ಇರಾನ್ – ಇರಾಕ್ ಗಡಿಯಲ್ಲಿ ಪ್ರಬಲ ಭೂಕಂಪನಕ್ಕೆ 400 ಸಾವು
Team Udayavani, Nov 14, 2017, 6:10 AM IST
ಟೆಹರಾನ್: ಇರಾನ್ ಮತ್ತು ಇರಾಕ್ ಗಡಿ ಭಾಗದಲ್ಲಿ ಭಾನುವಾರ ರಾತ್ರಿ ಭೀಕರ ಭೂಕಂಪ ಸಂಭವಿಸಿದ್ದು, 400ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಎರಡೂ ದೇಶಗಳಲ್ಲಿ ಸುಮಾರು 4 ಸಾವಿರ ಜನರು ಗಾಯಗೊಂಡಿದ್ದಾರೆ. ಭೂಕಂಪದ ತೀವ್ರತೆಯು ರಿಕ್ಟರ್ ಮಾಪಕದಲ್ಲಿ 7.3 ರಷ್ಟಿತ್ತು. 70 ಸಾವಿರಕ್ಕೂ ಹೆಚ್ಚು ಜನರು ನಿರಾಶ್ರಿತರಾಗಿದ್ದಾರೆ.
ಇರಾನ್‌ನ ಕೆರ್ಮನ್‌ಷಾ ಹಾಗೂ ಇರಾಕ್‌ನ ಕುರ್ದಿ ಪ್ರಾಂತ್ಯದಲ್ಲಿ ಭೂಕಂಪ ಸಂಭವಿಸಿದೆ. ಗುಡ್ಡಗಾಡು ಪ್ರದೇಶ ವಾಗಿರುವ ಈ ಪ್ರಾಂತ್ಯದಲ್ಲಿರುವ ಜನರು ಭೂಮಿ ಕಂಪಿಸುತ್ತಿ ದ್ದಂತೆಯೇ ಜನರು ಮನೆಯಿಂದ ಹೊರಗೆ ಓಡಿ ಬಂದಿದ್ದಾರೆ. ಇರಾನ್‌ನ ಸಾಮಾಜಿಕ ಜಾಲತಾಣಗಳಲ್ಲಿ ಜನರು ಮನೆ ಯಿಂದ ಓಡಿಬರುತ್ತಿರುವ ವೀಡಿಯೋಗಳು ಹರಿದಾಡುತ್ತಿವೆ. ಸುಮಾರು 31 ಕಿ.ಮೀ ವ್ಯಾಪ್ತಿಯಲ್ಲಿ ಭೂಕಂಪ ಸಂಭವಿಸಿದೆ ಎಂದು ಅಮೆರಿಕದ ಜಿಯೋಲಾ ಜಿಕಲ್ ಸರ್ವೆ ವಿಭಾಗ ತಿಳಿಸಿದೆ. ಭೂಕಂಪದ ಕೇಂದ್ರ ಬಿಂದು 23.2 ಕಿ.ಮೀ ಆಳದಲ್ಲಿದೆ. ಮುಂದಿನ ದಿನಗಳಲ್ಲಿ 100ಕ್ಕೂ ಹೆಚ್ಚು ಬಾರಿ ಸಣ್ಣ ಪ್ರಮಾಣದ ಭೂಕಂಪ ಸಂಭವಿಸುವ ಸಾಧ್ಯತೆಯಿದೆ. ಕೆರ್ಮನ್‌ಷಾ ಪ್ರಾಂತ್ಯದಲ್ಲಿನ ಸರ್ಪೋಲ್ ಎ ಜಹಾಬ್ ಪಟ್ಟಣದಲ್ಲಿ ಭಾರಿ ಹಾನಿ ಉಂಟಾಗಿದೆ ಎಂದು ಹೇಳಲಾಗಿದೆ. ದೂರವಾಣಿ ಹಾಗೂ ಮೊಬೈಲ್ ಸಂಪರ್ಕ ಕಡಿತಗೊಂಡಿದ್ದು, ನೀರು ಪೂರೈಕೆಯಲ್ಲೂ ವ್ಯತ್ಯಯ ಉಂಟಾಗಿದೆ.
ಇರಾನ್ ಅಧ್ಯಕ್ಷ ಅಯಾತೊಲ್ಲಾ ಅಲಿ ಖೊಮೇನಿ ದುರಂತಕ್ಕೆ ವಿಷಾದ ವ್ಯಕ್ತಪಡಿಸಿದ್ದು, ರಕ್ಷಣಾ ಕಾರ್ಯಾಚರಣೆಗೆ ಸೇನಾ ಪಡೆಗಳನ್ನು ಕಳುಹಿಸಿದ್ದಾರೆ. ಸಂತ್ರಸ್ತರಿಗೆ ನೆರವಾಗುವಂತೆ ಎಲ್ಲ ಅಧಿಕಾರಿಗಳಿಗೂ ಸೂಚಿಸಿದ್ದಾರೆ. ಈ ಭಾಗದ ಸುಮಾರು 14 ಜಿಲ್ಲೆಗಳು ಭೂಕಂಪದಿಂದ ಬಾಧಿಸಲ್ಪಟ್ಟಿದೆ. ಶಾಲಾ ಕಾಲೇಜುಗಳಿಗೆ ರಜೆ ನೀಡಲಾಗಿದೆ. ಇನ್ನೊಂದೆಡೆ ಇರಾಕ್‌ನಲ್ಲಿ ಅತಿ ಹೆಚ್ಚು ಹಾನಿ ಉಂಟಾಗಿದ್ದು ದರ್ಬಂದಿಖಾನ್ ಪ್ರದೇಶದಲ್ಲಿ. ಇದು ಕುರ್ದಿಸ್ತಾನ್ ಪ್ರಾಂತ್ಯಕ್ಕೊಳಪಟ್ಟಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Wrong Spelling: ಅಪಹರಣದ ಪತ್ರದಲ್ಲಿ ಅಕ್ಷರ ತಪ್ಪು ಬರೆದು ಸಿಕ್ಕಿಬಿದ್ದ ಭೂಪ!
Hubballi: ಸಂಪೂರ್ಣ ಬಂದ್… ರಸ್ತೆಗಿಳಿದ ವಾಹನಗಳ ಚಕ್ರದ ಗಾಳಿ ತೆಗೆದು ಪ್ರತಿಭಟನೆ
ಚಂದ್ರಯಾನ, ಗಗನಯಾನ: ಇಸ್ರೋದ ಮಹತ್ವದ ಪ್ಲಾನ್: ವಿ.ನಾರಾಯಣನ್
Los Angeles wildfires: ಕ್ಯಾಲಿಫೋರ್ನಿಯಾದಲ್ಲಿ ಕಾಳ್ಗಿಚ್ಚು… ಐವರು ಸಾವು
Naxal Activity Calm: ಪಶ್ಚಿಮ ಘಟ್ಟದ ಕಾನನದಲ್ಲಿ ನಕ್ಸಲ್ ನಿಶ್ಶಬ್ದ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.