ನಿತ್ಯ ಸ್ನಾನ ಮಾಡ್ತೀರಾ? ಹಾಗಿದ್ದರೆ ಜೋಕೆ!
Team Udayavani, Jan 30, 2017, 3:45 AM IST
ಲಂಡನ್:ನಿತ್ಯ ಸ್ನಾನ ಮಾಡದೆ ಇದ್ದರೆ ಮೈಯೆಲ್ಲ ಗಮ್ ಅನ್ನುತ್ತೆ, ಅಕ್ಕಪಕ್ಕದವರೆಲ್ಲ “ಕೊಳಕ’ ಅಂತಾರೆ ಅನ್ನೋ ಹೆದರಿಕೆ. ಆದರೆ, ಅದಕ್ಕಿಂತ ಹೆದರಿಕೆ ಈಗ ವೈದ್ಯವಿಜ್ಞಾನದ ಎದೆಬಡಿತವನ್ನು ಹೆಚ್ಚಿಸಿದೆ. ನಿತ್ಯ ಸ್ನಾನವು ನಮ್ಮಲ್ಲಿನ ಉಪಯುಕ್ತ ಸೂಕ್ಷ್ಮಾಣುಜೀವಿಗಳನ್ನೇ ನಿರ್ಮೂಲನೆ ಮಾಡುತ್ತದೆ ಎಂದು ಅಮೆರಿಕದ ಅಟಾಹ್ ಯುನಿವರ್ಸಿಟಿಯ ವರ್ಣತಂತು ವಿಜ್ಞಾನ ಕೇಂದ್ರದ ವಿಭಾಗದ ಅಧ್ಯಯನ ಜಗತ್ತಿಗೆ ಈ ಆಘಾತ ನೀಡಿದೆ.
ಸ್ನಾನ ಮಾಡಿದರೆ ದೇಹ ಶುಚಿಯಾಗುತ್ತೆ, ಬೆವರಿನ ವಾಸನೆಯೂ ಇರೋದಿಲ್ಲ ಎನ್ನುವುದೆಲ್ಲ ಸಾಮಾನ್ಯ ನಂಬಿಕೆ. ಆದರೆ, “ಸ್ನಾನ ಮಾಡದಿರುವುದೇ ಆರೋಗ್ಯಕಾರಿ ನಿರ್ಧಾರ’ ಎಂದು ವಿಜ್ಞಾನಿಗಳ ತಂಡ ಹೇಳಿದೆ. ಉಪಯುಕ್ತ ಸೂಕ್ಷಾಣುಜೀವಿಗಳಲ್ಲಿ ಬ್ಯಾಕ್ಟೀರಿಯಾ, ವೈರಸ್, ಫಂಗಸ್‌ಗಳು ಇರುತ್ತವೆ. ಇವುಗಳಲ್ಲಿ ಅನೇಕ ಜೀವಿಗಳು ದೇಹಕ್ಕೆ ರೋಗ ನಿರೋಧಕ ಶಕ್ತಿಯನ್ನು ಒದಗಿಸುವಂಥವು. ಜೀರ್ಣವ್ಯವಸ್ಥೆಯನ್ನು ಸುಧಾರಿಸುವಂಥವು. ರಕ್ತಸಂಚಾರ ಸುಗಮಗೊಂಡು ಹೃದ್ರೋಗ ಬಾರದಂತೆ ತಡೆಯವ ಶಕ್ತಿಯೂ ಇಂಥ ಸೂಕ್ಷ್ಮಾಣುಜೀವಿಗಳಿಗೆ ಇರುತ್ತವೆ. ಆದರೆ, ವಿಪರೀತ ಸೋಪು, ಶಾಂಪು ಬಳಸಿ ಸ್ನಾನ ಮಾಡುವುದರಿಂದ ರಾಸಾಯನಿಕ ದಾಳಿಯಿಂದಾಗಿ ಇವುಗಳೆಲ್ಲ ಕೊಲ್ಲಲ್ಪಡುತ್ತವೆ ಎಂದು ತಜ್ಞರ ತಂಡ ಹೇಳಿದೆ.
ಹೇಗೆ ಉಪಯೋಗ?: ಸೂಕ್ಷ್ಮಾಣುಜೀವಿಗಳು ಹೇಗೆ ಉಪಯೋಗಕಾರಿ ಎಂಬುದಕ್ಕೂ ವಿಜ್ಞಾನಿಗಳಲ್ಲಿ ಕಾರಣವುಂಟು. ಹೆಚ್ಚು ಸಿಹಿ ಪದಾರ್ಥವನ್ನು ಸೇವಿಸುವ ಬ್ಯಾಕ್ಟೀರಿಯಾ ನಮ್ಮ ದೇಹದಲ್ಲಿನ ಹಸಿಗಾಯ, ಮೊಡವೆಗಳಿಗೆ ಪರಿಣಾಮಕಾರಿ ಮದ್ದು. ದೇಹದಲ್ಲಿನ ಅಮೋನಿಯಾ- ಆಕ್ಸಿಡೈಸಿಂಗ್ ಬ್ಯಾಕ್ಟೀರಿಯಾಗಳು ಇದ್ದಷ್ಟೂ ಚರ್ಮದ ಕಾಯಿಲೆಗಳು ದೂರ ಆಗುತ್ತವೆ ಎಂದು ಹಾರ್ವರ್ಡ್ ವಿವಿಯೂ 2014ರಲ್ಲಿ ಸಂಶೋಧನೆಯಿಂದ ಸಾಬೀತು ಮಾಡಿತ್ತು. ಅದೇ ಸಂಗತಿಯೇ ಪುನಃ ಸಾಬೀತಾಗಿದೆ. ಅಮೋನಿಯಾ- ಆಕ್ಸಿಡೈಸಿಂಗ್ ಬ್ಯಾಕ್ಟೀರಿಯಾಗಳು ಥಿಯೋಆಲ್ಕೋಹಾಲ್‌ಗಳನ್ನು ಪ್ರಕಟಿಸುವುದರಿಂದ ಚರ್ಮಕ್ಕೆ ಯೋಗ್ಯ ಫಲಿತಾಂಶ ಸಿಗುತ್ತದೆ. ಆದರೆ, ಥಿಯೋಆಲ್ಕೋಹಾಲ್ ಅನೇಕ ಸಲ ರೋಸ್‌ವಾಟರ್‌ಗಿಂತಲೂ ಸುವಾಸನೆ ಬೀರುತ್ತದೆ ಎಂದೂ ವೈದ್ಯರು ಹೇಳಿದ್ದಾರೆ.
