USA 6ನೇ ಭಾರತೀಯ ವ್ಯಕ್ತಿಯ ಸಾವು; ಹೆಚ್ಚುತ್ತಲಿದೆ ಹತ್ಯೆಯ ಭೀತಿ
ರೆಸ್ಟೋರೆಂಟ್‌ನಲ್ಲಿ ಮಾರಣಾಂತಿಕ ಹಲ್ಲೆ, ಹೆಚ್ಚುತ್ತಲಿದೆ ಹತ್ಯೆಯ ಭೀತಿ
Team Udayavani, Feb 11, 2024, 12:37 AM IST
ವಾಷಿಂಗ್ಟನ್: ಅಮೆರಿಕದಲ್ಲಿ ಭಾರತೀಯರ ಮೇಲಿನ ದಾಳಿಗಳು ಆತಂಕ ಹೆಚ್ಚಿಸಿರುವ ನಡುವೆಯೇ ಇದೀಗ ಮತ್ತೂಬ್ಬ ಭಾರತೀಯ ಮೂಲದ ಐಟಿ ಉದ್ಯಮಿ ಮೃತಪಟ್ಟಿರುವುದು ವರದಿಯಾಗಿದೆ. ಇದು ಕಳೆದೆರಡು ತಿಂಗಳಲ್ಲಿ ವರದಿಯಾಗಿರುವ 6ನೇ ಭಾರತೀಯ ವ್ಯಕ್ತಿಯ ಸಾವಿನ ಪ್ರಕರಣವಾಗಿದೆ.
ಮೃತ ವ್ಯಕ್ತಿಯನ್ನು ವಿವೇಕ್ ತನೇಜಾ ಎಂದು ಗುರುತಿಸಲಾಗಿದ್ದು ಈತ ವಾಷಿಂಗ್ಟನ್ ಡಿ.ಸಿ.ಯ ಅಲೆಕ್ಸಾಂಡ್ರಿಯಾದ ನಿವಾಸಿಯಾಗಿದ್ದರು. ಸ್ಥಳೀಯಾಡಳಿತ ಸಂಸ್ಥೆಗಳು ಮತ್ತು ಖಾಸಗಿ ಸಂಸ್ಥೆಗಳಿಗೆ ತಂತ್ರಜ್ಞಾನ ಪರಿಹಾರಗಳನ್ನು ಒದಗಿಸುವ ಡೈನಮೋ ಟೆಕ್ನಾಲಜೀಸ್ ಸಹ ಸಂಸ್ಥಾಪಕರಾಗಿದ್ದರು. ವಿವೇಕ್ ಫೆ.2ರಂದು ರೆಸ್ಟೋರೆಂಟ್ ಒಂದಕ್ಕೆ ತರಳಿದ್ದರು. ಈ ವೇಳೆ ಅಪರಿಚಿತ ವ್ಯಕ್ತಿಯೊಬ್ಬನೊಂದಿಗೆ ಜಗಳವಾಗಿದ್ದು, ಆತ ಮಾರಣಾಂತಿಕ ದಾಳಿ ನಡೆಸಿದ್ದರಿಂದ ವಿವೇಕ್ ಆಸ್ಪತ್ರೆ ದಾಖಲಾಗಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಗುರುವಾರ ಮೃತಪಟ್ಟಿದ್ದಾರೆ. ಪ್ರಕರಣ ಸಂಬಂಧಿಸಿದಂತೆ ಇದು ವರೆಗೆ ಯಾವುದೇ ಬಂಧನವಾಗಿಲ್ಲ.
ಕಳೆದವಾರ ಲಿಥೋನಿಯಾ ಎಂಬಲ್ಲಿ ಹೈದರಾಬಾದ್ ಮೂಲದ ವಿದ್ಯಾರ್ಥಿ ಸಯ್ಯದ್ ಮಜರ್ ಅಲಿ ಮೇಲೆ ನಾಲ್ವರು ದುಷ್ಕರ್ಮಿಗಳು ದಾಳಿ ನಡೆಸಿದ್ದರು.
ವಿವೇಕ್ ಸೈನಿ ಎಂಬ ಭಾರತೀಯ ವಿದ್ಯಾರ್ಥಿಯನ್ನು ನಿವಾಸರಹಿತ ವ್ಯಕ್ತಿಯೊಬ್ಬ ಥಳಿಸಿ ಕೊಂದಿದ್ದ
ನೀಲ್ ಆಚಾರ್ಯ, ಅಕುಲ್ ಬಿ.ಧವನ್, ಶ್ರೇಯಸ್ ರೆಡ್ಡಿ, ಸಮೀರ್ ಕಾಮತ್ ಎಂಬ ಭಾರತೀಯ ಮೂಲದ ವಿದ್ಯಾರ್ಥಿಗಳೂ ವಾರಗಳ ಅಂತರದಲ್ಲಿ ಮೃತಪಟ್ಟಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
MUDA Case: ಸಿಬಿಐ ತನಿಖೆ ಕೋರಿದ್ದ ಅರ್ಜಿ ವಿಚಾರಣೆ ನ.26ಕ್ಕೆ ಮುಂದೂಡಿದ ಹೈಕೋರ್ಟ್
Belagavi: ತಹಶೀಲ್ದಾರ್ ಕೊಠಡಿಯಲ್ಲೇ ಸಿಬ್ಬಂದಿ ನೇಣಿಗೆ ಶರಣು, ಸ್ಥಳದಲ್ಲಿ ಡೆತ್ ನೋಟ್ ಪತ್ತೆ
MUDA Case: ಲೋಕಾಯುಕ್ತ ನೋಟಿಸ್ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಸಿಎಂ
Mangaluru: ಪರಿಶಿಷ್ಟ ಜಾತಿ ಪಟ್ಟಿಗೆ ಮರುಸೇರ್ಪಡೆ ಆಗ್ರಹಿಸಿ ಕುಡುಬಿ ಸಮಾಜದವರಿಂದ ಜಾಥಾ
Canada: ಹಿಂದೂ ದೇಗುಲದ ಮೇಲೆ ದಾಳಿ-ಖಲಿಸ್ತಾನಿಗಳ ವಿರುದ್ಧ ಸಾವಿರಾರು ಭಾರತೀಯರ ಪ್ರತಿಭಟನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.