80 ವರ್ಷಗಳ ಅನಂತರ ಸಿಕ್ಕ ಪಾಕೆಟ್ ವಾಚ್; 2ನೇ ವಿಶ್ವ ಯುದ್ಧದ ವೇಳೆ ಕಳೆದುಹೋಗಿದ್ದ ವಾಚ್
Team Udayavani, Apr 20, 2022, 8:00 AM IST
ಅಮಸ್ಟರ್‌ಡಂ: ಸುಮಾರು 80 ವರ್ಷಗಳ ಹಿಂದೆ ನಾಜಿ ಯೋಧರು ಕದ್ದಿದ್ದ ಪಾಕೆಟ್ ವಾಚ್ ಒಂದು ಇದೀಗ ಅದನ್ನು ನಿರ್ಮಿಸಿದವರ ಕುಟುಂಬಕ್ಕೆ ಸಿಕ್ಕಿದೆ! ಅಷ್ಟು ಮಾತ್ರವಲ್ಲದೆ ಅದು ಇನ್ನೂ ಸುಸ್ಥಿತಿಯಲ್ಲಿದೆ.
ನೆದರ್‌ಲ್ಯಾಂಡ್‌ನ ರೋಟರ್‌ಡ್ಯಾಂ ಮೂಲದ ಆಲ್ಫ್ರೆಡ್ ಓವರ್‌ಸ್ಟ್ರಿಜಿದ್ ಹೆಸರಿನ ವ್ಯಕ್ತಿ 1910ರಲ್ಲಿ ತನ್ನ ಸಹೋದರ ಲುಯೀಸ್‌ಗೋಸ್ಕರ ಪಾಕೆಟ್ ವಾಚ್ ತಯಾರಿಸಿದ್ದ. ಆತನನ್ನು ನಾಜಿ ಯೋಧರು ಬಂಧಿಸಿದ್ದು, ಆ ವೇಳೆ ಅವನ ಬಳಿ ಇದ್ದ ವಾಚ್ ಅನ್ನು ತಾವೇ ಇಟ್ಟುಕೊಂಡಿದ್ದರು.
2ನೇ ವಿಶ್ವ ಯುದ್ಧದ ಸಮಯದಲ್ಲಿ ಬೆಲ್ಜಿಯಂ ಮತ್ತು ನೆದರ್‌ಲೆಂಡ್‌ನ ಜನರು ನಾಜಿ ಯೋಧರಿಗೆ ವಾಸಕ್ಕೆ ಸ್ಥಳ ಕೊಟ್ಟಿದ್ದರು. ಅದೇ ಹಿನ್ನೆಲೆ ಬೆಲ್ಜಿಯಂನ ಗುಸ್ತಾವೆ ಜಾನ್ಸಿನ್ಸ್ ಹೆಸರಿನ ರೈತ ಮೂರು ಯೋಧರಿಗೆ ಸ್ಥಳ ಕೊಟ್ಟಿದ್ದ. ಅದರಲ್ಲಿ ಒಬ್ಬ ಯೋಧನ ಜೇಬಿನಲ್ಲಿದ್ದ ಆ ಪಾಕೆಟ್ ವಾಚು, ಅದೇ ಮನೆಯ ಹಿಂದಿನ ಜಾಗದಲ್ಲಿ ಬಿದ್ದಿದೆ.
