100ನೇ ಮರಿ ಮೊಮ್ಮಗುವಿಗೆ ಅಜ್ಜಿಯಾದ 99ರ ವೃದ್ಧೆ!
Team Udayavani, Aug 18, 2022, 7:20 AM IST
ವಾಷಿಂಗ್ಟನ್: ದಶಕಗಳ ಹಿಂದೆ ಸನ್ಯಾಸಿನಿಯಾಗಬೇಕೆಂದು ಕನಸು ಹೊತ್ತಿದ್ದ ಯುವತಿಯೊಬ್ಬರು ಇದೀಗ 100ನೇ ಮರಿ ಮೊಮ್ಮಗುವಿಗೆ ಅಜ್ಜಿಯಾಗಿದ್ದಾರೆ!
ಹೌದು. ಅಮೆರಿಕದ ಮಾರ್ಗರೈಟ್ ಕೊಲ್ಲರ್ (99) ಇತ್ತೀಚೆಗೆ 100ನೇ ಮರಿ ಮೊಮ್ಮಗುವಿಗೆ ಅಜ್ಜಿಯಾಗಿದ್ದಾರೆ. ಕೊಲ್ಲರ್ ಚಿಕ್ಕವರಿದ್ದಾಗಲೇ ಸನ್ಯಾಸಿನಿಯಾಗಿ ದೀಕ್ಷೆ ಪಡೆಯಬೇಕು ಎಂದುಕೊಂಡಿದ್ದರಂತೆ. ಆದರೆ ವಿಲಿಯಮ್ ಅನ್ನು ಭೇಟಿ ಮಾಡಿದ ನಂತರ ಅವರಿಗೆ ಪ್ರೀತಿ ಹುಟ್ಟಿ, ವಿವಾಹವಾಗಿದ್ದಾರೆ.
40ನೇ ವಯಸ್ಸಿಗೇ ಕೊಲ್ಲರ್ ಮೊಮ್ಮಗುವನ್ನು ಕಂಡಿದ್ದಾರೆ. ಅವರಿಗೆ ಒಟ್ಟು 11 ಮಕ್ಕಳು ಹಾಗೂ 56 ಮೊಮ್ಮಕ್ಕಳಿದ್ದಾರೆ. ಈ 56 ಮೊಮ್ಮಕ್ಕಳ ಪೈಕಿ ಬಹುತೇಕರು ವಿವಾಹವಾಗಿದ್ದು ಒಟ್ಟು 100 ಮಕ್ಕಳೂ ಹುಟ್ಟಿವೆ.
ಸನ್ಯಾಸಿನಿ ಆಗಬೇಕಿದ್ದ ನಾನು ಈಗ 100ನೇ ಮರಿ ಮೊಮ್ಮಗುವಿನ ಜತೆ ಆಟವಾಡುತ್ತಿದ್ದೇನೆ ಎಂದು ಖುಷಿಯಿಂದ ಹೇಳಿಕೊಳ್ಳುತ್ತಾರೆ ಕೊಲ್ಲರ್.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.