![Yakshagana-Academy](https://www.udayavani.com/wp-content/uploads/2025/02/Yakshagana-Academy-415x249.jpg)
![Yakshagana-Academy](https://www.udayavani.com/wp-content/uploads/2025/02/Yakshagana-Academy-415x249.jpg)
Team Udayavani, May 7, 2018, 8:25 AM IST
ಕಾಬೂಲ್: ಅಫ್ಘಾನಿಸ್ಥಾನದ ಬಾಘÉನ್ ಪ್ರಾಂತ್ಯದಲ್ಲಿರುವ ವಿದ್ಯುತ್ ಘಟಕದಲ್ಲಿ ಕೆಲಸ ಮಾಡುತ್ತಿದ್ದ ಏಳು ಭಾರತೀಯರು ಮತ್ತು ಒಬ್ಬ ಆಫ್ಗನ್ ನಾಗರಿಕನನ್ನು ಭಾನುವಾರ ಶಸ್ತ್ರ ಸಜ್ಜಿತ ಬಂಡುಕೋರರು ಅಪಹರಿಸಿದ್ದಾರೆ. ಈ ಸಂಬಂಧ ಭಾರತೀಯ ವಿದೇಶಾಂಗ ಸಚಿವಾಲಯವು ಅಫ್ಘಾನಿಸ್ಥಾನ ಸರಕಾರದೊಂದಿಗೆ ಸಂಪರ್ಕದಲ್ಲಿದೆ.
ಅಪಹೃತ ಭಾರತೀಯರು ಇಲ್ಲಿನ ವಿದ್ಯುತ್ ಘಟಕದಲ್ಲಿ ಇಂಜಿನಿಯರುಗಳಾಗಿ ಕೆಲಸ ಮಾಡುತ್ತಿದ್ದರು. ಈವರೆಗೆ ಯಾವುದೇ ಉಗ್ರ ಸಂಘಟನೆ ಈ ಕೃತ್ಯದ ಹೊಣೆ ಹೊತ್ತುಕೊಂಡಿಲ್ಲ. ಆದರೆ ಇದರ ಹಿಂದೆ ತಾಲಿಬಾನ್ ಕೈವಾಡವಿರುವ ಶಂಕೆಯಿದೆ. ಅಪಹೃತರ ಶೋಧ ಕಾರ್ಯ ನಡೆದಿದೆ. ಮೂಲಗಳ ಪ್ರಕಾರ ಅಪಹೃತರನ್ನು ಹತ್ಯೆಗೈದಿಲ್ಲ ಎಂದು ಬಾಘÉನ್ ಪೊಲೀಸ್ ಇಲಾಖೆಯ ವಕ್ತಾರ ಜಬಿ ಉಲ್ಲಾ ಶುಜಾ ಹೇಳಿದ್ದಾರೆ. ಇದೇ ವೇಳೆ, ಸರ್ಕಾರಿ ಉದ್ಯೋಗಿಗಳು ಎಂದು ತಪ್ಪಾಗಿ ಭಾವಿಸಿ ಅಪಹರಿಸಲಾಗಿದೆ ಎಂದು ಉಗ್ರರು ಸ್ಥಳೀಯರಲ್ಲಿ ಹೇಳಿಕೊಂಡಿರುವುದಾಗಿ ಆಫ್ಗನ್ ಮಾಧ್ಯಮಗಳು ವರದಿ ಮಾಡಿವೆ.
ಭಾರತೀಯರು ಕೆಇಸಿ ಇಂಟರ್‌ನ್ಯಾಷನಲ್ ಲಿಮಿಟೆಡ್ ಎಂಬ ಕಂಪೆನಿಯ ಉದ್ಯೋಗಿಗಳಾಗಿದ್ದು, ಪುಲ್ ಎ ಖೊಮ್ರೆ ಎಂಬ ಪ್ರದೇಶದಲ್ಲಿ ಕಂಪೆನಿಯ ಉಪಘಟಕವಿದ್ದುದರಿಂದ, ಅಲ್ಲಿಗೆ ತೆರಳುತ್ತಿರುವಾಗ ಅಪಹರಣ ಮಾಡಲಾಗಿದೆ. ಅಫ್ಘಾನಿಸ್ತಾನದ ವಿದ್ಯುತ್ ವಿತರಣೆ ಕಂಪೆನಿ ಡಾ ಅಫ್ಘಾನಿಸ್ಥಾನ್ ಬ್ರೆಶಾ ಶೆರ್ಕತ್ ಈ ಕೆಇಸಿ ಕಂಪೆನಿಯೊಂದಿಗೆ ವಿದ್ಯುತ್ ಉತ್ಪಾದನೆ ಸಹಕಾರ ಒಪ್ಪಂದ ಹೊಂದಿದೆ. ಈ ಕೆಇಸಿ ಭಾರತ ಮೂಲದ ಕಂಪೆನಿಯಾಗಿದ್ದು, ಇದರ ನಿರ್ದೇಶಕ ಹರ್ಷ್ ಗೋಯೆಂಕಾ ಅವರು ನೌಕರರನ್ನು ರಕ್ಷಿಸುವಂತೆ ಸರಕಾರವನ್ನು ವಿನಂತಿಸಿಕೊಂಡಿದ್ದಾರೆ. ಅಪಹೃತರ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ.
