ಎ.3ರಿಂದ ಎಚ್1- ಬಿ ವೀಸಾಕ್ಕೆ ಅರ್ಜಿ
Team Udayavani, Mar 17, 2017, 8:05 AM IST
ವಾಷಿಂಗ್ಟನ್: ಎಚ್1-ಬಿ ವೀಸಾಗಳ ನಿಯಂತ್ರಣಕ್ಕೆ ಅಮೆರಿಕ ಸಂಸತ್‌ನಲ್ಲಿ ಆರು ಮಸೂದೆಗಳು ಮಂಡನೆಯಾಗಿರುವಂತೆಯೇ 2018ನೇ ಸಾಲಿಗೆ ವೀಸಾ ನೀಡಲು ಡೊನಾಲ್ಡ್ ಟ್ರಂಪ್ ಸರಕಾರ ಮುಂದಾಗಿದೆ. ಅದಕ್ಕೆ ಪೂರಕವಾಗಿ ಎ.3ರಿಂದ ವೀಸಾ ನೀಡಿಕೆ ಪ್ರಕ್ರಿಯೆ ಆರಂಭವಾಗಲಿದೆ. ಎಚ್1-ಬಿ ವೀಸಾ ಅರ್ಜಿಗಳನ್ನು ವಾರದ 5 ದಿನಗಳ ಕಚೇರಿ ಅವಧಿಯಲ್ಲಿ ಸ್ವೀಕರಿಸಲಾಗುತ್ತದೆ. “ಕೆಲ ದಿನಗಳ ಹಿಂದಷ್ಟೇ ಸರಕಾರ ಇನ್ನು 6 ತಿಂಗಳು ಯಾವುದೇ ಎಚ್1-ಬಿ ವೀಸಾ ಅರ್ಜಿ ಸ್ವೀಕರಿಸುವುದಿಲ್ಲ. ಸಾಕಷ್ಟು ಅರ್ಜಿಗಳಿಗೆ ಈಗಾಗಲೇ ವೀಸಾ ವಿಲೇವಾರಿ ಆಗಿಲ್ಲ’ ಎಂದು ಹೇಳಿತ್ತಾದರೂ ಅಮೆರಿಕ ದಿಢೀರ್ ಈ ನಿರ್ಧಾರ ಘೋಷಿಸಿದೆ. ಒಟ್ಟು 85 ಸಾವಿರ ಅರ್ಜಿ ಸ್ವೀಕಾರಕ್ಕೆ ನಿರ್ಧರಿಸಲಾಗಿದೆ.
ಸಾಮಾನ್ಯ ಶ್ರೇಣಿಯಲ್ಲಿ 65 ಸಾವಿರ ಅರ್ಜಿಗಳನ್ನು ಸ್ವೀಕರಿಸಲಾಗುತ್ತದೆ. ಅಮೆರಿಕ ವಿವಿಗಳಿಗೆ ವ್ಯಾಸಂಗಕ್ಕೆ ಆಗಮಿಸುವವರಿಗೆ 20 ಸಾವಿರ ಎಚ್1-ಬಿ ವೀಸಾ ಮೀಸಲಿರಿಸಲಾಗಿದೆ. ಆದರೆ, ಸಂಶೋಧನೆ ಕೈಗೊಳ್ಳಲು ಬರುವ ವಿದೇಶಿಗರಿಗೆ ಈ ಬಾರಿ ಎಚ್1- ಬಿ ವೀಸಾ ಅರ್ಜಿ ನೀಡಲಾಗುವುದಿಲ್ಲ. 6 ತಿಂಗಳು ಅರ್ಜಿ ಸ್ವೀಕಾರ ನಡೆಯಲಿದೆ.
ಪರಿಷ್ಕೃತ ನೀತಿಗೂ ಕಾನೂನು ಅಡ್ಡಿ!
ಇರಾಕ್ ಅನ್ನು ಕೈಬಿಟ್ಟು 6 ಮುಸ್ಲಿಂ ರಾಷ್ಟ್ರಗಳ ಮೇಲೆ ಪರಿಷ್ಕೃತ ತಾತ್ಕಾಲಿಕ ವಲಸೆ ನಿರ್ಬಂಧ ನೀತಿಗೆ ಸಹಿ ಹಾಕಿದ್ದ ಡೊನಾಲ್ಡ್ ಟ್ರಂಪ್‌ಗೆ ಮತ್ತೆ ಹಿನ್ನಡೆಯಾಗಿದೆ. ಕಳೆದ ವಾರವಷ್ಟೇ ಈ ಕಾಯ್ದೆ ಜಾರಿಯಾಗಿತ್ತಾದರೂ ಈಗ ಇದಕ್ಕೆ ಹವಾಯಿಯ ಫೆಡರಲ್ ಜಡ್ಜ್ ತಡೆಯಾಜ್ಞೆ ತಂದಿದ್ದಾರೆ. ಇದನ್ನು ಖಂಡಿಸಿರುವ ಫೆಡರಲ್ ಜಡ್ಜ್ ಡೆರ್ರಿಕ್ ವ್ಯಾಟ್ಸನ್, ನಿರ್ಬಂಧ ಹೇರಲಾಗಿರುವ ಎಲ್ಲ ದೇಶಗಳಲ್ಲೂ ಶೇ.90ಕ್ಕಿಂತ ಅಧಿಕ ಮುಸ್ಲಿಮರೇ ಇದ್ದಾರೆ. ಇದರಿಂದ ಅಮೆರಿಕ ಇಸ್ಲಾಂ ವಿರೋಧಿ ಎಂದು ಕರೆಯಿಸಿಕೊಳ್ಳುತ್ತದೆ’ ಎಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Actor Darshan: 6 ತಿಂಗಳ ಬಳಿಕ ದರ್ಶನ್ ಭೇಟಿ: ಪವಿತ್ರಾ ಭಾವುಕ
Nimma Vasthugalige Neeve Javaabdaararu review: ಜವಾಬ್ದಾರಿಯಿಂದ ಸಿನಿಮಾ ನೋಡಿ
Bangladesh: ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಿದ ತಮೀಮ್ ಇಕ್ಬಾಲ್
Mangaluru: ಹಿಂದಿ ರಾಷ್ಟ್ರ ಭಾಷೆ ಅಲ್ಲ… ಆರ್.ಅಶ್ವಿನ್ ಹೇಳಿಕೆಗೆ ಅಣ್ಣಾಮಲೈ ಹೇಳಿದ್ದೇನು?
Mudhol: ರೈತರ ಜಮೀನಿನಲ್ಲಿ ಮೊಸಳೆ ಪ್ರತ್ಯಕ್ಷ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.