America; ಭಾರತಕ್ಕೆ 84.40 ಕೋ.ರೂ. ಮೌಲ್ಯದ 1,400 ಕಲಾಕೃತಿ ವಾಪಸ್
1960, 80ರ ದಶಕದಲ್ಲಿ ಲೂಟಿ ಮಾಡಿದ್ದ ಅಮೂಲ್ಯ ಪ್ರಾಚೀನ ವಸ್ತು ಸ್ವದೇಶಕ್ಕೆ
Team Udayavani, Nov 17, 2024, 6:32 AM IST
ನ್ಯೂಯಾರ್ಕ್: ಭಾರತದಿಂದ ಲೂಟಿ ಮಾಡಿದ್ದ 1,400 ಪ್ರಾಚೀನ ವಸ್ತುಗಳನ್ನು ಈಗ ಅಮೆರಿಕ ಮರಳಿ ನೀಡಿದೆ. ಈ ಪುರಾತನ ವಸ್ತು ಗಳು 84.40 ಕೋಟಿ ರೂ. (10 ದಶಲಕ್ಷ ಡಾಲರ್) ಮೌಲ್ಯದ್ದಾಗಿವೆ.
ಭಾರತದ ಕಾನ್ಸುಲೇಟ್ ಜನರಲ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ದೂತಾವಾಸ ಕಚೇರಿ ಅಧಿಕಾರಿ ಮನೀಶ್ ಕುಲ್ಹಾರಿಗೆ ಇವುಗಳನ್ನು ಹಸ್ತಾಂತರಿಸ ಲಾಗಿದೆ ಎಂದು ಮ್ಯಾನ್‌ಹ್ಯಾಟನ್‌ಜಿಲ್ಲಾ ಅಟಾರ್ನಿ ಅಲ್ವಿನ್ ಎಲ್.ಬ್ರ್ಯಾಗ್ ಜ್ಯೂ ಹೇಳಿದ್ದಾರೆ.
ಅಮೆರಿಕ ಹಸ್ತಾಂತರಿಸಿದ ಪುರಾತನ ವಸ್ತು ಗಳಲ್ಲಿ 1960ರ ದಶಕದಲ್ಲಿ ರಾಜಸ್ಥಾನದಿಂದ ಹೊತ್ತೂ ಯ್ದಿದ್ದ ಥಾನೆಸರ್ ಮಾತೃ ಮೂರ್ತಿ ಹಾಗೂ 1980ರ ದಶಕದಲ್ಲಿ ಮಧ್ಯಪ್ರದೇಶದ ದೇವಾ ಲಯದಿಂದ ಲೂಟಿ ಮಾಡಿದ್ದ ನೃತ್ಯಗಾರ್ತಿಯ ಮರಳಿನ ಶಿಲ್ಪವೂ ಸೇರಿವೆ. ಮಧ್ಯಪ್ರದೇಶದಿಂದ ಹೊತ್ತೂಯ್ದಿದ್ದ ಮರಳಿನ ಶಿಲ್ಪವನ್ನು ಅಕ್ರಮವಾಗಿ ಸಾಗಿಸಲು ಅನುಕೂಲವಾಗುವಂತೆ 2 ತುಂಡು ಮಾಡಿದ್ದ ಲೂಟಿಕೋರರು ಅದನ್ನು ಲಂಡನ್‌ಗೆ ಹೊತ್ತೂಯ್ದಿದ್ದರು. ಬಳಿಕ 1992ರಲ್ಲಿ ಲಂಡನ್‌ನಿಂದ ನ್ಯೂಯಾರ್ಕ್‌ಗೆ ಕೊಂಡೊಯ್ಯಲಾಗಿತ್ತು. ಬಳಿಕ ಅದನ್ನು ಮರುಜೋಡಣೆ ಮಾಡಿ ಮೆಟ್ರೋಪಾಲಿಟನ್ ಮ್ಯೂಸಿಯಮ್ ಆಫ್ ಆರ್ಟ್‌ಗೆ ದಾನ ನೀಡಲಾಗಿತ್ತು. 2023ರಲ್ಲಿ ಪುರಾತನ ವಸ್ತುಗಳ ಸಾಗಣೆ ಘಟಕ (ಎಟಿಯು) ಇದನ್ನು ವಶಕ್ಕೆ ಪಡೆದುಕೊಂಡಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kim Jong Un: ಉತ್ತರ ಕೊರಿಯಾದಿಂದ ಆತ್ಮಹತ್ಯಾ ಡ್ರೋನ್ ಪರೀಕ್ಷೆ
Iran: ಹಿಜಾಬ್ ನಿರಾಕರಿಸಿದರೆ ವಿಶೇಷ ಕ್ಲಿನಿಕ್: ಇರಾನ್ ತೀರ್ಮಾನಕ್ಕೆ ಆಕ್ರೋಶ
Canada: ದೇಗುಲದ ಮೇಲೆ ದಾಳಿ: ಕೆನಡಾ ಪೊಲೀಸ್‌ಗೆ ಕ್ಲೀನ್‌ಚಿಟ್
UK; ಪ್ರಧಾನಿ ದೀಪಾವಳಿ ಪಾರ್ಟಿಯಲ್ಲಿ ಮದ್ಯ, ಮಾಂಸ: ಕೊನೆಗೂ ಕ್ಷಮೆ ಯಾಚನೆ
Sri Lanka Election Result:ಸಂಸತ್ ಚುನಾವಣೆ-ಅಧ್ಯಕ್ಷ ಅನುರಾ ದಿಸ್ಸಾನಾಯಕೆ ಪಕ್ಷ ಜಯಭೇರಿ
MUST WATCH
ಹೊಸ ಸೇರ್ಪಡೆ
Charmadi: ಮೃತ್ಯುಂಜಯ ನದಿಯಲ್ಲಿ ಕಾಣಿಸಿಕೊಂಡ ಒಂಟಿ ಸಲಗ
Patna: ಆಸ್ಪತ್ರೆಯಲ್ಲಿ ಮೃತಪಟ್ಟ ವ್ಯಕ್ತಿಯ ಕಣ್ಣು ನಾಪತ್ತೆ!; ಇಲಿ ಕಚ್ಚಿದೆ ಎಂದ ವೈದ್ಯರು
Kerala govt: ಶಬರಿಮಲೆ ವರ್ಚುವಲ್ ಕ್ಯೂ ಬುಕ್ಕಿಂಗ್ ಮಿತಿ ಹೆಚ್ಚಳ
Uttar Pradesh: ಝಾನ್ಸಿ ಅಗ್ನಿ ಅವಘಡ: ಗುರುತೇ ಸಿಗದಂತೆ ಕರಕಲಾದ ಹಸುಳೆಗಳು
G20 Leaders Summit: ಪ್ರಧಾನಿ ಮೋದಿ ನೈಜೀರಿಯಾ, ಬ್ರೆಜಿಲ್, ಗಯಾನಾ ಪ್ರವಾಸ ಶುರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.