ಇಲ್ಲಿ ಮರಳು ಕದ್ದಿದ್ದಕ್ಕೆ 6 ವರ್ಷ ಜೈಲೂಟ!
ಇಟೆಲಿಯ ಸಾರ್ಡಿನಿಯಾದ ಚಿಯಾ ಬೀಚ್‌ನಲ್ಲಿ ಮರಳು ಕದ್ದರೆ ಹುಷಾರ್
Team Udayavani, Aug 20, 2019, 8:20 PM IST
ಲಂಡನ್: ನಮ್ಮಲ್ಲಾದರೆ ಅಷ್ಟೇನಾ.. ಹೋಗಲಿ ಬಿಡಿ, ನಾಲ್ಕು ಲಾರಿಯಾದರೂ ತೆಗೆದುಕೊಂಡು ಹೋಗಲಿ ಎಂದು ಬಿಟ್ಟಿರುತ್ತಿದ್ದರು. ಆದರೆ ಅಲ್ಲಿ ನೋ.. ನೆವರ್! ಪರಿಣಾಮ ದಂಪತಿ ಇನ್ನು 6 ವರ್ಷ ಜೈಲೂಟ ಮಾಡುವಂತಾಗಿದೆ. ಇಷ್ಟಕ್ಕೂ ಅವರು ಮಾಡಿದ ತಪ್ಪು ಎಂದರೆ ಸಮುದ್ರ ತೀರದಿಂದ ಮರಳು ಕದ್ದಿದ್ದು!
ಇಟೆಲಿಯ ಸಾರ್ಡಿನಿಯಾ ಎಂಬಲ್ಲಿನ ಚಿಯಾ ಬೀಚ್‌ನಿಂದ ಫ್ರೆಂಚ್ ದಂಪತಿ 14 ಪ್ಲಾಸ್ಟಿಕ್ ಬಾಟಲಿಗಳಲ್ಲಿ ಹೊಯಿಗೆ ತುಂಬಿಸಿ ಕೊಂಡೊಯ್ದಿದ್ದರಂತೆ. ಒಟ್ಟು 40 ಕೆ.ಜಿ.ಯಷ್ಟು ಮರಳನ್ನು ಅವರು ಕಾರಲ್ಲಿ ಕೊಂಡೊಯ್ದಿದ್ದು, ಹಡಗು ಹತ್ತಲು ಹೊರಟಿದ್ದಾರೆ. ಈ ವೇಳೆ ಅವರು ರೆಡ್ ಹ್ಯಾಂಡ್ ಆಗಿ ಸಿಕ್ಕಿದ್ದಾಗಿ ಪೊಲೀಸರು ಹೇಳಿದ್ದಾರೆ. ದಂಪತಿಗೆ ಇಲ್ಲಿಂದ ಮರಳು ಕೊಂಡೊಯ್ಯುವುದು ಅಪರಾಧ ಎಂದು ಗೊತ್ತಿರಲಿಲ್ಲವಂತೆ. ಆದರೂ ಅವರಿಗೆ 6 ವರ್ಷ ಜೈಲೂಟ ಗ್ಯಾರೆಂಟಿ ಎಂದು ಅಲ್ಲಿನ ಅಧಿಕಾರಿಗಳು ಹೇಳಿದ್ದಾರೆ.
ಅಂಥದ್ದೇನಿದೆ ವಿಶೇಷ?
ಸಾರ್ಡಿನಿಯಾದ ಸುತ್ತಮುತ್ತಲಿನ ಮರಳು ಚಿನ್ನಕ್ಕಿಂತ ಹೆಚ್ಚು ಬೆಲೆ ಬಾಳುವಂಥದ್ದು. ಇದರಲ್ಲಿ ಪುಡಿಯಾದ ಹವಳ, ಸಮುದ್ರ ಅವಶೇಷಗಳು, ಪಳೆಯುಳಿಕೆಯ ಅಂಶಗಳಿಂದ ವಿಶಿಷ್ಟವಾಗಿದೆ. ಇದು ತುಸು ಗುಲಾಬಿ ಬಣ್ಣದಲ್ಲಿರುತ್ತದಂತೆ. ಹೆಚ್ಚು ಆಕರ್ಷಕವೂ ಹೌದು. ಇದನ್ನು ವ್ಯಾಪಕ ಪ್ರಮಾಣದಲ್ಲಿ ಕಳ್ಳ ಸಾಗಣೆ ಮಾಡಲಾಗುತ್ತದಂತೆ. ಪ್ರಾಕೃತಿಕವಾಗಿ ಈ ಮರಳು ಅಮೂಲ್ಯವಾದದ್ದು. ಇದರ ಮರಳುಗಾರಿಕೆಯಿಂದ ಪರಿಸರಕ್ಕೆ ಹಾನಿಯಾಗುತ್ತದೆ ಎಂದೂ ಹೇಳಲಾಗಿದೆ. ಆದ್ದರಿಂದ ಮರಳು ಕದಿಯುವ ವಿರುದ್ಧ ಕಠಿನ ಕಾನೂನು ಕ್ರಮವಾಗುತ್ತದೆ. ಸ್ವಲ್ಪ ಮರಳು ಕದ್ದರೂ ಸುಮಾರು 2 ಲಕ್ಷ ರೂ.ಗಳಷ್ಟು ದಂಡವನ್ನೂ ಹಾಕುತ್ತಾರಂತೆ. ಹೀಗೆ ಕದಿಯುವವರೆಲ್ಲ ಪ್ರವಾಸಿಗಳೇ ಆಗಿದ್ದಾರಂತೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್ ರಾಷ್ಟ್ರ?
Marriage: ಕ್ರಿಸ್ಮಸ್‌ಗೆ ಅಮೆಜಾನ್ ಸಿಇಒ ಅದ್ಧೂರಿ ವಿವಾಹ?
Washington: ಅಮೆರಿಕ ಗುಪ್ತಚರ ಸಂಸ್ಥೆಗೆ ತುಳಸಿ ಗಬಾರ್ಡ್ ಮುಖ್ಯಸ್ಥೆ
America: ಬೋಯಿಂಗ್ ಸಂಸ್ಥೆಯ 17,000 ಉದ್ಯೋಗಿಗಳು ಶೀಘ್ರವೇ ವಜಾ
Vivek Ramaswamy: ವಿವೇಕ್‌ಗೆ ಟ್ರಂಪ್ ಸರಕಾರದ ಕಾರ್ಯಕ್ಷಮತೆ ಇಲಾಖೆ ಹೊಣೆ
MUST WATCH
ಹೊಸ ಸೇರ್ಪಡೆ
Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್ ರಾಷ್ಟ್ರ?
India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ
Marriage: ಕ್ರಿಸ್ಮಸ್‌ಗೆ ಅಮೆಜಾನ್ ಸಿಇಒ ಅದ್ಧೂರಿ ವಿವಾಹ?
Washington: ಅಮೆರಿಕ ಗುಪ್ತಚರ ಸಂಸ್ಥೆಗೆ ತುಳಸಿ ಗಬಾರ್ಡ್ ಮುಖ್ಯಸ್ಥೆ
Daily Horoscope: ಉದ್ಯೋಗಾಸಕ್ತರಿಗೆ ಹೊಸ ಅವಕಾಶಗಳು ಗೋಚರ, ಸ್ವರ್ಣೋದ್ಯಮಕ್ಕೆ ಲಾಭ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.