ಪಾಕಿಸ್ಥಾನದ ಕ್ವೆಟ್ಟಾದಲ್ಲಿ ಬಾಂಬ್ ಸ್ಫೋಟ; 4 ಪೊಲೀಸರ ಸಾವು, 11 ಮಂದಿಗೆ ಗಾಯ
Team Udayavani, May 14, 2019, 11:55 AM IST
ಇಸ್ಲಾಮಾಬಾದ್ : ಪಾಕಿಸ್ಥಾನದ ಬಲೂಚಿಸ್ಥಾನದ ಕ್ವೆಟ್ಟಾದ ಉಪ ಪಟ್ಟಣದಲ್ಲಿನ ಮಸೀದಿಯೊಂದರ ಬಳಿ ಅತ್ಯಂತ ಶಕ್ತಿಯುತ ರಿಮೋಟ್ ಬಾಂಬ್ ಸ್ಫೋಟ ನಡೆದ ಪರಿಣಾಮವಾಗಿ ನಾಲ್ವರು ಪೊಲೀಸರು ಮೃತಪಟ್ಟು ಇತರ 11 ಮಂದಿ ಗಾಯಗೊಂಡಿರುವುದಾಗಿ ವರದಿಯಾಗಿದೆ.
ಕಳೆದ ಮೂರು ದಿನಗಳಲ್ಲಿ ನಡೆದಿರುವ ಎರಡನೇ ಬಾಂಬ್ ಬ್ಲಾಸ್ಟ್ ಪ್ರಕರಣ ಇದಾಗಿದೆ. ನಿನ್ನೆ ಸೋಮವಾರ ತಡ ರಾತ್ರಿ ಈ ಸ್ಫೋಟ ನಡೆದಿದೆ. ಮಸೀದಿಯ ಸಮೀಪ ಜನರು ಪ್ರಾರ್ಥನೆ ಸಲುವಾಗಿ ಸೇರಿದ್ದಾಗಲೇ ಈ ಸ್ಫೋಟ ನಡೆದಿದೆ.
ಪ್ರಾರ್ಥನೆ ನಿರತ ಜನರಿಗೆ ಭದ್ರತೆ ನೀಡುವ ಸಲುವಾಗಿ ಪೊಲೀಸ್ ವ್ಯಾನ್ ಒಂದು ಸ್ಥಳಕ್ಕೆ ಬಂದ ಸ್ವಲ್ಪ ಹೊತ್ತಿನಲ್ಲೇ ಬಾಂಬ್ ಸ್ಫೋಟ ನಡೆದಿದೆ. ಪೊಲೀಸ್ ವ್ಯಾನನ್ನೇ ಗುರಿಯಾಗಿರಿಸಿಕೊಂಡು ದಾಳಿ ನಡೆದಿದೆ ಎಂದು ಕ್ವೆಟ್ಟಾ ಡೆಪ್ಯುಟಿ ಇನ್ಸ್‌ಪೆಕ್ಟರ್ ಜನರಲ್ (ಡಿಐಜಿ) ರಜಾಕ್ ಚೀಮಾ ಹೇಳಿದ್ದಾರೆ.
ಬಾಂಬ್ ಸ್ಫೋಟದಲ್ಲಿ 11 ಮಂದಿ ಗಾಯಗೊಂಡಿದ್ದಾರೆ ಎಂದು ಪ್ರಾಂತೀಯ ಗೃಹ ಸಚಿವ ಝಿಯಾಉಲ್ಲಾ ಲಾಂಗೋವ್ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kanakadasa Jayanthi ಇಂದು; ಕನಕದಾಸರ ತಣ್ತೀಗಳು ಹಿಂದೆಂದಿಗಿಂತ ಇಂದಿಗೆ ಹೆಚ್ಚು ಪ್ರಸ್ತುತ
Udupi: ಶ್ರೀಕೃಷ್ಣ ಮಠ: ಗೀತೋತ್ಸವಕ್ಕೆ ಪರ್ತಗಾಳಿ ಶ್ರೀಗಳಿಗೆ ಆಹ್ವಾನ
Udupi: ಸಮಾಜ ರೂಪಿಸುವಲ್ಲಿ ಯಕ್ಷಗಾನ ಪಾತ್ರ ಹಿರಿದು: ಪೇಜಾವರ ಶ್ರೀ
Kaup: ಹೊಸ ಮಾರಿಗುಡಿ ದೇವಸ್ಥಾನ: ಬೆಂಗಳೂರಿನಲ್ಲಿ ವಾಗೀಶ್ವರಿ ಪೂಜೆ, ಲೇಖನ ಸಂಕಲ್ಪ
Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.