ಅಫ್ಘಾನಿಸ್ಥಾನ:ಕ್ರಿಕೆಟ್ ಪಂದ್ಯದ ವೇಳೆ ಸರಣಿ ಬಾಂಬ್ ಸ್ಫೋಟ, 8 ಸಾವು
Team Udayavani, May 19, 2018, 11:24 AM IST
ಕಾಬೂಲ್ : ಜಲಾಲಾಬಾದ್ ನ ಪ್ರಾಂತೀಯ ರಾಜಧಾನಿಯಾಗಿರುವ ನಂಗರ್‌ಹಾರ್‌ನ ಕ್ರಿಕೆಟ್ ಮೈದಾನದಲ್ಲಿ ನಿನ್ನೆ ಶುಕ್ರವಾರ ತಡ ರಾತ್ರಿ, ಪವಿತ್ರ ರಮ್ಜಾನ್ ತಿಂಗಳ ಪ್ರಯುಕ್ತ ಏರ್ಪಡಿಸಲಾಗಿದ್ದ ಕ್ರಿಕೆಟ್ ಪಂದ್ಯ ವೀಕ್ಷಿಸಲು ನೂರಾರು ಜನರು ಮತ್ತು ಕ್ರಿಕೆಟ್ ಆಟಗಾರರು ಸೇರಿದ್ದಾಗ ಸರಣಿ ಬಾಂಬ್ ಸ್ಫೋಟಗಳ ಸಂಭವಿಸಿ ಕನಿಷ್ಠ ಎಂಟು ಮಂದಿ ಮೃತಪಟ್ಟರೆಂದು ಅಫ್ಘಾನ್ ಅಧಿಕಾರಿಗಳು ತಿಳಿಸಿದ್ದಾರೆ.
ಈ ಸರಣಿ ಬಾಂಬ್ ಸ್ಫೋಟಗಳಲ್ಲಿ ಕನಿಷ್ಠ 45 ಮಂದಿ ಗಾಯಗೊಂಡರೆಂದು ನಂಗರ್‌ಹಾರ್ ಪ್ರಾಂತೀಯ ರಾಜ್ಯಪಾಲರ ವಕ್ತಾರ ಅತ್ತಹುಲ್ಲಾ ಖೋಗ್ಯಾನಿ ತಿಳಿಸಿದರು.
ಈ ಸರಣಿ ಬಾಂಬ್ ಸ್ಫೋಟಗಳ ಹೊಣೆಗಾರಿಕೆಯನ್ನು ಯಾವುದೇ ಉಗ್ರ ಸಂಘಟನೆ ಈ ತನಕ ವಹಿಸಿಕೊಂಡಿಲ್ಲ; ಆದರೂ ಪೂರ್ವ ಅಫ್ಘಾನಿಸ್ಥಾನದ ಈ ಭಾಗದಲ್ಲಿ ತಾಲಿಬಾನ್ ಬಂಡುಕೋರರು ಮತ್ತು ಐಸಿಸ್ ಉಗ್ರರು ಸಕ್ರಿಯರಾಗಿರುವುದರಿಂದ ಇದು ಅವರೇ ನಡೆಸಿರುವ ಕೃತ್ಯವೆಂದು ಶಂಕಿಸಲಾಗಿದೆ.
ಸರಣಿ ಬಾಂಬ್ ನ್ಪೋಟಗಳ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ವಕ್ತಾರ ಖೋಗ್ಯಾನಿ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Vyasanagar: ಮಣ್ಣಿನ ಒಳ ರಸ್ತೆಗಳಿಗೆ ಬೇಕು ಬೀದಿದೀಪ
Mangalore: ಅಡ್ಯಾರ್ ಕಣ್ಣೂರಿನಲ್ಲಿ ತ್ಯಾಜ್ಯ ಸುಡುವಿಕೆಯಿಂದ ಪರಿಸರ ಮಾಲಿನ್ಯ
Dandeli ನಗರ ಠಾಣೆಯ ತನಿಖಾ ವಿಭಾಗದ ಪಿಎಸ್ಐಯಾಗಿ ಕಿರಣ್ ಪಾಟೀಲ್ ಅಧಿಕಾರ ಸ್ಬೀಕಾರ
Thirthahalli: ತುಂಗಾ ನದಿಯಲ್ಲಿ ಅಪರಿಚಿತ ಮೃತದೇಹ ಪತ್ತೆ
Waqf issue: ಅಲ್ಲಾನ ಹೆಸರಲ್ಲಿ ಅಲ್ಲಾನಿಗೆ ದೋಖಾ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.