಿದ್ದಾರೆ.
ಹೃದಯ ವಿದ್ರಾವಕ ದುರಂತ ಬುಧವಾರ(ಆಗಸ್ಟ್ 14) ಬೆಳಗ್ಗೆ 5:45 ಕ್ಕೆ (ಸ್ಥಳೀಯ ಕಾಲಮಾನ) ಲಂಪಾಸಾಸ್ ಕೌಂಟಿಯಲ್ಲಿ ನಡೆದಿದೆ ಎಂದು ಆಸ್ಟಿನ್ ಅಮೆರಿಕನ್-ಸ್ಟೇಟ್ಸ್ಮನ್ ವರದಿ ಮಾಡಿದೆ. ದುರಂತದಲ್ಲಿ ಪ್ರಾಣ ಕಳೆದುಕೊಂಡ ಎಲ್ಲಾ ಐವರನ್ನು ಗುರುತಿಸಲಾಗಿದೆ ಎಂದು ಸಾರ್ವಜನಿಕ ಸುರಕ್ಷತಾ ವಿಭಾಗದ ಅಧಿಕಾರಿಗಳು ತಿಳಿಸಿದ್ದಾರೆ. ಅಪಘಾತದ ತೀವ್ರತೆಗೆ ಕಾರು ಸುಟ್ಟು ಕರಕಲಾಗಿರುವ ಚಿತ್ರಗಳು ಭೀಕರತೆಯನ್ನು ಸಾರುತ್ತಿದೆ.
ಅಪಘಾತದ ಬಳಿಕ ಬೆಂಕಿ ಹೊತ್ತಿ ಉರಿದಿದ್ದು, ಅರವಿಂದ್ ಮಣಿ(45),ಪತ್ನಿ ಪ್ರದೀಪಾ ಅರವಿಂದ್(40) ಮತ್ತು ಪುತ್ರಿ ಆಂಡ್ರಿಲ್ ಅರವಿಂದ್ (17) ಮೃತ ದುರ್ದೈವಿಗಳು. ಡಿಪಿಎಸ್ ವರದಿಯ ಪ್ರಕಾರ, ಮೂವರ ಕುಟುಂಬವು ಟೆಕ್ಸಾಸ್ನ ಲಿಯಾಂಡರ್ ನಗರದಲ್ಲಿ ನೆಲೆಸಿತ್ತು. ಅಪಘಾತದ ಸಮಯದಲ್ಲಿ ಅವರೊಂದಿಗೆ ಕಾರಿನಲ್ಲಿ ಇಲ್ಲದ ಆದಿರ್ಯಾನ್(14) ಬದುಕುಳಿದಿದ್ದು, ಏಕಾಂಗಿಯಾಗಿದ್ದಾನೆ.ಸಂಕಷ್ಟದ ಸಮಯದಲ್ಲಿ ಬಾಲಕನಿಗೆ ಎಲ್ಲ ರೀತಿಯಲ್ಲಿ ನೆರವು ನೀಡುತ್ತೇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chrome Browser: ಗೂಗಲ್ ಸರ್ಚ್ ಎಂಜಿನ್ ಕ್ರೋಮ್ ಮಾರಾಟ?
ವಾಯುವ್ಯ ಅಮೆರಿಕಕ್ಕೆ ಅಪ್ಪಳಿಸಿದ ಬಾಂಬ್ ಸೈಕ್ಲೋನ್, 6 ಲಕ್ಷ ಮನೆಗಳಿಗೆ ವಿದ್ಯುತ್ ಕಡಿತ
Pakistan;ಬಲೂಚಿಸ್ಥಾನದಲ್ಲಿ ಉಗ್ರರ ವಿರುದ್ಧ ಸಮಗ್ರ ಕಾರ್ಯಾಚರಣೆಗೆ ಮುಂದಾದ ಪಾಕ್
Modi; 56 ವರ್ಷಗಳಲ್ಲಿ ಗಯಾನಾಗೆ ಭೇಟಿ ನೀಡಿದ ಮೊದಲ ಭಾರತೀಯ ಪ್ರಧಾನಿ
‘New Phase’ of War: ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುತಿನ್ ಅಣ್ವಸ್ತ್ರ ದಾಳಿ ಎಚ್ಚರಿಕೆ!
MUST WATCH
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ
ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು
ಶರಣಾಗತಿಗೆ ಸೂಚಿಸಿದರೂ ಸ್ಪಂದಿಸಿಲ್ಲ, ಗುಂಡಿನ ಚಕಮಕಿಯಲ್ಲಿ ಮೋಸ್ಟ್ ವಾಂಟೆಡ್ ನಕ್ಸಲ್ ಸಾವು
ಹೊಸ ಸೇರ್ಪಡೆ
Hubli: ಗ್ಯಾರಂಟಿ ಯೋಜನೆ ಹಣ ನಿರ್ಹವಣೆಗೆ ಬಿಪಿಎಲ್ ಕಾರ್ಡ್ ರದ್ದು: ವಿಜಯೇಂದ್ರ ಆರೋಪ
KMC: ನವೀಕೃತ ವೈದ್ಯಕೀಯ ಆಂಕೊಲಾಜಿ ಹೊರರೋಗಿ, ಕಿಮೊಥೆರಪಿ ಡೇ ಕೇರ್ ಕೇಂದ್ರ ಉದ್ಘಾಟನೆ
Renukaswamy Case: ದರ್ಶನ್ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ
Kasabಗೂ ನ್ಯಾಯಯುತ ವಿಚಾರಣೆ ಅವಕಾಶ ಸಿಕ್ಕಿತ್ತು;Yasin ಕೇಸ್ ಬಗ್ಗೆ ಸುಪ್ರೀಂ ಹೇಳಿದ್ದೇನು?
Mudhol: ಕೈಕೊಟ್ಟ ಬೆಳೆ… ಸಾಲಬಾಧೆಗೆ ಹೆದರಿ ನೇಣಿಗೆ ಶರಣಾದ ರೈತ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.