ಪ್ಲೊಟೋಗೆ ಮಿಡಿದ ಹೃದಯ
Team Udayavani, Feb 19, 2018, 8:15 AM IST
ವಾಷಿಂಗ್ಟನ್: ಸೌರವ್ಯವಸ್ಥೆಯಲ್ಲಿ 9 ಗ್ರಹಗಳಿದ್ದು, ಪ್ಲೊಟೋ ಕೊನೆಯ ಗ್ರಹ ಎಂದು ನಾವು ಪಠ್ಯದಲ್ಲಿ ಓದುತ್ತಿದ್ದೆವು. ಆದರೆ ಪ್ಲೊಟೋ ಗ್ರಹವೇ ಅಲ್ಲ ಎಂದು ವಿಜ್ಞಾನಿಗಳು ಸಾಬೀತುಗೊಳಿಸಿದ ಬಳಿಕ 9 ಗ್ರಹಗಳ ಪಟ್ಟಿಯಿಂದ ಅದನ್ನು ಕೈಬಿಡಲಾಯಿತು. ಈ ಬೆಳವಣಿಗೆಯು ಐರ್ಲೆಂಡ್‌ನ 6 ವರ್ಷದ ಪುಟ್ಟ ಬಾಲಕಿಯನ್ನು ವಿಚಲಿತಗೊಳಿಸಿದೆ. ಬಾಲಕಿ ಕಾರ ತನ್ನ ಶಿಕ್ಷಕಿಯ ಸಹಾಯ ಪಡೆದು ಪುನಃ ಪ್ಲೊಟೋವನ್ನು ಗ್ರಹವನ್ನಾಗಿ ಪರಿಗಣಿಸಲು ಅಮೆರಿಕ ಬಾಹ್ಯಾಕಾಶ ಸಂಸ್ಥೆ ನಾಸಾಗೆ ಪತ್ರ ಬರೆದಿದ್ದಾಳೆ.
“ನಾನೊಂದು ಹಾಡು ಕೇಳಿದೆ. ಆ ಹಾಡು ಪ್ಲೊಟೋವನ್ನು ಮತ್ತೆ ತನ್ನಿ ಎಂಬಲ್ಲಿಗೆ ಮುಗಿಯುತ್ತದೆ. ಹಾಗೆ ಆಗುವುದನ್ನು ನೋಡಲು ನಾನು ಉತ್ಸುಕಳಾಗಿದ್ದೇನೆ’ ಎಂದು ಆಕೆ ಪತ್ರದಲ್ಲಿ ಬರೆದಿದ್ದಾಳೆ. ನಾನು ನೋಡಿದ ವಿಡಿಯೋವೊಂದರಲ್ಲೂ ಪ್ಲೊಟೋ ಎಲ್ಲಾ ಗ್ರಹಗಳಿಗಿಂತ ಕಟ್ಟ ಕಡೆಯಲ್ಲಿ ಇದೆ. ಮತ್ತೂಂದು ವಿಡಿಯೋದಲ್ಲಿ ಅದನ್ನು ತೆಗೆದುಹಾಕಲಾಗಿದೆ. ಇದು ನಿಜಕ್ಕೂ ಅನ್ಯಾಯ. ಪ್ಲೊಟೋ ವನ್ನು ಬೇರ್ಪಡಿಸಿ ಕಸದ ಬುಟ್ಟಿಗೆ ಹಾಕಿದ್ದು ಸರಿಯಲ್ಲ. ಅದನ್ನು ಮತ್ತೆ ಮುಖ್ಯ ಗ್ರಹಗಳ ಗುಂಪಿಗೆ ಸೇರಿಸಿ ಎಂದು ಕೋರಿಕೊಂಡಿದ್ದಾಳೆ ಕಾರ. ಬಾಲಕಿಯ ಪತ್ರಕ್ಕೆ ನಾಸಾ ವಿಜ್ಞಾನಿಗಳು ಪ್ರತಿಕ್ರಿಯಿಸಿದ್ದು, “ಪ್ಲೊಟೋಗೂ ಒಂದು ಹೃದಯವಿದೆ ಎಂದು ನಮಗ್ಯಾರಿಗೂ ಗೊತ್ತಿರಲಿಲ್ಲ. ಅದೊಂದು ವಿಸ್ಮಯಕಾರಿ ಜಗತ್ತು. ಪ್ಲೊಟೋ ಕುಳ್ಳ ಗ್ರಹ ಹೌದೋ, ಅಲ್ಲವೋ ಎಂಬುದಕ್ಕಿಂತಲೂ ಅದೊಂದು ಸುಂದರ ತಾಣವಂತೂ ಹೌದು. ಅದರ ಬಗ್ಗೆ ಹೆಚ್ಚಿನ ಅಧ್ಯಯನ ನಡೆಸುತ್ತೇವೆ. ನೀನು ಚೆನ್ನಾಗಿ ಕಲಿತರೆ ಮುಂದೊಂದು ದಿನ ನಿನ್ನನ್ನೂ ನಾಸಾದಲ್ಲಿ ನೋಡಬಹುದು’ ಎಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Viral Video: ಖ್ಯಾತ ನ್ಯೂಸ್ ಆ್ಯಂಕರ್ ನ ಖಾಸಗಿ ವಿಡಿಯೋ ಲೀಕ್..? ಸಿಕ್ಕಾಪಟ್ಟೆ ವೈರಲ್
Donald Trump: ನೀವು ತೆರಿಗೆ ಹಾಕಿದರೆ ನಾವೂ ಹಾಕುತ್ತೇನೆ… ಭಾರತಕ್ಕೆ ಟ್ರಂಪ್ ಎಚ್ಚರಿಕೆ
Earthquake…! ರೋಡ್ ರೋಲರ್ ಶಬ್ದವನ್ನು ಭೂಕಂಪ ಎಂದು ಗ್ರಹಿಸಿ ಕಿಟಕಿಯಿಂದ ಜಿಗಿದರು
H-1B visa: ಎಚ್1ಬಿ ವೀಸಾ ನಿಯಮ ಸಡಿಲಿಕೆ… ಭಾರತೀಯ ಟೆಕ್ಕಿಗಳಿಗೆ ಸಂತಸ
Russia; ಅಭಿವೃದ್ಧಿಪಡಿಸಲಾದ ಕ್ಯಾನ್ಸರ್ ಲಸಿಕೆ ಉಚಿತವಾಗಿ ಲಭ್ಯ
MUST WATCH
ಹೊಸ ಸೇರ್ಪಡೆ
Chikkamagaluru: ಎಮ್ಮೆ ಹುಡುಕಲು ಹೋದವರ ಮೇಲೆ ಕಾಡಾನೆ ದಾಳಿ; ಮಗ ಪರಾರಿ, ತಂದೆ ಸಾವು
Karkala: ಈ ರಸ್ತೆಯಲ್ಲಿ ಬಸ್ ತಂಗುದಾಣಗಳೇ ಇಲ್ಲ!
UP: ಫಸ್ಟ್ ನೈಟ್ ದಿನ ಬಿಯರ್, ಗಾಂಜಾ ತಂದು ಕೊಡಲು ಬೇಡಿಕೆ ಇಟ್ಟ ಪತ್ನಿ; ಪತಿ ಶಾಕ್.!
Belma: ಕುಸಿತ ಭೀತಿಯಲ್ಲಿರುವ ಮನೆ; ಕಾಂಕ್ರೀಟ್ ತಡೆಗೋಡೆಗೆ ಪಿಡಬ್ಲ್ಯುಡಿ ಪ್ರಸ್ತಾವ
Bidar: ಕಾರಂಜಾ ಸಂತ್ರಸ್ತರ ಸಮಸ್ಯೆ ಅಧ್ಯಯನಕ್ಕೆ ತಾಂತ್ರಿಕ ಸಮಿತಿ ರಚನೆ: ಸಿಎಂ ಸಿದ್ದರಾಮಯ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.