ಇದನ್ನೂ ಓದಿ:ಪಕ್ಷ ಸಿದ್ದಾಂತ, ನಾಯಕತ್ವ ಇಲ್ಲದ ಕಾಂಗ್ರೆಸ್ ದೇಶವನ್ನೇ ಗೆಲ್ಲಲು ಹೊರಟಿದೆ : ಸಿಎಂ ವ್ಯಂಗ್ಯ
ವಾಚು ಗುಸ್ತಾವೆ ಕೈ ಸೇರಿದಾಗ ಆತ ಅದೇ ಜಾಗದಲ್ಲಿ ವಾಚನ್ನು ಬಚ್ಚಿಟ್ಟಿದ್ದಾನೆ. ಇತ್ತೀಚೆಗೆ ಗುಸ್ತಾವೆ ಮೊಮ್ಮಕ್ಕಳು ಆ ಜಾಗವನ್ನು ಮಾರಾಟ ಮಾಡಲು ಮುಂದಾದಾಗ ವಾಚು ಕೈಗೆ ಸಿಕ್ಕಿದೆ. ಅದರ ಹಿಂಬದಿಯಲ್ಲಿ ಬರೆಯಲಾಗಿದ್ದ ಮಾಹಿತಿ ಆಧರಿಸಿ, ಅದರ ತಯಾರಕರನ್ನು ಸಂಪರ್ಕಿಸಲು ಯತ್ನಿಸಲಾಗಿದೆ. ವಾಚ್ ತಯಾರಿಸಿದ್ದ ಆಲ್ಫ್ರೆಡ್ ಓವರ್‌ಸ್ಟ್ರಿಜಿದ್‌ನ ಮೊಮ್ಮಕ್ಕಳು ನೆದರ್ಲೆಂಡ್‌ನಲ್ಲಿ ಇರುವುದಾಗಿ ಗೊತ್ತಾಗಿದ್ದು, ಅವರಿಗೆ ವಾಚನ್ನು ಹಸ್ತಾಂತರಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
America; ಭಾರತಕ್ಕೆ 84.40 ಕೋ.ರೂ. ಮೌಲ್ಯದ 1,400 ಕಲಾಕೃತಿ ವಾಪಸ್
Kim Jong Un: ಉತ್ತರ ಕೊರಿಯಾದಿಂದ ಆತ್ಮಹತ್ಯಾ ಡ್ರೋನ್ ಪರೀಕ್ಷೆ
Iran: ಹಿಜಾಬ್ ನಿರಾಕರಿಸಿದರೆ ವಿಶೇಷ ಕ್ಲಿನಿಕ್: ಇರಾನ್ ತೀರ್ಮಾನಕ್ಕೆ ಆಕ್ರೋಶ
Canada: ದೇಗುಲದ ಮೇಲೆ ದಾಳಿ: ಕೆನಡಾ ಪೊಲೀಸ್‌ಗೆ ಕ್ಲೀನ್‌ಚಿಟ್
UK; ಪ್ರಧಾನಿ ದೀಪಾವಳಿ ಪಾರ್ಟಿಯಲ್ಲಿ ಮದ್ಯ, ಮಾಂಸ: ಕೊನೆಗೂ ಕ್ಷಮೆ ಯಾಚನೆ
MUST WATCH
ಹೊಸ ಸೇರ್ಪಡೆ
KL Rahul; ಗಾಯದ ಚಿಂತೆ ನಿವಾರಿಸಲು ನೆಟ್‌ನಲ್ಲಿ ಬ್ಯಾಟಿಂಗ್: ಬ್ಯಾಕ್-ಅಪ್ ಆಗಿ ಪಡಿಕ್ಕಲ್
Maharastra: ಚುನಾವಣಾ ರ್‍ಯಾಲಿ ರದ್ದುಗೊಳಿಸಿ ದಿಢೀರ್ ದೆಹಲಿಗೆ ವಾಪಸ್ಸಾದ ಸಚಿವ ಅಮಿತ್ ಶಾ
Kantara Chapter 1: ರಿಷಬ್ ಶೆಟ್ಟಿ ʼಕಾಂತಾರ ಚಾಪ್ಟರ್ -1ʼ ರಿಲೀಸ್ ಗೆ ಡೇಟ್ ಫಿಕ್ಸ್
The Sabarmati Report ;ಸಿನಿಮಾವಾಗಿ ಗೋಧ್ರಾ ದುರಂತ: ಸತ್ಯ ಹೊರಬರುತ್ತಿದೆ ಎಂದ ಪ್ರಧಾನಿ
Kinnal raj; ʼಸಿಂಹರೂಪಿಣಿʼಗೆ 25ರ ಸಂಭ್ರಮ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.