ಟ್ವೀಟ್ ದಂಧೆ ಹಿಂದೆ ಯುವ ಹ್ಯಾಕರ್ ಕೈವಾಡ
21 ವರ್ಷದ ಸ್ವಿಮ್ ಸ್ವ್ಯಾಪರ್ ನೇತೃತ್ವದಲ್ಲಿ ಹ್ಯಾಕಿಂಗ್: FBI
Team Udayavani, Jul 19, 2020, 6:50 AM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ಸ್ಯಾನ್‌ಫ್ರಾನ್ಸಿಸ್ಕೊ: ಅಮೆರಿಕದ ಹೈಪ್ರೊಫೈಲ್ ಟ್ವಿಟರ್ ಖಾತೆಗಳ ಹ್ಯಾಕಿಂಗ್ ಪ್ರಕರಣದ ಹಿಂದೆ ಯುವ ಹ್ಯಾಕರ್‌ಗಳ ಕೈವಾಡವಿದೆ ಎಂಬ ಶಂಕೆ ವ್ಯಕ್ತವಾಗಿದೆ.
21 ವರ್ಷದ ಸಿಮ್ ಸ್ಪ್ಯಾಪರ್ ತನ್ನ ಸ್ನೇಹಿತರ ಜತೆಗೂಡಿ ಕ್ರಿಪ್ಟೊ ಕರೆನ್ಸಿ ದಂಧೆ ನಡೆಸಿರಬಹುದು ಎಂದು FBI ಅಧಿಕಾರಿಗಳು ಶಂಕಿಸಿದ್ದಾರೆ.
ಗೇಮರ್ಸ್‌ಗಳು ಚಾಟ್‌ಗೆ ಬಳಸುವ “ಡಿಸ್ಕಾರ್ಡ್’ ವೇದಿಕೆ ಮೂಲಕ ಹ್ಯಾಕರ್ಸ್‌ಗಳು ಹಲವು ಸಂದೇಶಗಳನ್ನು ಪರಸ್ಪರ ರವಾನಿಸಿದ್ದಾರೆ.
ಈ ದಂಧೆಯ ಹಿಂದೆ ರಷ್ಯಾದ ಹ್ಯಾಕರ್ಸ್‌ಗಳಾಗಲೀ, ಅತ್ಯಾಧುನಿಕ ತಂತ್ರಜ್ಞರಾಗಲೀ ಭಾಗಿ ಯಾಗಿಲ್ಲ. ಬದಲಾಗಿ ಯುವಕರ ತಂಡ ಸ್ವಿಮ್ ಸ್ವ್ಯಾಪಿಂಗ್ ಮೂಲಕ ದುಷ್ಕೃತ್ಯ ಎಸಗಿದೆ ಎಂದು “ದಿ ನ್ಯೂಯಾರ್ಕ್ ಟೈಮ್ಸ್’ನ ವರದಿಗಳು ಹೇಳಿವೆ.
‘ಹ್ಯಾಕರ್ಸ್ ತಂಡದಲ್ಲಿ ಒಬ್ಟಾತ ಮನೆಯಲ್ಲಿ ತನ್ನ ತಾಯಿ ಜತೆ ಇರುವುದಾಗಿ ಹೇಳಿಕೊಂಡಿ ದ್ದಾನೆ. ಎಲ್ಲರ ಚಾಟಿಂಗ್ ಸ್ಕ್ರೀನ್ ಹೆಸರುಗಳು ಃy, ಃ7 ಎಂಬ ಹ್ಯಾಂಡಲ್ ಅಡಿಯಲ್ಲಿವೆ’ ಎಂದು ವರದಿ ಹೇಳಿದೆ.
ಏನಿದು ಸಿಮ್ ಸ್ವ್ಯಾಪಿಂಗ್?: ವ್ಯಕ್ತಿಯ ಫೈನಾನ್ಶಿಯಲ್ ವಿವರವನ್ನು ಕದಿಯುವ ಡಿಜಿಟಲ್ ಕಳ್ಳ ತನವಿದು. ಒಬ್ಬ ವ್ಯಕ್ತಿಯ ಖಾತೆ ಹ್ಯಾಕ್ ಆಗುವ ಮೊದಲು ಆತನ ಸಿಮ್ ಕಾರ್ಡ್ ಅನ್ನು ಕೆಲಕ್ಷಣ ಬ್ಲಾಕ್ ಮಾಡಿ, ನಕಲಿ ಸಿಮ್ ಮೂಲಕ ಇಂಥ ಕೃತ್ಯ ಎಸಗಲಾಗುತ್ತದೆ.
130 ಖಾತೆ ಟಾರ್ಗೆಟ್: ‘ಬರಾಕ್ ಒಬಾಮಾ, ಎಲನ್ ಮಸ್ಕ್, ಬಿಲ್‌ಗೇಟ್ಸ್‌ನಂಥ ಗಣ್ಯರು ಸೇರಿದಂತೆ ಸುಮಾರು 130 ಖಾತೆಗಳ ಮೇಲೆ ಹ್ಯಾಕರ್ಸ್‌ಗಳು ದಾಳಿ ಇಟ್ಟಿರುವುದು ಪ್ರಾಥಮಿಕವಾಗಿ ತಿಳಿದು ಬಂದಿದೆ’ ಎಂದು ಟ್ವಿಟರ್ ದೃಢಪಡಿಸಿದೆ.
ಟ್ವಿಟರ್ ಸಂಸ್ಥೆಗೆ ಭಾರತ ನೋಟಿಸ್
ಈ ನಡುವೆ ಭಾರತ ಸರ್ಕಾರ, ಟ್ವಿಟರ್ ಸಂಸ್ಥೆಗೆ ನೋಟಿಸ್ ರವಾನೆ ಮಾಡಿದೆ. ಹ್ಯಾಕಿಂಗ್ ಪ್ರಕರಣ ಹಿನ್ನೆಲೆಯಲ್ಲಿ ಭಾರತೀಯ ಗಣ್ಯರ ಖಾತೆಗಳ ಮೇಲಾದ ಪರಿಣಾಮಗಳ ಬಗ್ಗೆ ವಿವರವಾದ ಮಾಹಿತಿ ನೀಡುವಂತೆ ಸೂಚಿಸಿದೆ.
ಎಷ್ಟು ಮಂದಿ ಭಾರತೀಯರ ಖಾತೆಗಳು ಹ್ಯಾಕ್‌ಗೆ ತುತ್ತಾಗಿವೆ ಅಥವಾ ತುತ್ತಾಗುವ ಸಾಧ್ಯತೆ ಇದೆಯೆಂಬುದನ್ನು ವಿವರಿಸುವಂತೆ ಕೋರಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Owaisi; ತಿರುಪತಿಯಲ್ಲಿ ಮುಸ್ಲಿಂ ಸ್ಟಾಫ್ ಇಲ್ಲದಿರುವಾಗ ವಕ್ಫ್ ನಲ್ಲೇಕೆ ಹಿಂದೂಗಳು
Sparks Row; ಉಗ್ರರನ್ನು ಹ*ತ್ಯೆ ಮಾಡಬಾರದು…: ಫಾರೂಕ್ ಅಬ್ದುಲ್ಲಾ ಹೇಳಿಕೆ
Shivaji Satam: ಕ್ಯಾಷಿಯರ್ ಆಗಿದ್ದ ಹುಡುಗ ಟಿವಿ ಲೋಕದ ʼಸಿಐಡಿʼಯಾಗಿ ಬೆಳೆದು ಬಂದದ್ದೇಗೆ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.