Baltimore bridge collapse; ಆರು ಕಾರ್ಮಿಕರು ನಾಪತ್ತೆ: ಪತ್ತೆ ಕಾರ್ಯ ಸ್ಥಗಿತ
22 ಭಾರತೀಯ ಸಿಬಂದಿಯೂ ಇದ್ದರು..
Team Udayavani, Mar 27, 2024, 8:05 AM IST
ವಾಷಿಂಗ್ಟನ್ : ಅಮೆರಿಕದ ಬಾಲ್ಟಿಮೋರ್ ನಲ್ಲಿ ಹಡಗು ಅಪ್ಪಳಿಸಿ 2.57 ಕಿಮೀ ಉದ್ದದ ಫ್ರಾನ್ಸಿಸ್ ಸ್ಕಾಟ್ ಕೀ ಸೇತುವೆಯ ಕುಸಿತದ ನಂತರ ಕಾಣೆಯಾದ ಆರು ನಿರ್ಮಾಣ ಕಾರ್ಮಿಕರು ಸಾವನ್ನಪ್ಪಿದ್ದಾರೆ ಎಂದು ಭಾವಿಸಲಾಗಿದೆ ಎಂದು ಯುಎಸ್ ಅಧಿಕಾರಿಗಳು ಹೇಳಿದ್ದಾರೆ. ಇದೆ ವೇಳೆ ನಾಪತ್ತೆಯಾದ ಕಾರ್ಮಿಕರ ಪತ್ತೆ ಕಾರ್ಯವನ್ನು ಬುಧವಾರ ಸಂಜೆಯವರೆಗೆ ಸ್ಥಗಿತಗೊಳಿಸಲಾಗಿದೆ.
ಮಾಧ್ಯಮ ವರದಿಗಳ ಪ್ರಕಾರ, ಕುಸಿತದ ನಂತರ ಎಂಟು ಜನರು ಪಟಾಪ್ಸ್ಕೋ ನದಿಗೆ ಬಿದ್ದಿದ್ದಾರೆ, ಆದರೆ ನಿಜವಾದ ಸಂಖ್ಯೆಯನ್ನು ಇನ್ನೂ ಕಂಡುಹಿಡಿಯಲಾಗಿಲ್ಲ. ಈವರೆಗೆ ಇಬ್ಬರನ್ನು ರಕ್ಷಿಸಲಾಗಿದೆ.
ನ್ಯೂಯಾರ್ಕ್ ಮತ್ತು ವಾಷಿಂಗ್ಟನ್ ನಡುವಿನ ಮುಖ್ಯ ಮಾರ್ಗವಾಗಿದ್ದ ಸೇತುವೆಗೆ ಮಂಗಳವಾರ ಮುಂಜಾನೆ 1.30 ರ ಸುಮಾರಿಗೆ (ಯುಎಸ್ ಸ್ಥಳೀಯ ಕಾಲಮಾನ) 22 ಭಾರತೀಯ ಸಿಬಂದಿಯೂ ಇದ್ದ ಡಾಲಿ ಎಂಬ ಕಂಟೈನರ್ ಹಡಗು ಅಪ್ಪಳಿಸಿದ ನಂತರ ಸೇತುವೆ ಕುಸಿದಿತ್ತು.
ಕಂಟೈನರ್ ಹಡಗಿನಲ್ಲಿದ್ದ ಇಬ್ಬರು ಪೈಲಟ್‌ಗಳು ಸೇರಿದಂತೆ ಭಾರತೀಯ ಸಿಬಂದಿ ಸುರಕ್ಷಿತವಾಗಿದ್ದಾರೆ. ಅಪ್ಪಳಿಸುವ ಮುನ್ನ ಅವರು ‘ವಿದ್ಯುತ್ ಸಮಸ್ಯೆ’ ಕುರಿತು ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು ಎಂದು ಹೇಳಲಾಗಿದೆ. ಗ್ರೇಸ್ ಓಷನ್ ಪ್ರೈವೇಟ್ ಲಿಮಿಟೆಡ್ ಸಿಂಗಾಪುರದ ಧ್ವಜದ ನೋಂದಾಯಿತ ಹಡಗಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Prime Minister Modi; ಗಯಾನಾ, ಡೊಮಿನಿಕಾ ಗೌರವ ಪ್ರದಾನ
Pakistan; ಶಿಯಾ ಮುಸ್ಲಿಮರನ್ನು ಗುರಿಯಾಗಿರಿಸಿ ಗುಂಡಿನ ದಾಳಿ: ಕನಿಷ್ಠ 50 ಬ*ಲಿ
Netanyahu ವಿರುದ್ಧ ಅಂತಾರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯದಿಂದ ಬಂಧನ ವಾರಂಟ್
Russia ದಿಂದ ಉಕ್ರೇನ್ ಮೇಲೆ ICBM ದಾಳಿ; ನ್ಯೂಕ್ಲಿಯರ್ ದಾಳಿ ಉದ್ವಿಗ್ನತೆ ಹೆಚ್ಚಳ
Chrome Browser: ಗೂಗಲ್ ಸರ್ಚ್ ಎಂಜಿನ್ ಕ್ರೋಮ್ ಮಾರಾಟ?
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.