ಈತ 12 ವರ್ಷದಿಂದ ಸ್ನಾನವನ್ನೇ ಮಾಡ್ಲಿಲ್ಲ!
ಲಂಡನ್ನಿನ ಪದವೀಧರ ಡೇವ್ ವಿಟ್‌ಲಾಕ್ ಎಂಬಾತ 12 ವರ್ಷಗಳಿಂದ ಸ್ನಾನ ಮಾಡಿಲ್ಲ! ಈತ ಸ್ನಾನದ ಬದಲು ಬಳಸುತ್ತಿರುವುದು “ಎಒ ಬಯೋಮ್’ (ಅಮೋನಿಯಾ- ಆಕ್ಸಿಡೈಸಿಂಗ್ ಬ್ಯಾಕ್ಟೀರಿಯಾ) ಸ್ಪ್ರೆàಯನ್ನು! ಕೇಂಬ್ರಿಡ್ಜ್ ವಿವಿಗೆ ಸೇರಿರುವ ಕಂಪನಿಯೊಂದು ಇದನ್ನು ಸಿದ್ಧಪಡಿಸಿದ್ದು, ಇಲ್ಲಿಯ ತನಕ ಈತನಿಗೆ ಯಾವುದೇ ಚರ್ಮದ ಕಾಯಿಲೆಗಳೂ ಬಂದಿಲ್ಲ. ನಿತ್ಯ ಸ್ನಾನ ಮಾಡುವವರಿಗಿಂತ ಈತನ ಚರ್ಮ ಆರೋಗ್ಯಕಾರಿಯಾಗಿ, ಕಾಂತಿಯುಕ್ತವಾಗಿ ಇದೆಯೆಂದು ಸಂಶೋಧನಾ ವೈದ್ಯರು ಹೇಳಿದ್ದಾರೆ. ಅಲ್ಲದೆ, ಡೇವ್ ವಿಟ್‌ಲಾಕ್‌ನ ಹೃದಯದ ಆರೋಗ್ಯವೂ ಇತರರಿಗಿಂತ ಚೆನ್ನಾಗಿಯೇ ಇದೆಯಂತೆ!
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
UK; ಪ್ರಧಾನಿ ದೀಪಾವಳಿ ಪಾರ್ಟಿಯಲ್ಲಿ ಮದ್ಯ, ಮಾಂಸ: ಕೊನೆಗೂ ಕ್ಷಮೆ ಯಾಚನೆ
Sri Lanka Election Result:ಸಂಸತ್ ಚುನಾವಣೆ-ಅಧ್ಯಕ್ಷ ಅನುರಾ ದಿಸ್ಸಾನಾಯಕೆ ಪಕ್ಷ ಜಯಭೇರಿ
Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್ ರಾಷ್ಟ್ರ?
Marriage: ಕ್ರಿಸ್ಮಸ್‌ಗೆ ಅಮೆಜಾನ್ ಸಿಇಒ ಅದ್ಧೂರಿ ವಿವಾಹ?
Washington: ಅಮೆರಿಕ ಗುಪ್ತಚರ ಸಂಸ್ಥೆಗೆ ತುಳಸಿ ಗಬಾರ್ಡ್ ಮುಖ್ಯಸ್ಥೆ
MUST WATCH
ಹೊಸ ಸೇರ್ಪಡೆ
Manipal KMC Hospital: ಮಲ್ಪೆ ಬೀಚ್‌ನಲ್ಲಿ ಮಧುಮೇಹ ಜಾಗೃತಿ
UK; ಪ್ರಧಾನಿ ದೀಪಾವಳಿ ಪಾರ್ಟಿಯಲ್ಲಿ ಮದ್ಯ, ಮಾಂಸ: ಕೊನೆಗೂ ಕ್ಷಮೆ ಯಾಚನೆ
Kollegala: ಎತ್ತಿನಗಾಡಿಗೆ ಸಾಮ್ರಾಟ್ ಟರ್ಬೇ ವಾಹನ ಡಿಕ್ಕಿ; ಎತ್ತು ಸಾವು
Udupi: ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್; ಉಡುಪಿ ಮಹಿಳಾ ವಿಭಾಗ ಆರಂಭ
ಕನಕಗಿರಿ:ಮಂಗಳೂರು ಮೂಲದ ಕುಟುಂಬ-ಸೌಹಾರ್ದತೆಗೆ ಸಾಕ್ಷಿ 4 ದಶಕದ ಸಕ್ಕರೆ ಗೊಂಬೆ ತಯಾರಿಕೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.