ಪೆಟ್ರೋಲ್ ಬೇಕಾದ್ರೆ ಬಿಕಿನಿ ಧರಿಸಿ ಬನ್ನಿ; ಪುಕ್ಸಟ್ಟೆ ಆಫರ್ ಗೆ ಪುರುಷರ ದಂಡು!
Team Udayavani, Nov 18, 2019, 6:33 PM IST
ಮಾಸ್ಕೋ: ಒಂದು ಕೊಂಡರೆ ಒಂದು ಉಚಿತ, ಶೇ.80ರಷ್ಟು ಕಡಿತ, ಶೇ.50ರಷ್ಟು ಕಡಿತ ಹೀಗೆ ಗ್ರಾಹಕರನ್ನು ಆಕರ್ಷಿಸಲು ವಿವಿಧ ರೀತಿಯ ಆಫರ್ ಗಳು ಸಾಮಾನ್ಯ. ಆದರೆ ಉಚಿತ ಪೆಟ್ರೋಲ್ ಬೇಕಾದರೆ ಬಿಕಿನಿ ಧರಿಸಿ ಬನ್ನಿ ಎಂದು ರಷ್ಯಾದಲ್ಲಿರುವ ಪೆಟ್ರೋಲ್ ಬಂಕ್ ನೀಡಿರುವ ಆಫರ್ ಹೆಚ್ಚು ಈಗ ಸದ್ದು ಮಾಡಿದೆ.!
ರಷ್ಯಾದ ಸಾಮಾರಾದಲ್ಲಿರುವ ಓಲ್ವಿ ಎಂಬ ಪೆಟ್ರೋಲ್ ಬಂಕ ಮಾಲೀಕ ಗ್ರಾಹಕರನ್ನು ಸೆಳೆಯಲು ಏನಾದರು ಹೊಸ ಉಪಾಯಕ್ಕೆ ಕೈಹಾಕಬೇಕು ಎಂದು ಆಲೋಚಿಸಿ, ಬಿಕಿನಿ ಧರಿಸಿ ಬಂದವರಿಗೆ ಪುಕ್ಸಟ್ಟೆ ಪೆಟ್ರೋಲ್ ಎಂದು ಆಫರ್ ಕೊಟ್ಟಿರುವುದಾಗಿ ವರದಿ ತಿಳಿಸಿದೆ.
ಆದರೆ ಉಚಿತ ಪೆಟ್ರೋಲ್ ಗಾಗಿ ಬಿಕಿನಿಯನ್ನು ಪುರುಷರು ಧರಿಸಬೇಕೋ ಅಥವಾ ಮಹಿಳೆಯರೋ ಎಂಬುದನ್ನು ಖಚಿತಪಡಿಸಿಲ್ಲವಾಗಿತ್ತು. ಆದರೆ ಇದ್ಯಾವುದನ್ನೂ ಲೆಕ್ಕಕ್ಕೆ ತೆಗೆದುಕೊಳ್ಳದ ಪುರುಷರು ಮಾತ್ರ ಬಿಕಿನಿ ಧರಿಸಿ ನಾ ಮುಂದು, ತಾ ಮುಂದು ಎಂದು ಪುಕ್ಸಟ್ಟೆ ಪೆಟ್ರೋಲ್ ಹಾಕಿಸಿಕೊಂಡಿದ್ದಾರೆ.
ಜನಸಂಖ್ಯೆ ಹೆಚ್ಚಾಗುತ್ತಿದ್ದಂತೆಯೇ ಪೆಟ್ರೋಲ್ ಬಂಕ್ ಮಾಲೀಕ ಈ ಉಚಿತ ಆಫರ್ ಅನ್ನು ನಿಲ್ಲಿಸಿದ್ದರು. ಅಷ್ಟರೊಳಗೆ ಹಲವು ಪುರುಷರು ವಿಭಿನ್ನ ರೀತಿಯಲ್ಲಿ ಬಿಕಿನಿ ಧರಿಸಿ ಬಂದು ಉಚಿತ ಪೆಟ್ರೋಲ್ ತುಂಬಿಸಿಕೊಂಡು ಹೋಗಿದ್ದರು!
Rusyada bir petrol sirketi bikini ile gelene bedava benzin kampanyası yapmış sadece erkekler katılmış ??? pic.twitter.com/wImMtnDY1B
— Hizli (@Hizli067) November 16, 2019
ಅಂತೂ ಬಿಕಿನಿ ಧರಿಸಿದವರಿಗೆ ಮಾತ್ರ ಪುಕ್ಸಟ್ಟೆ ಪೆಟ್ರೋಲ್ ಎಂಬ ಮಾಲೀಕನ ಆಫರ್ ಭರ್ಜರಿಯಾಗಿಯೇ ಪುಕ್ಸಟ್ಟೆ ಪ್ರಚಾರ ಗಿಟ್ಟಿಸಿಕೊಂಡಿದೆ. ಬಿಕಿನಿಡ್ರೆಸ್ ಟ್ವೀಟರ್ ನಲ್ಲಿಯೂ ಟ್ರೆಂಡಿಂಗ್ ಆಗಿತ್ತು. ಪೆಟ್ರೋಲ್ ಗಾಗಿ ಬಿಕಿನಿ ಧರಿಸಿರುವ ಪುರುಷರ ಬಗ್ಗೆ ಹಲವಾರು ಟ್ವೀಟಿಗರು ತಮಾಷೆಯಾಗಿ ಟ್ವೀಟ್ ಮಾಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Meditation; ಜಾಗತಿಕ ಶಾಂತಿ, ಏಕತೆಗೆ ಧ್ಯಾನ ಮುಖ್ಯ ಸಾಧನ: ಶ್ರೀ ಶ್ರೀ ರವಿಶಂಕರ್
Israel ಮೇಲೆ ದಾಳಿಗೆ ಇರಾನ್‌ನಿಂದ ಮಕ್ಕಳ ಬಳಕೆ?
Canada; ಟ್ರಾಡೊ ಸರಕಾರ ಪತನಕ್ಕೆ ಸಿದ್ಧ: ಸಂಸದ ಘೋಷಣೆ
Hala Modi; ಮಿನಿ ಹಿಂದೂಸ್ಥಾನಕ್ಕೆ ಸಾಕ್ಷಿಯಾಗುತ್ತಿದ್ದೇನೆ: ಕುವೈಟ್ ನಲ್ಲಿ ಮೋದಿ
9/11-ಶೈಲಿಯಲ್ಲಿ ರಷ್ಯಾದ ವಸತಿ ಕಟ್ಟಡಗಳ ಮೇಲೆ ಉಕ್ರೇನ್ ನಿಂದ ಸರಣಿ ಡ್ರೋನ್ ದಾಳಿ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.