ನ್ಯೂಜಿಲ್ಯಾಂಡ್ ಉಗ್ರ ದಾಳಿಯಲ್ಲಿ ಐವರು ಭಾರತೀಯರು ಸಾವು
Team Udayavani, Mar 17, 2019, 5:25 AM IST
ಕ್ರೈಸ್ಟ್ ಚರ್ಚ್: ನ್ಯೂಜಿಲ್ಯಾಂಡಿನ ಕ್ರೈಸ್ಟ್ ಚರ್ಚ್ ನ ಎರಡು ಮಸೀದಿಗಳ ಮೇಲೆ ಶುಕ್ರವಾರ ನಡೆದ ಗುಂಡಿನ ದಾಳಿಯಲ್ಲಿ ಮೃತಪಟ್ಟವರ ಸಂಖ್ಯೆ 50ಕ್ಕೇರಿದ್ದು, ಐವರು ಭಾರತೀಯರು ಮೃತಪಟ್ಟಿದ್ದಾರೆ.
ನ್ಯೂಜಿಲ್ಯಾಂಡ್ ನ ಭಾರತಿಯ ಹೈ ಕಮಿಷನ್ ಈ ಬಗ್ಗೆ ರವಿವಾರ ಮಾಹಿತಿ ನೀಡಿದ್ದು, ದಾಳಿಯ ವೇಳೆಗೆ ನಾಪತ್ತೆಯಾಗಿದ್ದ ಮೂವರು ಗುಜರಾತ್ ಮೂಲದವರು ಸೇರಿ ಐವರು ಭಾರತೀಯರು ಮೃತಪಟ್ಟಿರುವುದಾಗಿ ಹೇಳಿದೆ. ಇವರೊಂದಿಗೆ ಇಬ್ಬರು ಭಾರತೀಯ ಪ್ರಜೆಗಳು ಮತ್ತು ಇಬ್ಬರು ಭಾರತೀಯ ಮೂಲದವರು ಈ ದಾಳಿಯಲ್ಲಿ ಗಾಯಗೊಂಡಿದ್ದಾರೆ.
ಮೃತಪಟ್ಟ ಭಾರತೀಯರ ಹೆಸರನ್ನು ಇಲಾಖೆ ಬಿಡುಗಡೆ ಮಾಡಿದೆ. ಮೆಹಬೂಬ್ ಖೋಖರ್, ರಮೀಜ್ ವೋರಾ, ಆರಿಫ್ ವೋರಾ, ಆನ್ಸಿ ಆಲಿಬಾವ ಮತ್ತು ಒಜೈರ್ ಖಾದಿರ್ ಎಂದು ಗುರಿತಿಸಲಾಗಿದೆ.
25 ವರ್ಷದ ಒಜೈರ್ ಖಾದಿರ್ ಹೈದರಾಬಾದ್ ಮೂಲದವರಾಗಿದ್ದು, ಆವಿಯೇಶನ್ ವಿಧ್ಯಾರ್ಥಿಯಾಗಿದ್ದರು. ಆನ್ಸಿ ಆಲಿಬಾವ ( 25 ವರ್ಷ) ಕೇರಳ ಮೂಲದವರಾಗಿದ್ದಾರೆ. ರಮೀಜ್ ವೋರಾ ಮತ್ತು ಅವರ ತಂದೆ ಆರೀಫ್ ವೋರಾ ಕೂಡಾ ಈ ದಾಳಿಯಲ್ಲಿ ಮೃತರಾಗಿದ್ದು ಇವರು ವಡೋದರಾ ಮೂಲದವರಾಗಿದ್ದಾರೆ. 63 ವರ್ಷದ ಮೆಹಬೂಬ್ ಖೋಖರ್ ಅಹಮದಾಬಾದ್ ಮೂಲದವರಾಗಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Pritish Nandy: ಖ್ಯಾತ ಕವಿ, ಚಲನಚಿತ್ರ ನಿರ್ಮಾಪಕ ಪ್ರಿತೀಶ್ ನಂದಿ ನಿಧನ
Wrong Spelling: ಅಪಹರಣದ ಪತ್ರದಲ್ಲಿ ಅಕ್ಷರ ತಪ್ಪು ಬರೆದು ಸಿಕ್ಕಿಬಿದ್ದ ಭೂಪ!
Hubballi: ಸಂಪೂರ್ಣ ಬಂದ್… ರಸ್ತೆಗಿಳಿದ ವಾಹನಗಳ ಚಕ್ರದ ಗಾಳಿ ತೆಗೆದು ಪ್ರತಿಭಟನೆ
ಚಂದ್ರಯಾನ, ಗಗನಯಾನ: ಇಸ್ರೋದ ಮಹತ್ವದ ಪ್ಲಾನ್: ವಿ.ನಾರಾಯಣನ್
Los Angeles wildfires: ಕ್ಯಾಲಿಫೋರ್ನಿಯಾದಲ್ಲಿ ಕಾಳ್ಗಿಚ್ಚು… ಐವರು ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.