40 ವರ್ಷಗಳ ಬಳಿಕ ಬ್ರಿಟನ್ ರಾಣಿ ಡಯಾನಾ ಮದುವೆ ಕೇಕ್ ತುಂಡು ಹರಾಜು!
Team Udayavani, Jul 31, 2021, 9:45 PM IST
ಲಂಡನ್: ಬೇಗನೆ ಹಾಳಾಗುವ ತಿಂಡಿಗಳಲ್ಲಿ ಕೇಕ್ ಕೂಡ ಒಂದು. ಈ ಸಿಹಿ ತಿಂಡಿಯನ್ನು ದೀರ್ಘ ಕಾಲದ ವರೆಗೆ ಸಂಗ್ರಹ ಮಾಡಿಡಲು ಸಾಧ್ಯವಿಲ್ಲ. ಆದರೆ, ಇಲ್ಲೊಂದು ಕಡೆ ಕಳೆದ 40 ವರ್ಷಗಳಿಂದ ಒಂದು ಕೇಕ್ ನ ತುಂಡನ್ನು ಸಂರಕ್ಷಣೆ ಮಾಡಿ ಇಡಲಾಗಿದೆ. ಇದೀಗ ಅದನ್ನು ಹರಾಜು ಮಾಡಲಾಗುತ್ತಿದೆ.
ಹೌದು, ಬರೋಬ್ಬರಿ 40 ವರ್ಷಗಳ ಬಳಿಕ ಬ್ರಿಟನ್ನ ರಾಜಕುಮಾರ ಚಾರ್ಲ್ಸ್ ಮತ್ತು ರಾಜಕುಮಾರಿ ಡಯಾನಾ ಅವರ ಮದುವೆಯ ಕೇಕ್ನ ತುಂಡೊಂದನ್ನು ಹರಾಜಿಗಿಡಲಾಗಿದೆ!
ಬ್ರಿಟನ್ನ ರಾಜಕುಮಾರ ಚಾರ್ಲ್ಸ್ ಮತ್ತು ರಾಜಕುಮಾರಿ ಡಯಾನಾ ಅವರ ಮದುವೆಯು ಜು.29,1981ರಂದು ನೆರವೇರಿತ್ತು. ಆ ಸಮಾರಂಭದಲ್ಲಿ ಕತ್ತರಿಸಲಾದ ಒಂದು ತುಂಡು ಕೇಕ್ ಅನ್ನು ಮೋಯಿರಾ ಸ್ಮಿತ್ ಎಂಬವರಿಗೆ ನೀಡಲಾಗಿತ್ತು. ಅದನ್ನುಅವರು ಸಣ್ಣ ಪೆಟ್ಟಿಗೆಯಲ್ಲಿಟ್ಟು ಸಂರಕ್ಷಿಸಿಟ್ಟಿದ್ದು, 2008ರಲ್ಲಿ ಬೇರೆಯವರಿಗೆ ಮಾರಾಟ ಮಾಡಿದ್ದರು.
ಬಹುಶಃ ಇದು ಸೇವನೆ ಯೋಗ್ಯವಲ್ಲದ ಸ್ಥಿತಿಯಲ್ಲಿದ್ದರೂ ಕೂಡ ಮುಂದಿನ ತಿಂಗಳು (ಆ.11ರಂದು) ನಡೆಯಲಿರುವ ಹರಾಜಿನಲ್ಲಿ ನೂರಾರು ಡಾಲರ್ ಗೆ ಮಾರಾಟವಾಗುವ ನಿರೀಕ್ಷೆ ಇದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
America: ಪ್ರತೀಕಾರ- ಭಾರತದ ನಟೋರಿಯಸ್ ಡ್ರ*ಗ್ಸ್ ಸ್ಮಗ್ಲರ್ ಶೂಟೌಟ್ ನಲ್ಲಿ ಹ*ತ್ಯೆ
Ex-US President: ಅಮೆರಿಕದ ಮಾಜಿ ಅಧ್ಯಕ್ಷ ಬಿಲ್ ಕ್ಲಿಂಟನ್ ಆಸ್ಪತ್ರೆಗೆ ದಾಖಲು
Revival: ಭಾರತಕ್ಕೆ ಬಾಂಗ್ಲಾದೇಶ ಸೆಡ್ಡು: ಪಾಕಿಸ್ಥಾನ ಜತೆ ವಹಿವಾಟಿಗೆ ಸಜ್ಜು!
White House; ಎಐ ಹಿರಿಯ ಸಲಹೆಗಾರರಾಗಿ ಭಾರತ ಮೂಲದ ವ್ಯಕ್ತಿ ನೇಮಕ
Syria ಮಾಜಿ ಅಧ್ಯಕ್ಷ ಅಸಾದ್ಗೆ ವಿಚ್ಛೇದನ ಕೊಡಲು ಪತ್ನಿ ಚಿಂತನೆ?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಸರಣಿ ರಜೆ-ವಿಶ್ವವಿಖ್ಯಾತ ಹಂಪಿಯಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಳ
ಸಿ.ಟಿ.ರವಿ ಆ ಪದ ಬಳಸಿಲ್ಲವಾದ್ರೆ ಧರ್ಮಸ್ಥಳಕ್ಕೆ ಬಂದು ಆಣೆ ಪ್ರಮಾಣ ಮಾಡಲಿ: ಸಚಿವೆ ಲಕ್ಷ್ಮೀ
ವಿದೇಶಿ ಹಕ್ಕಿಗಳ ಕಲರವ- ಕುಷ್ಟಗಿಯ ನಿಡಶೇಸಿ ಕೆರೆಗೆ ಬಂದ ಬಾನಾಡಿಗಳು!
Aranthodu: ಲಾರಿ-ಸ್ಕೂಟಿ ಅಪಘಾತ; ಸವಾರರಿಬ್ಬರು ಮೃತ್ಯು
ದೆಹಲಿ ಪರೇಡ್ಗೆ ಬ್ರಹ್ಮ ಜಿನಾಲಯ ಸ್ತಬ್ಧಚಿತ್ರ; ಗತ ವೈಭವ ಸಾರಲಿದೆ ಟ್ಯಾಬ್ಲೊ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.