4 ವರ್ಷದ ವೇತನವನ್ನು ಬೋನಸ್ ನೀಡಿದ ತೈವಾನ್!
Team Udayavani, Jan 10, 2023, 7:20 AM IST
ತೈಪೆ: ತೈವಾನ್ ಮೂಲದ ಶಿಪ್ಪಿಂಗ್ ಸಂಸ್ಥೆ ಎವರ್‌ಗ್ರೀನ್ ಮೆರೈನ್ ಕಾರ್ಪೋರೇಷನ್ ತನ್ನ ಉದ್ಯೋಗಿಗಳಿಗೆ 4 ವರ್ಷದ ವೇತನವನ್ನು ಬೋನಸ್ ಆಗಿ ನೀಡುವ ಮೂಲಕ ಉದ್ಯೋಗಿಗಳಿಗೆ ಹೊಸವರ್ಷದ ಟ್ರೀಟ್ ನೀಡಿದೆ.
ಕಳೆದ 2 ವರ್ಷದಲ್ಲಿ ಸಂಸ್ಥೆಯ ವಹಿವಾಟು ಹೆಚ್ಚಿದ್ದು, ಅಭೂತಪೂರ್ವ ಬೆಳವಣಿಗೆ ದಾಖಲಿಸಿದೆ. ಪ್ರತಿ ವರ್ಷಾಂತ್ಯದಲ್ಲಿ ಸಂಸ್ಥೆಯ ಬೆಳವಣಿಗೆ, ಕಾರ್ಮಿಕರ ಕಾರ್ಯಕ್ಷಮತೆಯನ್ನು ಪರಿಗಣಿಸಿ ವರ್ಷಾಂತ್ಯದ ಬೋನಸ್ ನೀಡಲಾಗುತ್ತಿದೆ.
ಈ ವರ್ಷವೂ ಬೋನಸ್ ನೀಡಿದ್ದು, ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿರುವ ತನ್ನ ಕೆಲ ಸಿಬ್ಬಂದಿಗೆ 4 ವರ್ಷದ ವೇತನದಷ್ಟು ಮೊತ್ತವನ್ನು ಬೋನಸ್ ನೀಡಿರುವುದಾಗಿ ಸಂಸ್ಥೆ ತಿಳಿಸಿದೆ.
ಕೊರೊನಾ ಕಾಲದಲ್ಲಿ ಹೆಚ್ಚಾಗಿದ್ದ ಗ್ರಾಹಕ ಸರಕು ಸಾಗಣೆ ಬೇಡಿಕೆಯಿಂದ 2022ರಲ್ಲಿ ಕಂಪನಿಯ ಆದಾಯ 1.70 ಲಕ್ಷ ಕೋಟಿ ರೂ.ಗೆ ಏರಿದೆ. ಅಂದರೆ 2020ರ ಆದಾಯಕ್ಕಿಂತ 3 ಪಟ್ಟು ಹೆಚ್ಚಳವಾಗಿದೆ. ಈ ಹಿನ್ನೆಲೆ ಬೋನಸ್ ನೀಡಲಾಗಿದೆ ಎಂದು ಸಂಸ್ಥೆ ಮುಖ್ಯಸ್ಥರು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Prime Minister Modi; ಗಯಾನಾ, ಡೊಮಿನಿಕಾ ಗೌರವ ಪ್ರದಾನ
Pakistan; ಶಿಯಾ ಮುಸ್ಲಿಮರನ್ನು ಗುರಿಯಾಗಿರಿಸಿ ಗುಂಡಿನ ದಾಳಿ: ಕನಿಷ್ಠ 50 ಬ*ಲಿ
Netanyahu ವಿರುದ್ಧ ಅಂತಾರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯದಿಂದ ಬಂಧನ ವಾರಂಟ್
Russia ದಿಂದ ಉಕ್ರೇನ್ ಮೇಲೆ ICBM ದಾಳಿ; ನ್ಯೂಕ್ಲಿಯರ್ ದಾಳಿ ಉದ್ವಿಗ್ನತೆ ಹೆಚ್ಚಳ
Chrome Browser: ಗೂಗಲ್ ಸರ್ಚ್ ಎಂಜಿನ್ ಕ್ರೋಮ್ ಮಾರಾಟ?
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.