2016ರಲ್ಲಿ 40 ಭಾರತೀಯರನ್ನು ಕಾಬೂಲ್‌ನಲ್ಲಿ ಅಪಹರಿಸಲಾಗಿತ್ತು. 40 ದಿನಗಳ ನಂತರ ಭಾರತದ ಸರಕಾರದ ಮಧ್ಯಸ್ಥಿಕೆಯಿಂದಾಗಿ ಇವರನ್ನು ಬಿಡುಗಡೆ ಮಾಡಲಾಗಿತ್ತು. ಬಡತನ ಹಾಗೂ ನಿರುದ್ಯೋಗದಿಂದಾಗಿ ಸ್ಥಳೀಯರನ್ನು ಅಪಹರಿಸುವುದು ಮತ್ತು ದರೋಡೆ ನಡೆಸುವುದು ಅತ್ಯಂತ ಸಾಮಾನ್ಯ ಕೃತ್ಯವಾಗಿದೆ ಎಂದು ಹೇಳಲಾಗಿದೆ.
ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು
Obama Is Queer: ಮಾಜಿ ಅಧ್ಯಕ್ಷ ಒಬಾಮಾ ಪತ್ನಿ ಮಿಚೆಲ್ ಗಂಡಸು: ಮಸ್ಕ್ ತಂದೆ
Cut Down: ವೆಚ್ಚ ಕಡಿತ: ಅಮೆರಿಕ ಸರಕಾರಿ ಉದ್ಯೋಗಿಗಳೇ ವಜಾ!
Mexico:ಯುರೋಪ್ ನ Most ವಾಂಟೆಡ್ ಕ್ರಿ*ಮಿನಲ್, ಡ್ರ*ಗ್ ಕಿಂಗ್ ಪಿನ್ ಮಾರ್ಕೋ ಹ*ತ್ಯೆ
Bourbon Whiskey: ಅಮೆರಿಕದ ಬೌರ್ಬನ್ ವಿಸ್ಕಿ ಆಮದು ಸುಂಕ ಕಡಿತ ಮಾಡಿದ ಭಾರತ
Udupi: ಮಕ್ಕಳಲ್ಲಿ ತಾಳ್ಮೆ, ಏಕಾಗ್ರತೆ ಬೆಳೆಸಲು ಯಕ್ಷಗಾನ ತರಬೇತಿ ಅವಶ್ಯ: ಯು.ಟಿ. ಖಾದರ್
Sulya: ಪೈಪ್‌ಲೈನ್ ಕಾಮಗಾರಿಯಿಂದ ರಸ್ತೆಗೆ ಹಾನಿ ಬಗ್ಗೆ ಚರ್ಚಿಸಿ ಕ್ರಮ: ಸತೀಶ್ ಜಾರಕಿಹೊಳಿ
Madikeri: ಆರು ಮಂದಿಗೆ ಅರೆಭಾಷೆ ಅಕಾಡೆಮಿ ಗೌರವ ಪ್ರಶಸ್ತಿ ಪ್ರಕಟ; ಫೆ.28ಕ್ಕೆ ಪ್ರದಾನ
Manipal: ಕಡೇ ದಿನವೂ ಉತ್ತಮ ಸ್ಪಂದನೆ; ಹಾಡು, ನೃತ್ಯದೊಂದಿಗೆ ʼನಮ್ಮ ಸಂತೆʼಗೆ ತೆರೆ
Kambala: ದಾಖಲೆ ಬರೆದ ವಾಮಂಜೂರು ತಿರುವೈಲುಗುತ್ತು ಕಂಬಳ
You seem to have an Ad Blocker on.
To continue reading, please turn it off or whitelist Udayavani.